ಹಿರಿಯ ನಟಿ ವಿರುದ್ಧ ಗಂಭೀರ ಆರೋಪ ಮಾಡಿದ ಬಿಗ್​ ಬಾಸ್​ ಸ್ಪರ್ಧಿ; ರಿಯಾಲಿಟಿ ಶೋದಿಂದ ಹೊರ ಬರುವ ನಿರ್ಧಾರ

ಬಿಗ್​ ಬಾಸ್​ 4 ಖ್ಯಾತಿಯ ಸುರೇಶ್​ ಚಕ್ರವರ್ತಿಗೆ ವನಿತಾ ಜತೆಯಾಗಿದ್ದರು. ಇವರ ಡಾನ್ಸ್​ ಪರ್ಫಾರ್ಮೆನ್ಸ್​ ವೀಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಆದರೆ, ಈಗ ಅವರು ಏಕಾಏಕಿ ಬಿಗ್​ ಬಾಸ್ ಜೋಡಿಗಳ್​ ತೊರೆಯುತ್ತಿರುವುದಾಗಿ ವಿಜಯ್​ ಟಿವಿಗೆ ಪತ್ರ ಬರೆದಿದ್ದಾರೆ.

ಹಿರಿಯ ನಟಿ ವಿರುದ್ಧ ಗಂಭೀರ ಆರೋಪ ಮಾಡಿದ ಬಿಗ್​ ಬಾಸ್​ ಸ್ಪರ್ಧಿ; ರಿಯಾಲಿಟಿ ಶೋದಿಂದ ಹೊರ ಬರುವ ನಿರ್ಧಾರ
ವನಿತಾ ವಿಜಯ್​ಕುಮಾರ್​
TV9kannada Web Team

| Edited By: Rajesh Duggumane

Jul 05, 2021 | 7:51 PM

ತಮಿಳು ಬಿಗ್​ ಬಾಸ್​ ಸೀಸನ್​ 3ರ ಖ್ಯಾತಿಯ ವನಿತಾ ವಿಜಯಕುಮಾರ್​ ತಮ್ಮ ನೇರ ನುಡಿಗಳಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್​ನಿಂದಾಗಿ ಅವರ ಅಭಿಮಾನಿ ಬಳಗ ಹಿರಿದಾಗಿತ್ತು. ಇತ್ತೀಚೆಗೆ ಅವರು ಬಿಗ್​ ಬಾಸ್​ ಸ್ಪರ್ಧಿಗಳಿಗಾಗಿ ಏರ್ಪಡಿಸಿದ ‘ಬಿಗ್ ಬಾಸ್​ ಜೋಡಿಗಳ್​’ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು. ಈಗ ಅವರು ರಿಯಾಲಿಟಿ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ, ಹಿರಿಯ ನಟಿಯ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬಿಗ್​ ಬಾಸ್​ 4 ಖ್ಯಾತಿಯ ಸುರೇಶ್​ ಚಕ್ರವರ್ತಿಗೆ ವನಿತಾ ಜತೆಯಾಗಿದ್ದರು. ಇವರ ಡಾನ್ಸ್​ ಪರ್ಫಾರ್ಮೆನ್ಸ್​ ವೀಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಆದರೆ, ಈಗ ಅವರು ಏಕಾಏಕಿ ಬಿಗ್​ ಬಾಸ್ ಜೋಡಿಗಳ್​ ತೊರೆಯುತ್ತಿರುವುದಾಗಿ ವಿಜಯ್​ ಟಿವಿಗೆ ಪತ್ರ ಬರೆದಿದ್ದಾರೆ.

ವನಿತಾ ಅವರು ಚಾನೆಲ್​ಗೆ ಧನ್ಯವಾದ ಹೇಳಿದ್ದಾರೆ. ಬಿಗ್​ ಬಾಸ್​ 3, ಕೂಕು ವಿತ್​ ಕೋಮಲಿ ಸೇರಿ ಹಲವು ಶೋಗಳಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ವನಿತಾ ಬರೆದುಕೊಂಡಿದ್ದಾರೆ. ಅಲ್ಲದೆ, ಹಿರಿಯ ನಟಿಯಿಂದ ನನಗೆ ಬೆದರಿಕೆ ಇದೆ. ಅವರು ಶೋ ಹಾಗೂ ಚಾನೆಲ್​ ಎರಡು ಬಿಟ್ಟು ಹೋಗುವಂತೆ ಒತ್ತಡ ಹೇರಿದ್ದಾರೆ ಎಂಬುದಾಗಿ ವನಿತಾ ಹೇಳಿಕೊಂಡಿದ್ದಾರೆ.

ಆ ಹಿರಿಯ ನಟಿ ಯಾರು ಎಂದು ವನಿತಾ ಎಲ್ಲಿಯೂ ಹೆಸರು ಉಲ್ಲೇಖ ಮಾಡಿಲ್ಲ. ಈ ಶೋ ನಡೆಸಿಕೊಡುವ ನಿರೂಪಕಿ ಮೇಲೆ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ, ವನಿತಾ ಅವರ ಈ ನಿರ್ಧಾರದಿಂದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್​ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada