ರಜನಿಕಾಂತ್ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ ಕಿರುತೆರೆ ನಟಿ
ದೇಶದಲ್ಲಿ ಕೊವಿಡ್ ಸಂಖ್ಯೆ ಹೆಚ್ಚಿರುವುದರಿಂದ ಭಾರತೀಯರಿಗೆ ನೇರವಾಗಿ ಅಮೆರಿಕಕ್ಕೆ ಎಂಟ್ರಿ ಇಲ್ಲ. ಆದಾಗ್ಯೂ ರಜನಿಕಾಂತ್ಗೆ ಅಮೆರಿಕಕ್ಕೆ ತೆರಳೋಕೆ ಅವಕಾಶ ಸಿಕ್ಕಿದೆ. ಇದಕ್ಕೆ ರಜನಿ ಭಾರತ ಸರ್ಕಾರದಿಂದ ವಿಶೇಷ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ.
ನಟ ರಜನಿಕಾಂತ್ ವೈದ್ಯಕೀಯ ಪರೀಕ್ಷೆಗಾಗಿ ಇತ್ತೀಚೆಗೆ ಏಕಾಏಕಿ ಅಮೆರಿಕಕ್ಕೆ ತೆರಳಿದ್ದರು. ಅವರು ವೈದ್ಯಕೀಯ ಪರೀಕ್ಷೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದ್ದವು. ಈಗ ರಜನಿಕಾಂತ್ ಆರೋಗ್ಯದ ಬಗ್ಗೆ ನಟಿ ಕಸ್ತೂರಿ ಶಂಕರ್ ಅವರು ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಜನಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಉತ್ತರ ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ.
ದೇಶದಲ್ಲಿ ಕೊವಿಡ್ ಸಂಖ್ಯೆ ಹೆಚ್ಚಿರುವುದರಿಂದ ಭಾರತೀಯರಿಗೆ ನೇರವಾಗಿ ಅಮೆರಿಕಕ್ಕೆ ಎಂಟ್ರಿ ಇಲ್ಲ. ಆದಾಗ್ಯೂ ರಜನಿಕಾಂತ್ಗೆ ಅಮೆರಿಕಕ್ಕೆ ತೆರಳೋಕೆ ಅವಕಾಶ ಸಿಕ್ಕಿದೆ. ಇದಕ್ಕೆ ರಜನಿ ಭಾರತ ಸರ್ಕಾರದಿಂದ ವಿಶೇಷ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ. ಈ ಎಲ್ಲಾ ಕಾರಣಕ್ಕೆ ಕಸ್ತೂರಿ ಅನುಮಾನ ಹೊರ ಹಾಕಿದ್ದಾರೆ.
‘ಭಾರತದ ಪ್ರಜೆಗಳು ಅಮೆರಿಕಕ್ಕೆ ನೇರವಾಗಿ ಎಂಟ್ರಿ ಪಡೆಯುವುದರ ಮೇಲೆ ಅಲ್ಲಿನ ದೇಶ ನಿರ್ಬಂಧ ಹೇರಿದೆ. ಆದರೆ, ವೈದ್ಯಕೀಯ ಸಮಸ್ಯೆ ಆದರೆ ಮಾತ್ರ ವಿನಾಯತಿ ಇದೆ. ಈ ಸಂದರ್ಭದಲ್ಲಿ ರಜನಿಕಾಂತ್ ಏಕೆ ಮತ್ತು ಹೇಗೆ ಅಮೆರಿಕಕ್ಕೆ ತೆರಳಿದರು. ಅವರು ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿದಿದ್ದರು. ಈಗ ಅವರು ಅಮೆರಿಕಕ್ಕೆ ತೆರಳಿದ ವಿಚಾರ ಅನುಮಾನ ಹುಟ್ಟು ಹಾಕಿದೆ. ರಜನಿ ಸರ್ ದಯವಿಟ್ಟು ಇದನ್ನು ಸ್ಪಷ್ಟಪಡಿಸಿ’ ಎಂದು ಕಸ್ತೂರಿ ಕೇಳಿದ್ದಾರೆ.
‘ಸಾಮಾನ್ಯ ವೈದ್ಯಕೀಯ ಪರೀಕ್ಷೆಗೆ ರಜನಿ ಅಮೆರಿಕಕ್ಕೆ ಹೋಗಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಭಾರತದಲ್ಲಿ ಸಿಗದೆ ಇರುವ ಈ ಚಿಕಿತ್ಸೆ ಅಮೆರಿಕದಲ್ಲಿ ಸಿಗುತ್ತಿದೆಯೇ? ರಜನಿಕಾಂತ್ ಅಮೆರಿಕಕ್ಕೆ ತೆರಳಿದ್ದು ಒಂದು ಮಿಸ್ಟರಿ ರೀತಿಯಲ್ಲಿ ಕಾಣಿಸುತ್ತಿದೆ. ರಜನಿ ತೆರಳಿರುವ ಮಾಯೊ ಕ್ಲೀನಿಕ್ ಹೃದಯಕ್ಕೆ ಸಂಬಂಧಿಸಿದ ಆಸ್ಪತ್ರೆ. ನಾನು ಹೆಚ್ಚು ಆಲೋಚನೆ ಮಾಡಿದಷ್ಟು ಕೆಟ್ಟದಾಗಿ ಕಾಣುತ್ತಿದೆ ಎಂದು ಅವರು ಆತಂಕ ಹೊರ ಹಾಕಿದ್ದಾರೆ.
‘ಅಣ್ಣಾಥೆ’ ಸಿನಿಮಾದ ಚಿತ್ರೀಕರಣಕ್ಕಾಗಿ ರಜನಿಕಾಂತ್ ಏಪ್ರಿಲ್ನಲ್ಲಿ ಹೈದರಾಬಾದ್‌ಗೆ ತೆರಳಿದ್ದರು. ಒಂದು ತಿಂಗಳು ನಿರಂತರವಾಗಿ ಅವರು ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ.
ಇದನ್ನೂ ಓದಿ:ಕೊವಿಡ್ ಇಳಿಮುಖ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ರಜನಿಕಾಂತ್; ಕಾರಣ ಏನು?
Published On - 6:32 pm, Mon, 28 June 21