‘ಬೆಂಕಿ ಬಿರುಗಾಳಿ’ ಖ್ಯಾತಿಯ ಹಿರಿಯ ನಿರ್ದೇಶಕ, ಕಲಾವಿದ ತಿಪಟೂರು ರಘು ನಿಧನ
Tiptur Raghu Death: ರಘು ಅವರಿಗೆ 83 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ (ಮೇ 29) ಮುಂಜಾನೆ ಉಸಿರಾಟದ ಸಮಸ್ಯೆಯಿಂದ ಮೃತರಾದರು.
ಲಾಕ್ಡೌನ್ ಸಮಯದಲ್ಲಿ ಕನ್ನಡ ಚಿತ್ರರಂಗದ ಅನೇಕರು ಸಾವಿನ ಮನೆಯ ಹಾದಿ ಹಿಡಿಯುತ್ತಿದ್ದಾರೆ. ಹಿರಿಯ ನಿರ್ದೇಶಕ ತಿಪಟೂರು ರಘು ಅವರು ಶನಿವಾರ (ಮೇ 29) ನಿಧನರಾಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿ ಅವರು ಫೇಮಸ್ ಆಗಿದ್ದರು. ವಿಷ್ಣುವರ್ಧನ್, ಶಂಕರ್ನಾಗ್ ಮುಂತಾದ ಸ್ಟಾರ್ ನಟರಿಗೆ ತಿಪಟೂರು ರಘು ಆ್ಯಕ್ಷನ್-ಕಟ್ ಹೇಳಿದ್ದರು.
ತಿಪಟೂರು ರಘು ಅವರಿಗೆ 83 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಉಸಿರಾಟದ ಸಮಸ್ಯೆಯಿಂದ ಮೃತರಾದರು ಎಂದು ತಿಳಿದುಬಂದಿದೆ. ಕನ್ನಡ ಚಿತ್ರರಂಗದಲ್ಲಿ ಅವರು ಹಲವು ವರ್ಷಗಳ ಅನುಭವ ಹೊಂದಿದ್ದರು. ನಿರ್ದೇಶನ ಮಾತ್ರವಲ್ಲದೇ ನಟನಾಗಿಯೂ ಗುರುತಿಸಿಕೊಂಡಿದ್ದರು.
ವಿಷ್ಣುವರ್ಧನ್, ಶಂಕರ್ನಾಗ್ ನಟನೆಯ ‘ಬೆಂಕಿ ಬಿರುಗಾಳಿ’, ಬಿ. ಸರೋಜಾ ದೇವಿ, ರಾಮಕೃಷ್ಣ ಅಭಿನಯದ ‘ಲೇಡಿಸ್ ಹಾಸ್ಟೆಲ್’, ವಿಷ್ಣುವರ್ಧನ್, ಜಯಂತಿ, ಜಯಮಾಲಾ ಮುಂತಾದವರು ನಟಿಸಿದ್ದ ‘ನಾಗ ಕಾಳ ಭೈರವ’, ‘ಆಕ್ರೋಶ’, ‘ಕಲ್ಲು ವೀಣೆ ನುಡಿಯಿತು’ ಮುಂತಾದವು ತಿಪಟೂರು ರಘು ಅವರ ಪ್ರಮುಖ ಚಿತ್ರಗಳು. 1965ರಿಂದಲೂ ಅವರು ನಟನಾಗಿ, ಸಹಾಯಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು.
ಇದನ್ನೂ ಓದಿ:
ಸಿನಿಮಾ ತೆರೆಗೆ ಬರುವ ಮೊದಲೇ ಕನ್ನಡದ ಹೀರೋ, ಡೈರೆಕ್ಟರ್ ಇಬ್ಬರೂ ಕೊವಿಡ್ಗೆ ಬಲಿ
Renuka Sharma Death: ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನ