ಚಕ್ರವರ್ತಿ-ಪ್ರಶಾಂತ್​ ಜಗಳದಲ್ಲಿ ಕೇಳಿದ್ದು ಕೇವಲ ಬೀಪ್​ ಶಬ್ದಗಳು

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕ್ಲೋಸ್​ ಆಗಿದ್ದಾರೆ. ಈಗ ಕ್ಯಾಪ್ಟನ್​ ಆಗಿರುವ ದಿವ್ಯಾ ಪ್ರತೀ ಟಾಸ್ಕ್​​ನಲ್ಲಿ ಅರವಿಂದ್ ಪರ ವಹಿಸಿಕೊಂಡು ಮಾತನಾಡುತ್ತಾರೆ ಎನ್ನುವ ಆರೋಪ ಇದೆ.

ಚಕ್ರವರ್ತಿ-ಪ್ರಶಾಂತ್​ ಜಗಳದಲ್ಲಿ ಕೇಳಿದ್ದು ಕೇವಲ ಬೀಪ್​ ಶಬ್ದಗಳು
ಚಕ್ರವರ್ತಿ ಚಂದ್ರಚೂಡ್​-ಪ್ರಶಾಂತ್​ ಸಂಬರಗಿ
Follow us
| Updated By: ಮದನ್​ ಕುಮಾರ್​

Updated on: Jul 09, 2021 | 7:24 AM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ರ ಎರಡನೇ ಇನ್ನಿಂಗ್ಸ್​ನಲ್ಲಿ ಮನೆ ಎರಡು ಭಾಗವಾಗಿದೆ. ಸದಾ ಗುಂಪುಗಾರಿಕೆ ಎನ್ನುವ ಆರೋಪ ಹೊರಿಸುತ್ತಿದ್ದ ಪ್ರಶಾಂತ್​ ಸಂಬರಗಿ ಅವರೇ ಗುಂಪೊಂದನ್ನು ಕಟ್ಟಿದ್ದಾರೆ. ಪ್ರಶಾಂತ್​, ಚಕ್ರರ್ತಿ ಚಂದ್ರಚೂಡ್​ ಹಾಗೂ ಶಮಂತ್​ ಈ ಗುಂಪಿನ ಸದಸ್ಯರು. ಇವರು ಮನೆಯ ಮೊದಲ ಮಹಿಳಾ ಕ್ಯಾಪ್ಟನ್​ ದಿವ್ಯಾ ಉರುಡುಗ ವಿರುದ್ಧ ತಿರುಗಿ ಬೀಳೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಇವರ ನಡುವೆಯೇ ಈಗ ಬಿರುಕು ಕಾಣಿಸಿಕೊಂಡಿದೆ.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕ್ಲೋಸ್​ ಆಗಿದ್ದಾರೆ. ಈಗ ಕ್ಯಾಪ್ಟನ್​ ಆಗಿರುವ ದಿವ್ಯಾ ಪ್ರತೀ ಟಾಸ್ಕ್​​ನಲ್ಲಿ ಅರವಿಂದ್ ಪರ ವಹಿಸಿಕೊಂಡು ಮಾತನಾಡುತ್ತಾರೆ ಎನ್ನುವ ಆರೋಪ ಇದೆ. ಜುಲೈ 8ರ ಎಪಿಸೋಡ್​ನಲ್ಲೂ ಹೀಗೆಯೇ ಆಗಿದೆ. ಟಂಕಶಾಲೆ ಹೆಸರಿನ ಟಾಸ್ಕ್​ನಲ್ಲಿ ಶಮಂತ್​ ತನಗೆ ಮೋಸ ಆಗಿದೆ ಎಂದು ಆರೋಪಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಏರು ಧ್ವನಿಯಲ್ಲೇ ಮಾತನಾಡಿದರು. ಆದರೆ, ಅರವಿಂದ್ ಪರ ಪ್ರಶಾಂತ್​​ ಮಾತನಾಡಿಲ್ಲ.

ಇದಾದ ಬೆನ್ನಲ್ಲೇ ಅರವಿಂದ್​ ಅವರಿಂದ ರಘುಗೆ ಮೋಸ ಆಗಿದೆ ಎನ್ನುವ ವಿಚಾರವನ್ನು ಪ್ರಶಾಂತ್​ ಪ್ರಸ್ತಾಪಪಡಿಸಿದರು. ಈ ವಿಚಾರ ಅಷ್ಟು ಪ್ರಭಾವ ಬೀರಿಲ್ಲ. ಈ ಬಗ್ಗೆ ಚಕ್ರವರ್ತಿ ಅವರು ಪ್ರಶಾಂತ್​ಗೆ ಬುದ್ಧಿವಾದ ಹೇಳಿದರು. ‘ಬಿಗ್​ ಬಾಸ್​ ಮನೆಯಲ್ಲಿ ಉಳಿದವರೆಲ್ಲರೂ ಒಂದು. ನಾವಿಬ್ಬರೇ ಬೇರೆ. ನಿನ್ನ ಅಡ್ವೈಸ್​ಗಳನ್ನು ಎಲ್ಲರೂ ಹೇಳಿಕೊಂಡು ನಗುತ್ತಾರೆ. ಇಡೀ ಮನೆಯಲ್ಲಿ ನಾನು-ನೀನು ಹೋದರೆ ಸಾಕು ಎಂಬಂತಾಗಿದೆ’ ಎಂದು ಬಣ್ಣಿಸೋಕೆ ಹೋದರು.

ಇದಾದ ಬೆನ್ನಲ್ಲೇ ಚಕ್ರವರ್ತಿ ಹಾಗೂ ಪ್ರಶಾಂತ್​ ನಡುವೆ ಕಿತ್ತಾಟ ಆರಂಭವಾಯಿತು. ಪ್ರಶಾಂತ್ ಸಂಬರಗಿ ಮುಂದೊಂದು ಹಿಂದೊಂದು ಮಾಡುತ್ತಾರೆ ಎಂದು ಚಕ್ರವರ್ತಿ ಆರೋಪಿಸಿದರು. ಇಬ್ಬರ ಜಗಳ ತಾರಕಕ್ಕೇರಿತ್ತು. ಕೆಲ ಸಮಯಗಳ ಕಾಲ ಇಬ್ಬರು ನಡುವೆ ಬಳಕೆ ಆದ ಶಬ್ದಗಳಿಗೆ ಬಿಗ್​ ಬಾಸ್​ ಬೀಪ್​ ಹಾಕಿದ್ದರು.

‘ಪ್ರಶಾಂತ್ ಸರ್​ ನಾನು ನಿಮ್ಮೊಂದಿಗೆ ಇನ್ನು ಮಾತನ್ನೇ ಆಡುವುದಿಲ್ಲ. ನೀನು ಮಾಡಿರೋದು ತಪ್ಪಾದ ಕೆಲಸ. ಗೆಳೆಯರ ನಡುವೆ ನಡೆದ ಮಾತನ್ನು ಮೂರನೇಯವನಿಗೆ ಹೇಳೋದು ದ್ರೋಹದ ಕೆಲಸ’ ಎಂದು ಹೇಳುವ ಮೂಲಕ ಪ್ರಶಾಂತ್​ ಜತೆ ಮಾತನಾಡುವುದಿಲ್ಲ ಎಂದರು ಚಕ್ರವರ್ತಿ.

ಇದನ್ನೂ ಓದಿ:

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

‘ನಾನು ಒಬ್ಬ ಅಪ್ಪ-ಅಮ್ಮನಿಗೆ ಹುಟ್ಟಿದೀನಿ, ಸರಿಯಾಗಿ ನಡ್ಕೋತೀನಿ’; ಪ್ರಶಾಂತ್​-ಚಕ್ರವರ್ತಿ ಮಧ್ಯೆ ಮತ್ತೆ ಹತ್ತಿತು ದ್ವೇಷದ ಬೆಂಕಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ