AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lunar Eclipse 2026: ಗ್ರಹಣ ಕಾಲದಲ್ಲಿ ಅನುಸರಿಸಬೇಕಾದ ನಿಯಮ ಮತ್ತು ಪರಿಹಾರ ಕ್ರಮಗಳ ಮಾಹಿತಿ ಇಲ್ಲಿದೆ

ಹೋಳಿ ಹುಣ್ಣಿಮೆಯಂದು ಸಂಭವಿಸುವ ಚಂದ್ರಗ್ರಹಣದ ಕುರಿತು ಗವಿ ಗಂಗಾಧರೇಶ್ವರ ದೇವಸ್ಥಾನದ ಅರ್ಚಕರು ವಿವರಿಸಿದ್ದಾರೆ. ಇತ್ತೀಚೆಗೆ ಸೂರ್ಯಗ್ರಹಣ ಸಂಭವಿಸಿದ ಹದಿನೈದು ದಿನಗಳ ನಂತರ, ಈ ಪೌರ್ಣಮಿಯಂದು ಬರುವ ಚಂದ್ರಗ್ರಹಣವು ವಿಶೇಷ ಮಹತ್ವವನ್ನು ಹೊಂದಿದೆ. ಗ್ರಹಣ ಕಾಲದಲ್ಲಿ ಗರ್ಭಿಣಿಯರು, ಮಕ್ಕಳು ಮನೆಯಲ್ಲೇ ಇರುವುದು ಉತ್ತಮ. ಗ್ರಹಣಾ ನಂತರ ಸ್ನಾನ ಮಾಡಿ, ಶಿವ ದೇವಸ್ಥಾನಕ್ಕೆ ಅಕ್ಕಿ, ಉದ್ದು, ಎಣ್ಣೆ ಅರ್ಪಿಸಿ ಪ್ರಾರ್ಥಿಸಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

Lunar Eclipse 2026: ಗ್ರಹಣ ಕಾಲದಲ್ಲಿ ಅನುಸರಿಸಬೇಕಾದ ನಿಯಮ ಮತ್ತು ಪರಿಹಾರ ಕ್ರಮಗಳ ಮಾಹಿತಿ ಇಲ್ಲಿದೆ
ಅರ್ಚಕರು ಸೋಮಸುಂದರ ದೀಕ್ಷಿತ್
ಅಕ್ಷತಾ ವರ್ಕಾಡಿ
|

Updated on: Mar 01, 2026 | 11:35 AM

Share

ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಹೋಳಿ ಹುಣ್ಣಿಮೆಯಂದು ಸಂಭವಿಸುವ ಚಂದ್ರಗ್ರಹಣದ ಬಗ್ಗೆ ವಿಶಿಷ್ಟ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸೂರ್ಯಗ್ರಹಣ ಸಂಭವಿಸಿದ ಹದಿನೈದು ದಿನಗಳ ನಂತರ, ಹೋಳಿ ಮಾಸದ ಈ ಪೌರ್ಣಮಿಯಂದು ಬರುವ ಚಂದ್ರಗ್ರಹಣವು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಹಣ ಕಾಲ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ಮಾತನಾಡಿದ ದೀಕ್ಷಿತ್ ಅವರು, ಗ್ರಹಣ ಆರಂಭವಾಗುವ ಹೊತ್ತಿಗಾಗಲೇ ಇರಾನ್ ಮತ್ತು ಇರಾಕ್ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿರುವುದನ್ನು ಉಲ್ಲೇಖಿಸಿದರು. ಹೋಳಿ ಹಬ್ಬದಂದು ಬೆಂಕಿಯನ್ನು ನೋಡಿ ಸಮಾಧಾನ ಪಡೆಯುವಂತೆಯೇ, ಯುದ್ಧದ ಕಾವು ಆರಂಭವಾಗಿರುವುದು ದುಃಖಕರ. ಅಗ್ನಿ, ಹೊಗೆ, ಗಲಭೆಗಳು ಹೆಚ್ಚಾಗಿವೆ. ಪ್ರಾಣಿ ಜೀವಿಗಳಿಗೂ ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ, ಭಾರತವು ಯಜ್ಞಭೂಮಿ, ಕರ್ಮಭೂಮಿ, ತಪೋಭೂಮಿ, ಜಪಭೂಮಿ ಆಗಿರುವುದರಿಂದ, ಇಂತಹ ಯಾವುದೇ ಅವಘಡಗಳು ಇಲ್ಲಿ ಸಂಭವಿಸದು.

ಗ್ರಹಣದ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳು:

ಗ್ರಹಣದ ನಿಮಿತ್ತ ಅನುಸರಿಸಬೇಕಾದ ನಿಯಮಗಳು ಮತ್ತು ಆಚರಣೆಗಳ ಕುರಿತು ದೀಕ್ಷಿತ್ ಅವರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ಮನೆಯಿಂದ ಹೊರಬರದೇ ಒಳಗಿರಬೇಕು. ಮಕ್ಕಳು ಆಟವಾಡಲು ಹೊರಹೋಗುವುದನ್ನು ತಪ್ಪಿಸಬೇಕು. ಇಂತಹ ಸಮಯದಲ್ಲಿ ಅನಾವತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಅವರು ಎಚ್ಚರಿಸಿದ್ದಾರೆ. ಈ ಗ್ರಹಣವು ಭಾರತಕ್ಕೆ ಅಲ್ಪಕಾಲ, ಅಂದರೆ ಕೊನೆಯ ಭಾಗದಲ್ಲಿ ಗೋಚರವಾಗುತ್ತದೆ. ಮಧ್ಯಾಹ್ನ 3:00 ಗಂಟೆಯಿಂದ ಪ್ರಾರಂಭವಾಗಿ ಸಾಯಂಕಾಲ 7:30 ರವರೆಗೆ ಗ್ರಹಣ ಕಾಲವಿರುತ್ತದೆ. ಈ ಅವಧಿಯಲ್ಲಿ ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳು ಮನೆಯಲ್ಲಿಯೇ ಇರಬೇಕು. ದೊಡ್ಡವರು ಮಕ್ಕಳ ಪಕ್ಕದಲ್ಲಿ ಕುಳಿತು ಧ್ಯಾನ, ದೀಪ ಪೂಜೆಗಳನ್ನು ಮಾಡುವುದರಿಂದ ಬಹಳ ವಿಶೇಷ ಫಲ ದೊರೆಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಗ್ರಹಣದ ನಂತರ ಕೈಗೊಳ್ಳಬೇಕಾದ ಪರಿಹಾರ ಕ್ರಮ:

ಗ್ರಹಣದ ನಂತರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಗ್ರಹಣದ ನಂತರ ಸ್ನಾನ ಮಾಡಿ, ಮನೆಯನ್ನು ಶುಚಿ ಮಾಡಿಕೊಳ್ಳಬೇಕು. ಬುಧವಾರ ಬೆಳಗ್ಗೆ ನಿಮ್ಮ ಪಕ್ಕದಲ್ಲಿರುವ ಯಾವುದೇ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಅಕ್ಕಿ, ಉದ್ದು ಮತ್ತು ಎಣ್ಣೆಯನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಬೇಕು. ಶಿವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಮತ್ತು ಸೇವೆಗಳನ್ನು ಸಲ್ಲಿಸುವುದರ ಮೂಲಕ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us