ನಟಿ ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ನಿಧನ; 49 ವರ್ಷಕ್ಕೇ ಬದುಕು ಮುಗಿಸಿದ ಬಾಲಿವುಡ್ ಸಿನಿಮಾ ನಿರ್ಮಾಪಕ

Raj Kaushal: ರಾಜ್​ಕೌಶಲ್​​ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೆಲಸ ಮಾಡಿದವರು. ಪ್ಯಾರ್​ ಮೇನ್​ ಕಭಿ ಕಭಿ, ಶಾದಿ ಕಾ ಲಡ್ಡೂ ಮತ್ತು ಅಂಥೋನಿ ಕೌನ್​ ಹೈ ಎಂಬ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ನಟಿ ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ನಿಧನ; 49 ವರ್ಷಕ್ಕೇ ಬದುಕು ಮುಗಿಸಿದ ಬಾಲಿವುಡ್ ಸಿನಿಮಾ ನಿರ್ಮಾಪಕ
ನಟಿ ಮಂದಿರಾ ಬೇಡಿ ಮತ್ತು ಆಕೆಯ ಪತಿ ರಾಜ್​ ಕೌಶಲ್​
Follow us
TV9 Web
| Updated By: Lakshmi Hegde

Updated on: Jun 30, 2021 | 1:15 PM

ಬಾಲಿವುಡ್​ ನಟಿ ಮಂದಿರಾ ಬೇಡಿ ಪತಿ, ಸಿನಿಮಾ ನಿರ್ಮಾಪಕ ರಾಜ್​ ಕೌಶಲ್​ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಸುದ್ದಿಯನ್ನು ರಾಜ್​ ಕೌಶಲ್​​ರೊಂದಿಗೆ ಕೆಲಸ ಮಾಡುತ್ತಿದ್ದ ನಿರ್ದೇಶಕ ಒನಿರ್​ ದೃಢಪಡಿಸಿದ್ದಾರೆ. ರಾಜ್​ ಕೌಶಲ್​​ಗೆ 49ವರ್ಷ ವಯಸ್ಸಾಗಿತ್ತು. ನಟನಾಗಿ ವೃತ್ತಿ ಜೀವನ ಶುರು ಮಾಡಿದ್ದ ಇವು, ಮೂರು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. 1999ರಲ್ಲಿ ಮಂದಿರಾ ಬೇಡಿಯನ್ನು ವಿವಾಹವಾಗಿದ್ದರು. ಈ ದಂಪತಿಗೆ ವೀರ್​ ಮತ್ತು ತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಟ್ವೀಟ್ ಮಾಡಿರುವ ನಿರ್ದೇಶಕ ಒನಿರ್​, ನಾವು ಸಿನಿಮಾ ನಿರ್ಮಾಪಕ, ನಿರ್ದೇಶಕ ರಾಜ್​​ಕೌಶಲ್​​ರನ್ನು ಇಂದು ಮುಂಜಾನೆ ಕಳೆದುಕೊಂಡಿದ್ದೇವೆ. ತುಂಬ ಬೇಗನೇ ಹೋಗಿಬಿಟ್ಟರು ಎಂದು ದುಃಖ ವ್ಯಕ್ತಪಡಿಸಿದ್ದಾರೆ. ನನ್ನ ಮೈ ಬ್ರದರ್​ ನಿಖಿಲ್​ ಸಿನಿಮಾದ ನಿರ್ಮಾಪಕರಲ್ಲಿ ರಾಜ್​ ಕೌಶಲ್​ ಕೂಡ ಒಬ್ಬರಾಗಿದ್ದರು. ನನ್ನನ್ನು ನಂಬಿ, ಬೆಂಬಲಿಸಿದ ಕೆಲವೇ ಮಂದಿಯಲ್ಲಿ ಇವರೂ ಒಬ್ಬರಾಗಿದ್ದರು ಎಂದು ಒನಿರ್​ ಹೇಳಿದ್ದಾರೆ. ಮುಂಜಾನೆ 4.30ರ ಹೊತ್ತಲ್ಲಿ ಮನೆಯಲ್ಲೇ ಇದ್ದಾಗ ಹೃದಯಾಘಾತ ಆಗಿದ್ದಾಗಿ ಅವರ ಕುಟುಂಬದ ಸ್ನೇಹಿತರಾದ ರೋಹಿತ್​ ರಾಯ್ ತಿಳಿಸಿದ್ದಾರೆ.

ರಾಜ್​ಕೌಶಲ್​​ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೆಲಸ ಮಾಡಿದವರು. ಪ್ಯಾರ್​ ಮೇನ್​ ಕಭಿ ಕಭಿ, ಶಾದಿ ಕಾ ಲಡ್ಡೂ ಮತ್ತು ಅಂಥೋನಿ ಕೌನ್​ ಹೈ ಎಂಬ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 2006ರಲ್ಲಿ ಥ್ರಿಲ್ಲರ್​ ಸಿನಿಮಾ ಅಂಥೋನಿ ಕೌನ್​ ಹೈ ನಿರ್ದೇಶನ ಮಾಡಿದ ಬಳಿಕ ಮತ್ತೆ ಯಾವುದೇ ಸಿನಿಮಾವನ್ನೂ ನಿರ್ದೇಶನ ಮಾಡಲಿಲ್ಲ. ನಂತರ ಸಿನಿಮಾ ನಿರ್ಮಾಣ ಶುರು ಮಾಡಿದ್ದರು. ಕೌಶಲ್​ ಮತ್ತು ಮಂದಿರಾ ಬೇಡಿ 1999ರಲ್ಲಿ ಮದುವೆಯಾಗಿದ್ದಾರೆ. 2011ರಲ್ಲಿ ಮೊದಲ ಮಗು ಹುಟ್ಟಿದ್ದು ಅವನಿಗೆ ವೀರ್​ ಎಂದು ನಾಮಕರಣ ಮಾಡಲಾಗಿದೆ. ನಂತರ ಕಳೆದ ವರ್ಷ ಮಗಳನ್ನು ದತ್ತು ತೆಗೆದುಕೊಂಡಿದ್ದು, ಆಕೆಗೆ ತಾರಾ ಬೇಡಿ ಕೌಶಲ್​ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: Dilip Kumar: ಬಾಲಿವುಡ್​ ಖ್ಯಾತ ನಟ ದಿಲೀಪ್​ ಕುಮಾರ್​ ಮತ್ತೆ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ

(Actress Mandira Bedis husband, producer Raj Kaushal dies In Mumbai)

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್