AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಯರ ಜೊತೆ ಬಿಗ್​ ಬಾಸ್​ ಸ್ಪರ್ಧಿಯ ಡ್ರಗ್ಸ್​ ಪಾರ್ಟಿ; ಪೊಲೀಸರ ಬಲೆಗೆ ಬಿದ್ದ 22 ಮಂದಿ

Drug Case: ರೇವ್​ ಪಾರ್ಟಿಯಲ್ಲಿ ಡ್ರಗ್ಸ್​ ಮತ್ತು ಹುಕ್ಕಾ ಸೇವಿಸಿರುವುದು ಗೊತ್ತಾಗಿದೆ. ಎಲ್ಲರೂ ಐಷಾರಾಮಿ ಕಾರಿನಲ್ಲಿ ಬಂದಿದ್ದರು. ಮಾದಕ ವಸ್ತು ಜತೆಗೆ ಕ್ಯಾಮರಾ, ಟ್ರೈಪಾಡ್​ ಮುಂತಾದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಟಿಯರ ಜೊತೆ ಬಿಗ್​ ಬಾಸ್​ ಸ್ಪರ್ಧಿಯ ಡ್ರಗ್ಸ್​ ಪಾರ್ಟಿ; ಪೊಲೀಸರ ಬಲೆಗೆ ಬಿದ್ದ 22 ಮಂದಿ
ರೇವ್​ ಪಾರ್ಟಿ ನಡೆದ ಸ್ಥಳ
ಮದನ್​ ಕುಮಾರ್​
|

Updated on: Jun 28, 2021 | 1:32 PM

Share

ಮಾದಕ ವಸ್ತು ಸೇವನೆ ವಿಚಾರದಲ್ಲಿ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಸಿಕ್ಕಿಬಿದ್ದಿದ್ದಾರೆ. ಈಗ ಪೊಲೀಸರು ಮತ್ತೊಂದು ದಾಳಿ ನಡೆಸಿದ್ದು, ಒಟ್ಟು 22 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ದಕ್ಷಿಣ ಭಾರತದ ನಾಲ್ವರು ನಟಿಯರು ಹಾಗೂ ಓರ್ವ ಬಿಗ್​ ಬಾಸ್​ ಸ್ಪರ್ಧಿ ಕೂಡ ಇದ್ದಾಳೆ ಎಂಬುದು ತಿಳಿದುಬಂದಿದೆ. ಚಿತ್ರರಂಗದ ಪಾಲಿಗೆ ಇದು ಶಾಕಿಂಗ್​ ಸುದ್ದಿ. ಕಳೆದ ವರ್ಷವಷ್ಟೇ ಸಿನಿಮಾ ಕ್ಷೇತ್ರದ ಅನೇಕರು ಡ್ರಗ್ಸ್​ ಜಾಲದಲ್ಲಿ ಬಂಧಿಸಲ್ಪಟ್ಟಿದ್ದರು. ಈಗ ಮತ್ತೆ ಅನೇಕರ ಮೇಲೆ ಕಳಂಕ ಅಂಟಿಕೊಂಡಿದೆ.

ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ಭಾನುವಾರ (ಜೂ.27) ಮುಂಜಾನೆ ಈ ಘಟನೆ ನಡೆದಿದೆ. ಅಕ್ಕಪಕ್ಕದ ಎರಡು ಮನೆಗಳಲ್ಲಿ ರೇವ್​ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದರು. ದಾಳಿ ಸ್ಥಳದಲ್ಲಿ ಡ್ರಗ್ಸ್​ ಮತ್ತು ಹುಕ್ಕಾ ವಶಪಡಿಸಿಕೊಳ್ಳಲಾಗಿದೆ. 12 ಮಹಿಳೆಯರು ಮತ್ತು 10 ಪುರುಷರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇವರು ರೇವ್​ ಪಾರ್ಟಿಯಲ್ಲಿ ಡ್ರಗ್ಸ್​ ಮತ್ತು ಹುಕ್ಕಾ ಸೇವಿಸಿರುವುದು ಗೊತ್ತಾಗಿದೆ. ಎಲ್ಲರೂ ಐಷಾರಾಮಿ ಕಾರಿನಲ್ಲಿ ಬಂದಿದ್ದರು. ಈ ಪಾರ್ಟಿ ಆಯೋಜನೆ ಮಾಡಲು ಸಹಕಾರ ನೀಡಿದವರಿಗಾಗಿಯೂ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ. ರೇವ್​ ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ದ್ರವ್ಯ ಮಾತ್ರವಲ್ಲದೆ ಕ್ಯಾಮರಾ, ಟ್ರೈಪಾಡ್​ ಮುಂತಾದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮುಂಬೈನಿಂದ 120 ಕಿಲೋ ಮೀಟರ್​ ದೂರ ಇರುವ ಗ್ರಾಮವೊಂದರಲ್ಲಿ ಈ ರೇವ್​ ಪಾರ್ಟಿ ನಡೆಯುತ್ತಿತ್ತು. ಈ ಕೇಸ್​ನಲ್ಲಿ ನೈಜೀರಿಯಾ ಪ್ರಜೆಯೊಬ್ಬರಿಗೆ ಸಂಬಂಧ ಕಂಡುಬಂದಿರುವುದರಿಂದ ವಿಶೇಷ ತನಿಖಾ ತಂಡ ರಚಿಸಿ, ಮುಂಬೈಗೆ ಕಳಿಸಲಾಗಿದೆ. ಸದ್ಯ ಬಂಧನಕ್ಕೆ ಒಳಗಾಗಿರುವ ಆ 22 ಮಂದಿ ಯಾರು? ನಟಿಯರ ಹೆಸರೇನು? ಬಿಗ್​ ಬಾಸ್​ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಕಳೆದ ವರ್ಷ ಕನ್ನಡದ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಅವರನ್ನು ಪೊಲೀಸರು ಬಂಧಿಸಿದ್ದರು. ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಕೂಡ ಜೈಲು ಸೇರಿದ್ದರು. ಬಳಿಕ ಈ ನಟಿಯರು ಜಾಮೀನು ಪಡೆದು ಹೊರಬಂದರು. ಅಲ್ಲದೆ, ಅನೇಕ ಬಾಲಿವುಡ್​ ನಟಿಯರನ್ನು ಈ ಸಂಬಂಧ ವಿಚಾರಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ:

ಸುಶಾಂತ್ ಜತೆ ಅವರ ಅಕ್ಕ-ಭಾವನೂ ಡ್ರಗ್ಸ್​ ಸೇವಿಸಿದ್ದಾರೆ; ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ರಿಯಾ ಚಕ್ರವರ್ತಿ

ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ