ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗೋಕೆ ಒಂದೊಂದು ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್​ನ ಮೇಲುಸ್ತುವಾರಿ ಹೊತ್ತಿದ್ದಾರೆ ದಿವ್ಯಾ ಉರುಡುಗ. ಪ್ರತಿ ಟಾಸ್ಕ್​ ಗೆದ್ದವರಿಗೆ ಪಾಯಿಂಟ್ಸ್​ ಸಿಗುತ್ತಾ ಹೋಗುತ್ತದೆ.

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ
ದಿವ್ಯಾ ಉರುಡುಗ
Follow us
| Updated By: ಮದನ್​ ಕುಮಾರ್​

Updated on: Jul 07, 2021 | 7:16 AM

ಅರವಿಂದ್ ಕೆ.ಪಿ. ಹಾಗೂ ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಕ್ಲೋಸ್​ ಆಗಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟು ಇರೋಕೆ ಸಾಧ್ಯವಿಲ್ಲ ಎಂಬಷ್ಟು ಬಾಂಧವ್ಯ ಇಬ್ಬರ ನಡುವೆ ಬೆಳೆದಿದೆ. ಆದರೆ, ಇದು ಟಾಸ್ಕ್​ ಮೇಲೂ ಪ್ರಭಾವ ಬೀರುತ್ತಿದೆಯೇ ಎನ್ನುವ ಅನುಮಾನ ಮನೆಯವರಲ್ಲಿ ಮೂಡಿದೆ.

ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗೋಕೆ ಬಿಗ್​ ಬಾಸ್​ ಮನೆಯಲ್ಲಿ ಒಂದು ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ನ ಮೇಲುಸ್ತುವಾರಿ ಕ್ಯಾಪ್ಟನ್​ ದಿವ್ಯಾ ಉರುಡುಗ ಅವರಿಗೆ ನೀಡಲಾಗಿತ್ತು. ಪ್ರತಿ ಟಾಸ್ಕ್​ ಗೆದ್ದವರಿಗೆ ಪಾಯಿಂಟ್ಸ್​ ಸಿಗುತ್ತಾ ಹೋಗುತ್ತದೆ. ಯಾರ ಬಳಿ ಹೆಚ್ಚು ಪಾಯಿಂಟ್ಸ್​ ಇರುತ್ತದೆಯೋ ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹರಾಗುತ್ತಾರೆ.

ಇತ್ತೀಚೆಗಿನ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡಲಾಗಿತ್ತು, ಅದುವೇ ಜಲ ಚಕ್ರ. ಈ ಟಾಸ್ಕ್​ನ ಅನುಸಾರ, ಎಲ್ಲರೂ ಗಾರ್ಡನ್​ ಏರಿಯಾದಲ್ಲಿ ವೃತ್ತಾಕಾರದಲ್ಲಿ ಕೂರಬೇಕು. ಮಧ್ಯದಲ್ಲಿ ಹಗ್ಗಕ್ಕೆ ಕಟ್ಟಿದ ನೀರು ತುಂಬಿದ ಬಲೂನ್​ಅನ್ನು ಕ್ಯಾಪ್ಟನ್​ ತೂಗಿ ಬಿಡುತ್ತಾರೆ. ಇದು ಯಾರ ದೇಹಕ್ಕೆ ತಾಗುತ್ತದೆಯೋ ಅವರು ಔಟ್​. ಅಂದಹಾಗೆ, ಇಲ್ಲಿ ಪ್ರತಿ ಸ್ಪರ್ಧಿಯ ಕಣ್ಣಿಗೆ ಪಟ್ಟಿ ಕಟ್ಟಲಾಗುತ್ತದೆ.

ಈ ಆಟದಲ್ಲಿ ಒಬ್ಬೊಬ್ಬೋರಾಗಿ ಔಟ್​ ಆಗುತ್ತಾ ಬಂದರು. ಕೊನೆಯಲ್ಲಿ ಉಳಿದುಕೊಂಡಿದ್ದು ಚಕ್ರವರ್ತಿ ಹಾಗೂ ಅರವಿಂದ್. ಇಬ್ಬರ ನಡುವೆ ಆಟ ನಡೆಯುವಾಗ ಚಕ್ರವರ್ತಿ ಫೌಲ್​ ಎಂದು ದಿವ್ಯಾ ಉರುಡುಗ ಘೋಷಣೆ ಮಾಡಿದರು. ಹೀಗಾಗಿ, ಒಂದು ಕ್ಷಣ ಚಕ್ರವರ್ತಿ ಗಾಬರಿಗೊಳಗಾದರು. ಈ ವೇಳೆ ಆ ಬಾಲ್​ ಆಕಾರದ ವಸ್ತು ಬಂದು ಇವರಿಗೆ ತಾಗಿದೆ. ಈ ಮೂಲಕ ಅರವಿಂದ್ ಗೆದ್ದಿದ್ದಾರೆ.

ದಿವ್ಯಾ ಫೌಲ್​ ಎಂದು ಘೋಷಿಸಿದ್ದಕ್ಕೆ ನಿಂತೆ ಎಂದು ಚಕ್ರವರ್ತಿ ಹೇಳಿದರು. ಆಗ ದಿವ್ಯಾ, ನಾನು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ. ನಾನು ನಿಯಮ ಪಾಲಿಸಿದ್ದೇನೆ ಅಷ್ಟೇ ಎಂದು ಹೇಳುವ ಮೂಲಕ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಅರವಿಂದ್ ಅವರನ್ನು ಗೆಲ್ಲಿಸುವ ಉದ್ದೇಶದಿಂದ ದಿವ್ಯಾ ಈ ರೀತಿ ಮಾಡಿದರು ಎನ್ನುವ ಬಗ್ಗೆ ಚರ್ಚೆ ನಡೆದಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್​ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ

ಅಂಡಾಣು ಶೇಖರಣೆ ಪ್ರಕ್ರಿಯೆಗೆ ಒಳಗಾದ ನಂತರ ಎದುರಾದ ತೊಂದರೆಗಳನ್ನು ಹೇಳಿಕೊಂಡ ಬಿಗ್​ ಬಾಸ್​ ಸ್ಪರ್ಧಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ