ಅಂಬರೀಷ್​ ಎಲ್ಲಿಯೂ ಹೋಗಿಲ್ಲ, ಅವರು ನಮ್ಮ ಜತೆಯೇ ಇದ್ದಾರೆ; ಸುಮಲತಾ ಭಾವುಕ ನುಡಿ

Ambareesh Birthday: ಅಂಬರೀಷ್​ ನಮ್ಮಿಂದ ದೂರವಾದರೂ ಅವರು ಮಾಡಿದ ಕೆಲಸ, ಸಿನಿಮಾಗಳ ಮೂಲಕ ನಮ್ಮೊಂದಿಗೇ ಇದ್ದಾರೆ ಎನ್ನುವ ಭಾವನೆ ಅಭಿಮಾನಿಗಳದ್ದು. ಸುಮಲತಾ ಕೂಡ ಇದೇ ಮನೋಭಾವ ಹೊಂದಿದ್ದಾರೆ.

ಅಂಬರೀಷ್​ ಎಲ್ಲಿಯೂ ಹೋಗಿಲ್ಲ, ಅವರು ನಮ್ಮ ಜತೆಯೇ ಇದ್ದಾರೆ; ಸುಮಲತಾ ಭಾವುಕ ನುಡಿ
ಸುಮಲತಾ-ಅಂಬರೀಷ್​
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:May 29, 2021 | 9:55 AM

2018ರಂದು ರೆಬೆಲ್​ ಸ್ಟಾರ್​ ಅಂಬರೀಷ್​ ಮೃತಪಟ್ಟಿದ್ದರು. ಇದು ಕರ್ನಾಟಕದ ಜನತೆಗೆ ಆಘಾತ ಉಂಟು ಮಾಡಿತ್ತು. ಅವರು ನಮ್ಮನ್ನು ಅಗಲಿ ಎರಡು ವರ್ಷವೇ ಕಳೆದಿದೆ. ಅವರು ಇಲ್ಲದೆಯೇ ಮೂರನೇ ಬಾರಿಗೆ ಅವರ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಕೊರೊನಾ ಕಾರಣದಿಂದ ಅಂಬರೀಷ್​ ಜನ್ಮದಿನಾಚರಣೆ ಆಚರಿಸಲಾಗುತ್ತಿಲ್ಲ. ಅಂಬರೀಷ್​ ನಮ್ಮಿಂದ ದೂರವಾದರೂ ಅವರು ಮಾಡಿದ ಕೆಲಸ, ಸಿನಿಮಾಗಳ ಮೂಲಕ ನಮ್ಮೊಂದಿಗೇ ಇದ್ದಾರೆ ಎನ್ನುವ ಭಾವನೆ ಅಭಿಮಾನಿಗಳದ್ದು. ಸುಮಲತಾ ಕೂಡ ಇದೇ ಮನೋಭಾವ ಹೊಂದಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಆ ಬಗ್ಗೆ ಮಾತನಾಡಿದ್ದಾರೆ.

 ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು

ಅಂಬರೀಷ್​ ಮೃತಪಟ್ಟ ನಂತರ ಸುಮಲತಾ ಮಂಡ್ಯ ಲೋಕಸಭಾ ಚುನಾವಣೆಗೆ ನಿಂತು ಗೆದ್ದರು. ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಈ ವೇಳೆ ಅವರು ಸಾಕಷ್ಟು ಅವಮಾನಗಳನ್ನು ಕೂಡ ಎದುರಿಸಿದರು. ಈ ಬಗ್ಗೆ ಸುಮಲತಾ ಮಾತನಾಡಿದ್ದಾರೆ.

‘ಅಂಬರೀಷ್​ ಮೃತಪಟ್ಟ ನಂತರ ಒಂದು ವರ್ಷಗಳ ಕಾಲ ನಾನು ಅನುಭವಿಸಿದ ನೋವು ನನಗೆ ಗೊತ್ತು. ಸಾರ್ವಜನಿಕವಾಗಿ ಅದನ್ನು ಹೇಳಿಕೊಂಡು ಡ್ರಾಮಾ ಮಡೋಕೆ ಇಷ್ಟ ಇಲ್ಲ’ ಎಂದಿದ್ದಾರೆ ಸುಮಲತಾ.

‘ನಾನು ಹೋಗುವ ಪ್ರತಿಯೊಂದು ಕಡೆಗಳಲ್ಲೂ ಅಂಬರೀಷ್ ಇದಾರೆ. ನಾನು ನಿತ್ಯ ಭೇಟಿ ಮಾಡುವ ವ್ಯಕ್ತಿ ಅಂಬರೀಷ್​ ಬಗ್ಗೆ ಕಥೆ ಹೇಳುತ್ತಾರೆ. ಅವರನ್ನು ಭೇಟಿ ಮಾಡಿದಾಗ ಯಾವ ರೀತಿ ಇತ್ತು, ಅವರು ನನಗೆ ಸಹಾಯ ಮಾಡಿದ್ದರು ಎಂಬುದನ್ನು ವಿವರಿಸುತ್ತಾರೆ. ಅಂಬರೀಷ್ ಎಲ್ಲೂ ಹೋಗಿಲ್ಲ ಎಂಬುದನ್ನು ಪದೇಪದೇ ಸಾಬೀತು ಮಾಡುತ್ತಿದ್ದಾರೆ. ಅಂಬರೀಷ್​ ಅವರೇ ನನ್ನ ಶಕ್ತಿ. ನಾನು ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಮಾತಿಲ್ಲ. ಅವರು ಇದಾರೆ ಎನ್ನುವ ಧೈರ್ಯ ಇದೆ’ ಎಂದಿದ್ದಾರೆ ಸುಮಲತಾ.

 ಈ ವರ್ಷ ಆಚರಣೆ ಇಲ್ಲ

ಕೊವಿಡ್​ ಸಂಕಷ್ಟದಲ್ಲಿದ್ದೇವೆ. ನಮಗೆ ಸೆಲೆಬ್ರೇಷನ್ ಮಾಡುವ ಉದ್ದೇಶ ಇಲ್ಲ. ಅಂಬರೀಷ್​ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು. ಅದೇರೀತಿ ಮಾಡಬೇಕು ಎನ್ನುವ ಆಸೆ ಇದೆ. ಮುಂದಿನ ವರ್ಷ 70 ವಸಂತವಾಗುತ್ತದೆ. ಒಂದೊಮ್ಮೆ ಕೊರೊನಾ ಮಹಾಮಾರಿ ಹೋದರೆ ಮುಂದಿನ ವರ್ಷ ಏನಾದರೂ ಆಚರಣೆ ಮಾಡಬಹುದು.

ಇದನ್ನೂ ಓದಿ: ಅಂಬರೀಷ್​ ಇಲ್ಲದೆ ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು; ಭಾವುಕರಾದ ಸುಮಲತಾ ಅಂಬರೀಷ್​

ಅಂಬರೀಷ್​ ಜನ್ಮದಿನದಂದು ಯಾವುದೇ ಸಂಭ್ರಮಾಚರಣೆ ಬೇಡ; ಅಭಿಮಾನಿಗಳಿಗೆ ಸುಮಲತಾ ಮನವಿ 

Published On - 7:26 am, Sat, 29 May 21