ಪ್ರಭಾಸ್ ‘ಸಲಾರ್’ ಸೆಟ್ ಫೋಟೋ ಲೀಕ್; ಮೈಸೂರಿಗೂ-ಸಿನಿಮಾಗೂ ಇದೆ ಲಿಂಕ್
ಕೊವಿಡ್ ಲಾಕ್ಡೌನ್ ಪೂರ್ಣಗೊಂಡಿರುವುದರಿಂದ ಸಲಾರ್ ಚಿತ್ರದ ಶೂಟಿಂಗ್ ಮತ್ತೆ ಆರಂಭಗೊಂಡಿದೆ. ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ಸಿನಿಮಾ ಸೆಟ್ ಫೋಟೋಗಳು ಲೀಕ್ ಆಗಿವೆ.
ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ಆರಂಭದಿಂದಲೂ ಬಜೆಟ್ ವಿಚಾರಕ್ಕೆ ಸದ್ದು ಮಾಡುತ್ತಿರುವ ಈ ಸಿನಿಮಾ, ಎರಡು ಪಾರ್ಟ್ಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಈಗ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಸಿಕ್ಕಿದೆ. ಸಿನಿಮಾ ಕಥೆಗೂ ಮೈಸೂರಿಗೂ ಒಂದು ಲಿಂಕ್ ಇದೆಯಂತೆ!
ಕೊವಿಡ್ ಲಾಕ್ಡೌನ್ ಪೂರ್ಣಗೊಂಡಿರುವುದರಿಂದ ಸಲಾರ್ ಚಿತ್ರದ ಶೂಟಿಂಗ್ ಮತ್ತೆ ಆರಂಭಗೊಂಡಿದೆ. ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ಸಿನಿಮಾ ಸೆಟ್ ಫೋಟೋಗಳು ಲೀಕ್ ಆಗಿವೆ. ಇದರಲ್ಲಿ ಪ್ರಭಾಸ್ ಬೈಕ್ ಸಾಕಷ್ಟು ಗಮನ ಸೆಳೆಯುತ್ತಿದೆ.
ಈ ಚಿತ್ರಕ್ಕೆ ವಿಂಟೇಜ್ ಮಾಡೆಲ್ ಬೈಕ್ ಬಳಕೆ ಮಾಡಿಕೊಳ್ಳಲಾಗಿದೆ. ಎಂಇಸಿ ನಂಬರ್ಪ್ಲೇಟ್ ಇರುವ ಬೈಕ್ ಎಲ್ಲರ ಗಮನ ಸೆಳೆಯುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾದ ಕಥೆ ಮೈಸೂರಿನಲ್ಲಿ ನಡೆಯಲಿದ್ದು, 1970ರ ಕಾಲಘಟದ್ದಲ್ಲಿ ಕಥೆ ಸಾಗಲಿದೆ. ಬೈಕ್ ನಂಬರ್ ಪ್ಲೇಟ್ ಮೇಲೆ ಎಂಇಸಿ 6987 ಎಂದಿದೆ. ಸದ್ಯ, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.
Here’s #Prabhas anna #Salaar movie bike ???? pic.twitter.com/M9XBPd1EDZ
— darling sai rebal ? (@nagella_sai) July 5, 2021
‘ಕೆಜಿಎಫ್’ ಚಿತ್ರ ರೆಟ್ರೋ ಲುಕ್ನಲ್ಲಿ ಮೂಡಿ ಬಂದಿತ್ತು. ಇದನ್ನು ನಿರ್ದೇಶಕ ಪ್ರಶಾಂತ್ ನೀಲ್ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದರು. ಈಗ ‘ಸಲಾರ್’ ಚಿತ್ರ ಕೂಡ ರೆಟ್ರೋ ಶೈಲಿಯಲ್ಲೇ ಮೂಡಿ ಬರುತ್ತಿದ್ದು, ಕಥೆಗೆ ಮೈಸೂರಿನ ಲಿಂಕ್ ಕೊಟ್ಟಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
Some Pics from sets of #Salaar #Prabhas pic.twitter.com/VfMcFEkZtj
— Hanu (@HanuNewws) June 29, 2021
ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಸಲಾರ್ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ನಿಂತಿದ್ದವು. ಈಗ ಲಾಕ್ಡೌನ್ ಸಡಿಲಗೊಂಡಿದ್ದು, ಮತ್ತೆ ಚಿತ್ರೀಕರಣ ಪ್ರಾರಂಭಗೊಂಡಿದೆ.2022ರ ಏಪ್ರಿಲ್ ತಿಂಗಳಲ್ಲಿ ಸಲಾರ್ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ತಯಾರಾಗುತ್ತಿದೆ. ಪ್ರಭಾಸ್ಗೆ ಜತೆಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಎರಡು ಪಾರ್ಟ್ಗಳಲ್ಲಿ ತೆರೆಗೆ ಬರಲಿದೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.
ಇದನ್ನೂ ಓದಿ: ಸಲಾರ್ ಚಿತ್ರದಲ್ಲಿ ಪ್ರಭಾಸ್ ಕೇಶ ವಿನ್ಯಾಸಕ್ಕೆ ಲಕ್ಷಲಕ್ಷ ಸುರಿದ ನಿರ್ಮಾಪಕರು