ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್​ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ

ಕಳೆದ ವಾರ ಟಾಸ್ಕ್​ ನಡೆಯುವಾಗ ನಿಧಿ ಸುಬ್ಬಯ್ಯ ಹಾಗೂ ಅರವಿಂದ್​ ನಡುವೆ ಜಗಳ ಏರ್ಪಟ್ಟಿತ್ತು. ಅರವಿಂದ್ ಹಾಗೂ ಮಂಜು ಮಾತನಾಡುವಾಗ ನಿಧಿ ಮಧ್ಯ ಪ್ರವೇಶಿಸಿದ್ದರು. ಈ ವೇಳೆ ನಿಧಿಗೆ ‘ನೀವು ಸ್ವಲ್ಪ ಮುಚ್ಕೊಳಿ’ ಎಂಬ ಶಬ್ದ ಪ್ರಯೋಗವನ್ನು ಅರವಿಂದ್ ಮಾಡಿದ್ದರು.

ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್​ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ
ಅರವಿಂದ್​ ಕೆಪಿ- ನಿಧಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 05, 2021 | 3:31 PM

‘ಬಿಗ್​ ಬಾಸ್ ಕನ್ನಡ ಸೀಸನ್​ 8’ರ ಎರಡನೇ ಇನ್ನಿಂಗ್ಸ್​ನಲ್ಲಿ ಮೊದಲ ಸ್ಪರ್ಧಿಯಾಗಿ ನಿಧಿ ಸುಬ್ಬಯ್ಯ ಎಲಿಮಿನೇಟ್​ ಆಗಿದ್ದಾರೆ. ಮನೆಯಿಂದ ಹೊರ ಹೋಗುತ್ತಿರುವ ವಿಚಾರ ಅವರಿಗೇ ಅಚ್ಚರಿ ಮೂಡಿಸಿದೆ. ಆದರೆ ಎಲ್ಲಿಯೂ ಕಣ್ಣೀರು ಹಾಕದೆ ಅವರು ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದರು. ಇನ್ನು, ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆಗುವುದಕ್ಕೂ ಮೊದಲು ಅರವಿಂದ್ ಕೆ.ಪಿ. ವಿರುದ್ಧ ನಿಧಿ ಸೇಡು ತೀರಿಸಿಕೊಂಡಿದ್ದಾರೆ.

ಕಳೆದ ವಾರ ಟಾಸ್ಕ್​ ನಡೆಯುವಾಗ ನಿಧಿ ಸುಬ್ಬಯ್ಯ ಹಾಗೂ ಅರವಿಂದ್​ ನಡುವೆ ಜಗಳ ಏರ್ಪಟ್ಟಿತ್ತು. ಅರವಿಂದ್ ಹಾಗೂ ಮಂಜು ಮಾತನಾಡುವಾಗ ನಿಧಿ ಮಧ್ಯ ಪ್ರವೇಶಿಸಿದ್ದರು. ಈ ವೇಳೆ ನಿಧಿಗೆ ‘ನೀವು ಸ್ವಲ್ಪ ಮುಚ್ಕೊಳಿ’ ಎಂಬ ಶಬ್ದ ಪ್ರಯೋಗವನ್ನು ಅರವಿಂದ್ ಮಾಡಿದ್ದರು. ಇದು ನಿಧಿ ಕೋಪಕ್ಕೆ ಕಾರಣವಾಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಧಿ ಹಾಗೂ ಅರವಿಂದ್ ನಡುವೆ ದೊಡ್ಡ ಮಟ್ಟದಲ್ಲಿ ಜಗಳ ಏರ್ಪಟ್ಟಿತ್ತು. ‘ನೀವು ಏನು ಎಂಬುದು ನಂಗೆ ಗೊತ್ತು ಎಂದು ಪದೇಪದೇ ಹೇಳಿದ್ದೀರಿ. ಈ ಆಟದಿಂದ ನಾನು ಏನು ಎಂಬುದು ಗೊತ್ತಾಗುತ್ತದೆಯೇ? ನಾನು ಎಲ್ಲ ಬೈಗುಳಗಳನ್ನು ತೆಗೆದುಕೊಳ್ಳೋಕೆ ರೆಡಿ ಇಲ್ಲ. ನೀವು ಸಾರಿ ಎಂದು ಕೇಳುತ್ತೀರಿ. ಮತ್ತೆ ನನಗೆ ಕ್ಯಾರೆಕ್ಟರ್​ ಇಲ್ಲ ಎಂದು ಹೇಳುತ್ತೀರಿ. ನನಗೆ ಕ್ಯಾರೆಕ್ಟರ್​ ಇದೆ ಅರವಿಂದ್. ನಿಮಗೆ  ಕ್ರೀಡಾಸ್ಫೂರ್ತಿ ​ ಇಲ್ಲ. ಸೋಲನ್ನು ಒಪ್ಪಿಕೊಳ್ಳೋಕೆ ನಿಮಗೆ ಆಗಲ್ಲ’ ಎಂದು ನಿಧಿ ಗರಂ ಆಗಿದ್ದರು.

ಈ ಜಗಳದ ವೇಳೆ ಅರವಿಂದ್ ಮಾಡಿದ ಸಾಧನೆಯನ್ನು ನಿಧಿ ಹೀಯಾಳಿಸಿದ್ದರು. ಇದಕ್ಕಾಗಿಯೇ ನಿಧಿ ಬಿಗ್​ ಬಾಸ್​ನಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಬಿಗ್​ ಬಾಸ್​ನಿಂದ ಹೊರ ಹೋಗುವುದಕ್ಕೂ ಮೊದಲು ನಿಧಿ ಅವರಿಗೆ ಒಬ್ಬರನ್ನು ಎಲಿಮಿನೇಷನ್​ಗೆ ನಾಮಿನೇಟ್ ಮಾಡುವ ಅವಕಾಶ ನೀಡಲಾಯಿತು. ಈ ವೇಳೆ ಅರವಿಂದ್ ಹೆಸರನ್ನು ನಿಧಿ ಹೇಳುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಮಂಜು ವಿನ್ನರ್​, ವೈಷ್ಣವಿ ರನ್ನರ್​ ಅಪ್​’; ಬಿಗ್​ ಬಾಸ್​ ಸ್ಪರ್ಧಿ ನುಡಿದ್ರು ಭವಿಷ್ಯ

ಬಿಗ್​ ಬಾಸ್​ ಮನೆಯಲ್ಲಿ ಮಾಡಿದ ಆ ಒಂದು ತಪ್ಪಿಗೆ ಭಾರೀ ದಂಡ ತೆರಲಿದ್ದಾರಾ ಅರವಿಂದ್​?

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ