ಸಲಾರ್​ ಚಿತ್ರದಲ್ಲಿ ಪ್ರಭಾಸ್​ ಕೇಶ ವಿನ್ಯಾಸಕ್ಕೆ ಲಕ್ಷಲಕ್ಷ ಸುರಿದ ನಿರ್ಮಾಪಕರು

ಸಲಾರ್​ ಬಿಗ್​ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಚಿತ್ರ. ಹೊಂಬಾಳೆ ಫಿಲ್ಮ್ಸ್​ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ. ಮೂಲಗಳ ಪ್ರಕಾರ ಈ ಚಿತ್ರ 150 ಕೋಟಿ ಬಜೆಟ್​ನಲ್ಲಿ ಸಿದ್ಧಗೊಳ್ಳಲಿದೆ ಎನ್ನುವ ಸುದ್ದಿಯಿದೆ. ಪ್ರ

ಸಲಾರ್​ ಚಿತ್ರದಲ್ಲಿ ಪ್ರಭಾಸ್​ ಕೇಶ ವಿನ್ಯಾಸಕ್ಕೆ ಲಕ್ಷಲಕ್ಷ ಸುರಿದ ನಿರ್ಮಾಪಕರು
ನಟ ಪ್ರಭಾಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 30, 2021 | 10:01 PM

ದೊಡ್ಡ ಬಜೆಟ್​ ಸಿನಿಮಾಗಳಿಗೆ ಸಣ್ಣಸಣ್ಣ ವಿಚಾರಕ್ಕೂ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ. ಸಿನಿಮಾ ಬಜೆಟ್​ ಹೆಚ್ಚೋಕೆ ಇದೂ ಕೂಡ ಒಂದು ಕಾರಣ. ಪ್ರಭಾಸ್​ ನಟನೆಯ ‘ಸಲಾರ್’​ ಸಿನಿಮಾ ಕೂಡ ಈಗ ಅಂಥದ್ದೇ ವಿಚಾರಕ್ಕೆ ಸುದ್ದಿಯಾಗಿದೆ. ಈ ಸಿನಿಮಾದಲ್ಲಿನ ಪ್ರಭಾಸ್​ ಕೇಶ ವಿನ್ಯಾಸಕ್ಕೆ ನಿರ್ಮಾಪಕರು ದೊಡ್ಡ ಮೊತ್ತದ ಹಣ ಸುರಿಯುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಸಲಾರ್​ ಬಿಗ್​ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಚಿತ್ರ. ಹೊಂಬಾಳೆ ಫಿಲ್ಮ್ಸ್​ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ. ಮೂಲಗಳ ಪ್ರಕಾರ ಈ ಚಿತ್ರ 150 ಕೋಟಿ ಬಜೆಟ್​ನಲ್ಲಿ ಸಿದ್ಧಗೊಳ್ಳಲಿದೆ ಎನ್ನುವ ಸುದ್ದಿಯಿದೆ. ಪ್ರಶಾಂತ್​ ನೀಲ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿರುವುದರಿಂದ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಚಿತ್ರಗಳಲ್ಲಿ ಒಂದು ಅದ್ದೂರಿತನ ಇರುತ್ತದೆ. ಸಣ್ಣಸಣ್ಣ ವಿಚಾರಕ್ಕೂ ಪ್ರಶಾಂತ್​ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಸಲಾರ್​ ಸಿನಿಮಾ ಕೂಡ ಅಚ್ಚುಕಟ್ಟಾಗಿ ಮೂಡಿಬರೋಕೆ ಪ್ರಶಾಂತ್​ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಇದರಲ್ಲಿ ಪ್ರಭಾಸ್​ ಅವರ ಹೇರ್​ಸ್ಟೈಲ್​ ಕೂಡ ಒಂದು.

ಕೆಜಿಎಫ್​ ಚಿತ್ರದಲ್ಲಿ ಯಶ್​ ಉದ್ದನೆಯ ಗಡ್ಡ ಹಾಗೂ ಕೂದಲು ಎಲ್ಲರ ಗಮನ ಸೆಳೆದಿತ್ತು. ಕೆಜಿಎಫ್​ 2ನಲ್ಲೂ ಯಶ್​ ಅವತಾರ  ಹೀಗೆಯೇ ಇರಲಿದೆ. ಅದೇ ರೀತಿ ಸಲಾರ್​ ಚಿತ್ರಕ್ಕಾಗಿ ಪ್ರಭಾಸ್​ ಭಿನ್ನ ಅವತಾರ ತಾಳುತ್ತಿದ್ದಾರೆ. ಅವರ ಕೇಶ ವಿನ್ಯಾಸಕ್ಕಾಗಿ 4 ಲಕ್ಷ ರೂಪಾಯಿ ಖರ್ಚಾಗಲಿದೆಯಂತೆ. ಬಾಲಿವುಡ್​ ಹೇರ್​ ಸ್ಟೈಲಿಸ್ಟ್​ ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಕೇಳಿ ಬಂದಿದೆ.

ಕೊವಿಡ್​ ಕಾಣಿಸಿಕೊಂಡ ನಂತರದಲ್ಲಿ ಸಲಾರ್ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ನಿಂತಿದ್ದವು. ಈಗ ಲಾಕ್​ಡೌನ್​ ಸಡಿಲಗೊಂಡಿದ್ದು, ಮತ್ತೆ ಸಿನಿಮಾ ಕೆಲಸಗಳು ಭರದಿಂದ ಸಾಗಿವೆ.

2022ರ ಏಪ್ರಿಲ್​ ತಿಂಗಳಲ್ಲಿ ಸಲಾರ್​ ಸಿನಿಮಾ ರಿಲೀಸ್​ ಆಗುವ ನಿರೀಕ್ಷೆ ಇದೆ. ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ತಯಾರಾಗುತ್ತಿದೆ. ಪ್ರಭಾಸ್​ಗೆ ಜತೆಯಾಗಿ ಶ್ರುತಿ ಹಾಸನ್​ ನಟಿಸುತ್ತಿದ್ದಾರೆ. ಕೆಜಿಎಫ್​ ಸಿನಿಮಾದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್​ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಎರಡು ಪಾರ್ಟ್​ಗಳಲ್ಲಿ ತೆರೆಗೆ ಬರಲಿದೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.

ಇದನ್ನೂ ಓದಿ: ಸಲಾರ್​ ಬಳಿಕ ಕಾದಿದೆ ಸರ್ಪ್ರೈಸ್​; ಪ್ರಭಾಸ್​ ಜೊತೆ ಇಂಥ ಸಿನಿಮಾನೂ ಮಾಡ್ತಾರಾ ಪ್ರಶಾಂತ್​ ನೀಲ್​?

ಸಲಾರ್ ಮೇಕಿಂಗ್​ನಲ್ಲಿ ಬಿಗ್​ ಟ್ವಿಸ್ಟ್​; ಎರಡನೇ ಪಾರ್ಟ್​ ಬಗ್ಗೆ ಕೇಳಿ ಬರುತ್ತಿದೆ ಗುಸುಗುಸು

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ