ಸಲಾರ್ ಮೇಕಿಂಗ್​ನಲ್ಲಿ ಬಿಗ್​ ಟ್ವಿಸ್ಟ್​; ಎರಡನೇ ಪಾರ್ಟ್​ ಬಗ್ಗೆ ಕೇಳಿ ಬರುತ್ತಿದೆ ಗುಸುಗುಸು

ಪ್ರಶಾಂತ್​ ನೀಲ್​ ಸಿನಿಮಾ ಮಾಡೋಕೆ ಇಳಿದರು ಎಂದರೆ ಅಲ್ಲಿ ಒಂದು ಅಚ್ಚುಕಟ್ಟುತನ ಇರುತ್ತದೆ. ಇದೇ ಕಾರಣಕ್ಕೆ ಸಿನಿಮಾ ಶೂಟಿಂಗ್​ಗೆ ಹೆಚ್ಚಿನ ಸಮಯ ಹಿಡಿಯುತ್ತದೆ.

ಸಲಾರ್ ಮೇಕಿಂಗ್​ನಲ್ಲಿ ಬಿಗ್​ ಟ್ವಿಸ್ಟ್​; ಎರಡನೇ ಪಾರ್ಟ್​ ಬಗ್ಗೆ ಕೇಳಿ ಬರುತ್ತಿದೆ ಗುಸುಗುಸು
ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು ನಟ ಪ್ರಭಾಸ್‌
Follow us
ರಾಜೇಶ್ ದುಗ್ಗುಮನೆ
|

Updated on: Jun 21, 2021 | 5:19 PM

ಖ್ಯಾತ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ನಿರ್ದೇಶಕ ಪ್ರಶಾಂತ್​ ನೀಲ್ ‘ಸಲಾರ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಪ್ರಭಾಸ್​ ನಟನೆಯ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ. ಅಚ್ಚರಿ ಎಂದರೆ, ಈ ಸಿನಿಮಾ ತೆರೆಗೆ ಬರೋಕೆ ಇನ್ನೂ ಹಲವು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಸಿನಿಮಾ ಮೇಕಿಂಗ್​.

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​ ಚಾಪ್ಟರ್​ 1’ 2018ರ ಡಿಸೆಂಬರ್​ನಲ್ಲಿ ತೆರೆಗೆ ಬಂದಿತ್ತು. ಇದಾಗಿ ಸುಮಾರು ಮೂರು ವರ್ಷ ಕಳೆಯುತ್ತಾ ಬಂದಿದೆ. ಆದಾಗ್ಯೂ ಚಾಪ್ಟರ್​ 2 ತೆರೆಗೆ ಬಂದಿಲ್ಲ. ಕೊವಿಡ್ ಕಾರಣದಿಂದ ಚಿತ್ರೀಕರಣ ವಿಳಂಬವಾಗಿದ್ದು ಸಿನಿಮಾ ರಿಲೀಸ್​ ಮುಂದೂಡಲ್ಪಡಲು ಪ್ರಮುಖ ಕಾರಣ ಎನ್ನಬಹುದು. ಇನ್ನು, ಯಶ್​ ಈ​ ಸರಣಿಗೆ ಸುಮಾರು ಐದು ವರ್ಷ ಮುಡಿಪಿಟ್ಟಿದ್ದಾರೆ. ಪ್ರಭಾಸ್​ ಕೂಡ ಬಾಹುಬಲಿ ಸರಣಿಗಾಗಿ ಸಾಕಷ್ಟು ವರ್ಷಗಳನ್ನು ವ್ಯಯಿಸಿದ್ದರು. ಈಗ ಬಾಹುಬಲಿ, ಕೆಜಿಎಫ್​ ಮಾದರಿಯಲ್ಲೇ ಸಲಾರ್​ ಮೂಡಿ ಬರಲಿದೆ. ಅಂದರೆ, ಎರಡು ಪಾರ್ಟ್​ಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಸುಕುಮಾರ್​ ನಿರ್ದೇಶನದ ‘ಪುಷ್ಪ’ ಚಿತ್ರತಂಡ ಇತ್ತೀಚೆಗೆ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈಗ ಸಲಾರ್​ ನಿರ್ದೇಶಕ ಪ್ರಶಾಂತ್​ ನೀಲ್​ ಕೂಡ ಇದೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ರೀತಿ ಮಾಡೋಕೆ ಪ್ರಮುಖ ಕಾರಣ ಚಿತ್ರದ ಕಥೆ. ಸಿನಿಮಾದ ಕಥೆ ಹೆಚ್ಚಿನ ಅವಧಿ ಕೇಳುತ್ತಿದೆಯಂತೆ. ಒಂದೊಮ್ಮೆ ಎಲ್ಲವನ್ನೂ ಒಂದರಲ್ಲೇ ತೋರಿಸಲು ಹೋದರೆ, ಕೆಲವು ಕಡೆ ಕತ್ತರಿ ಹಾಕಬೇಕು ಅಥವಾ ಸಿನಿಮಾದ ಅವಧಿ ವಿಸ್ತರಣೆ ಮಾಡಬೇಕು. ಈ ಎರಡೂ ಮಾರ್ಗಗಳು ಅಷ್ಟು ಸೂಕ್ತವಲ್ಲ. ಈ ಕಾರಣಕ್ಕೆ ಸಲಾರ್​ ಸಿನಿಮಾ ಎರಡು ಪಾರ್ಟ್​ಗಳಲ್ಲ ರಿಲೀಸ್​ ಮಾಡಲು ಚಿಂತಿಸಲಾಗಿದೆ ಎನ್ನುವ ಮಾಹಿತಿ ಹರಿದಾಡಿದೆ.

ಪ್ರಶಾಂತ್​ ನೀಲ್​ ಸಿನಿಮಾ ಮಾಡೋಕೆ ಇಳಿದರು ಎಂದರೆ ಅಲ್ಲಿ ಒಂದು ಅಚ್ಚುಕಟ್ಟುತನ ಇರುತ್ತದೆ. ಇದೇ ಕಾರಣಕ್ಕೆ ಸಿನಿಮಾ ಶೂಟಿಂಗ್​ಗೆ ಹೆಚ್ಚಿನ ಸಮಯ ಹಿಡಿಯುತ್ತದೆ. ಈಗ ಸಲಾರ್ ಈಗತಾನೇ ಶೂಟಿಂಗ್​ ಆರಂಭಿಸಿದೆ. ಶೂಟಿಂಗ್​, ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಎಲ್ಲವೂ ಸೇರಿದರೆ ತುಂಬಾನೇ ಸಮಯ ಹಿಡಿಯಲಿದೆ. ಇದಾದ ನಂತರ ಪಾರ್ಟ್​ 2 ಕೆಲಸಗಳಿಗೆ ಮತ್ತೊಂದಷ್ಟು ವರ್ಷಗಳು ಉರುಳಲಿವೆ. ಹೀಗಾಗಿ, ಸಲಾರ್ ಎರಡನೇ ಪಾರ್ಟ್​ ತೆರೆಗೆ ಬರಲು ಇನ್ನೂ 3-5 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಸಲಾರ್​ ಸಿನಿಮಾ 150 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ. 2022ರ ಏಪ್ರಿಲ್​ ತಿಂಗಳಲ್ಲಿ ಈ ಸಿನಿಮಾ ರಿಲೀಸ್​ ಆಗುವ ನಿರೀಕ್ಷೆ ಇದೆ. ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ತಯಾರಾಗುತ್ತಿದೆ. ಪ್ರಭಾಸ್​ಗೆ ಜತೆಯಾಗಿ ಶ್ರುತಿ ಹಾಸನ್​ ನಟಿಸುತ್ತಿದ್ದಾರೆ. ಕೆಜಿಎಫ್​ ಸಿನಿಮಾದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್​ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಹೋದರೂ ಕನ್ನಡಿಗರಿಗೆ ಆದ್ಯತೆ ನೀಡುವ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್​ ಮುಂದುವರಿಸಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಸಲಾರ್​ ಬಳಿಕ ಕಾದಿದೆ ಸರ್ಪ್ರೈಸ್​; ಪ್ರಭಾಸ್​ ಜೊತೆ ಇಂಥ ಸಿನಿಮಾನೂ ಮಾಡ್ತಾರಾ ಪ್ರಶಾಂತ್​ ನೀಲ್​?

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ