ಅಂಡಾಣು ಶೇಖರಣೆ ಪ್ರಕ್ರಿಯೆಗೆ ಒಳಗಾದ ನಂತರ ಎದುರಾದ ತೊಂದರೆಗಳನ್ನು ಹೇಳಿಕೊಂಡ ಬಿಗ್ ಬಾಸ್ ಸ್ಪರ್ಧಿ
ನಟಿ ತನೀಶಾ ಮುಖರ್ಜಿ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ವಯಸ್ಸು 43 ಆದರೂ ವಿವಾಹವಾಗುವ ಆಲೋಚನೆ ಮಾಡಿಲ್ಲ. ಅವರು ತಮ್ಮ 39ನೇ ವಯಸ್ಸಿಗೆ ಅಂಡಾಣು ಸಂರಕ್ಷಣೆ (ಎಗ್ ಫ್ರೀಜಿಂಗ್) ಪ್ರಕ್ರಿಯೆಗೆ ಒಳಗಾಗಿದ್ದರು.
ನಟಿ ತನೀಶಾ ಮುಖರ್ಜಿ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ವಯಸ್ಸು 43 ಆದರೂ ವಿವಾಹವಾಗುವ ಆಲೋಚನೆ ಮಾಡಿಲ್ಲ. ಅವರು ತಮ್ಮ 39ನೇ ವಯಸ್ಸಿಗೆ ಅಂಡಾಣು ಸಂರಕ್ಷಣೆ (ಎಗ್ ಫ್ರೀಜಿಂಗ್) ಪ್ರಕ್ರಿಯೆಗೆ ಒಳಗಾಗಿದ್ದರು. ಇದಾದ ನಂತರದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದೆ ಎಂದು ತನೀಶಾ ಹೇಳಿದ್ದಾರೆ.
‘ನನಗೆ ಮಗು ಪಡೆಯೋಕೆ ಇಷ್ಟವಿರಲಿಲ್ಲ. ಆಗ ನನಗೆ ಎಗ್ ಫ್ರೀಂಜಿಗ್ ಬಗ್ಗೆ ಮಾಹಿತಿ ದೊರೆಯಿತು. ನಾನು 33ನೇ ವಯಸ್ಸಿಗೆ ಈ ಪ್ರಕ್ರಿಯೆಗೆ ಒಳಗಾಗೋಕೆ ಮುಂದಾಗಿದ್ದೆ. ಆದರೆ, ವೈದ್ಯರು ಇದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ, ನಾನು 39ನೇ ವಯಸ್ಸಿಗೆ ಈ ಪ್ರಕ್ರಿಯೆಗೆಗೆ ಒಳಗಾದೆ’ ಎಂದು ಅವರು ಹೇಳಿಕೊಂಡಿದ್ದಾರೆ.
‘ಅಂಡಾಣು ಶೇಖರಣೆ ಪ್ರಕ್ರಿಯೆಗೆ ಒಳಗಾದ ನಂತರದಲ್ಲಿ ನನ್ನ ದೇಹದ ತೂಕ ಮಿತಿಮೀರಿ ಏರಿಕೆ ಕಂಡಿತ್ತು. ಈ ಪ್ರಕ್ರಿಯೆಯಿಂದ ದೇಹದಲ್ಲಿ ಸಾಕಷ್ಟು ಹಾರ್ಮೋನ್ಗಳು ಉತ್ಪತ್ತಿ ಆಗುತ್ತವೆ. ಇದರಿಂದ ದೇಹ ಉಬ್ಬಿಕೊಳ್ಳುತ್ತದೆ. ದೇಹದ ತೂಕ ಏರುವುದು ಮಾತ್ರವಲ್ಲ ನನ್ನ ಮುಖ ಗುಂಡಾಗಿತ್ತು. ಇದರಿಂದ ನನ್ನ ಸೌಂದರ್ಯ ಹೆಚ್ಚಿದಂತೆ ಅನಿಸಿತ್ತು. ನನಗೆ ಈ ಬಗ್ಗೆ ಬೇಸರ ಇಲ್ಲ. ನಾನು ಇಂದು ಖುಷಿಯಾಗಿದ್ದೇನೆ. ಮಗು ಇಲ್ಲ ಎನ್ನುವ ಕೊರಗು ನನಗಿಲ್ಲ. ಮದುವೆ ಆಗದೆ ಇರುವುದಕ್ಕೆ ಯಾವುದೇ ಬೇಸರ ಇಲ್ಲ. ಜಗತ್ತಿನಲ್ಲಿ ಸಾಕಷ್ಟು ಅನಾಥ ಮಕ್ಕಳಿದ್ದಾರೆ. ಮಗು ಇಲ್ಲದವರು ಅವರನ್ನು ದತ್ತು ಪಡೆದುಕೊಳ್ಳಲಿ’ ಎಂದಿದ್ದಾರೆ ಅವರು.
ಅಂಡಾಣು ಸಂರಕ್ಷಣೆಗೆ ಎಗ್ ಫ್ರೀಜಿಂಗ್ ಎಂದು ಕರೆಯಲಾಗುವುದು. ಗಟ್ಟಿಮುಟ್ಟಾಗಿರುವಾಗ ಅಂಡಾಣುವನ್ನು ಮಹಿಳೆಯ ದೇಹದಿಂದ ಹೊರತೆಗೆದು ವೈದ್ಯಕೀಯ ಲ್ಯಾಬ್‌ನಲ್ಲಿ ಅದನ್ನು ಶೈತ್ಯೀಕರಿಸಲಾಗುತ್ತದೆ. ಈ ಪ್ರಕ್ರಿಯೆಗೆ ಅಂಡಾಣು ಸಂರಕ್ಷಣೆ ಎನ್ನಲಾಗುತ್ತದೆ. ವರ್ಷಗಟ್ಟಲೇ ಈ ಅಂಟಾಣುವನ್ನು ಶೇಖರಿಸಿಡಬಹುದು. ಗರ್ಭ ಧರಿಸಬೇಕು ಎನಿಸಿದಾಗ ಈ ಅಂಡಾಣು ಬಳಕೆ ಮಾಡಿಕೊಳ್ಳಲಾಗುತ್ತದೆ.
2003ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದ ‘ಶ್..’ ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಟ್ಟರು ತನೀಶಾ. 2007ರಲ್ಲಿ ತಮಿಳು ಚಿತ್ರರಂಗಕ್ಕೂ ಅವರು ಪದಾರ್ಪಣೆ ಮಾಡಿದರು. ತನೀಶಾ ‘ಹಿಂದಿ ಬಿಗ್ ಬಾಸ್ 7’ರ ರನ್ನರ್ ಅಪ್ ಆಗಿದ್ದರು. ಬಿಗ್ ಬಾಸ್ 10 ಹಾಗೂ 11ರಲ್ಲಿ ಅತಿಥಿಯಾಗಿ ತನೀಶಾ ದೊಡ್ಮನೆ ಪ್ರವೇಶಿಸಿದ್ದರು.
ಇದನ್ನೂ ಓದಿ:
ಹಿರಿಯ ನಟಿ ವಿರುದ್ಧ ಗಂಭೀರ ಆರೋಪ ಮಾಡಿದ ಬಿಗ್ ಬಾಸ್ ಸ್ಪರ್ಧಿ; ರಿಯಾಲಿಟಿ ಶೋದಿಂದ ಹೊರ ಬರುವ ನಿರ್ಧಾರ