ಸುದೀಪ್​ ಹೇಳಿದ ಬುದ್ಧಿವಾದ ಮರೆತ ಬಿಗ್​ ಬಾಸ್​ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್​?

ಬಿಗ್​ ಬಾಸ್​ ಮನೆಯ ಮೊದಲ ವಾರದ ಪಂಚಾಯ್ತಿಯಲ್ಲಿ ಕೆಲವರು ಆಡಿದ ಮಾತುಗಳು ಅನೇಕರಿಗೆ ಬೇಸರ ತರಿಸಿದೆ. ಇದರ ಪರಿಣಾಮವಾಗಿ ಮನೆಯಲ್ಲಿ ಎರಡು ಟೀಂಗಳಾಗಿವೆ. ಸೋಮವಾರದಿಂದ ಇಲ್ಲಿಯವರೆಗೆ ಮನೆಯಲ್ಲಿ ನಿರಂತರವಾಗಿ ಜಗಳಗಳು ನಡೆಯುತ್ತಲೇ ಇವೆ.

ಸುದೀಪ್​ ಹೇಳಿದ ಬುದ್ಧಿವಾದ ಮರೆತ ಬಿಗ್​ ಬಾಸ್​ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್​?
ಸುದೀಪ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Jul 01, 2021 | 7:20 AM

ಬಿಗ್​ ಬಾಸ್​ ಸೀಸನ್​ 8 ಮೊದಲ ಇನ್ನಿಂಗ್ಸ್​ ಆರಂಭದಲ್ಲಿ ಬಿಗ್​ ಬಾಸ್​ ಮನೆ ರಣರಂಗವಾಗಿತ್ತು. ವೈರಸ್​ ಮತ್ತು ಮನುಷ್ಯರ ಟಾಸ್ಕ್​ನಲ್ಲಿ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದರು. ಪ್ರೀತಿಯಿಂದ ಆಡಬಹುದಾದ ಗೇಮ್​ನಲ್ಲಿ ದ್ವೇಷ ಕಾರಿಕೊಂಡಿದ್ದರು. ಎರಡನೇ ಇನ್ನಿಂಗ್ಸ್​ ಆರಂಭದಲ್ಲೂ ಇದು ಪುನರಾವರ್ತನೆ ಆಗಿದೆ. ಈ ವಿಚಾರದಲ್ಲಿ ಸ್ಪರ್ಧಿಗಳಿಗೆ ಸುದೀಪ್​ ಕ್ಲಾಸ್​ ತೆಗೆದುಕೊಳ್ಳುವ ಎಲ್ಲಾ ಲಕ್ಷಣ ಕಾಣುತ್ತಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಬಿಗ್​ ಬಾಸ್​ ಸ್ಪರ್ಧಿಗಳು ನಡೆದುಕೊಂಡಿದ್ದ ರೀತಿ ಸುದೀಪ್​ಗೆ ಇಷ್ಟವಾಗಿಲ್ಲ. ಖುಷಿಯಿಂದ ನಡೆಯಬೇಕಿದ್ದ ಟಾಸ್ಕ್​ ರಣರಂಗವಾಗಿದ್ದಕ್ಕೆ ಸುದೀಪ್​ ಛೀಮಾರಿ ಹಾಕಿದ್ದರು. ಇದಾದ ನಂತರ ಮನೆಯವರು ಪಾಠ ಕಲಿತಿದ್ದರು. ಎಲ್ಲರೂ ಒಂದಾಗಿದ್ದರು. ಈಗ ಮತ್ತದೇ ರಿಪೀಟ್​ ಆಗಿದೆ.

ಬಿಗ್​ ಬಾಸ್​ ಮನೆಯ ಮೊದಲ ವಾರದ ಪಂಚಾಯ್ತಿಯಲ್ಲಿ ಕೆಲವರು ಆಡಿದ ಮಾತುಗಳಿಂದ ಈ ದ್ವೇಷ ಹುಟ್ಟಿಕೊಂಡಿದೆ. ಇದರ ಪರಿಣಾಮವಾಗಿ ಮನೆಯಲ್ಲಿ ಎರಡು ಟೀಂಗಳಾಗಿವೆ. ಸೋಮವಾರದಿಂದ ಇಲ್ಲಿಯವರೆಗೆ ಮನೆಯಲ್ಲಿ ನಿರಂತರವಾಗಿ ಜಗಳಗಳು ನಡೆಯುತ್ತಲೇ ಇವೆ. ಮಂಜು-ದಿವ್ಯಾ ಜತೆ ಪ್ರಶಾಂತ್​-ಚಕ್ರವರ್ತಿ ಜಗಳ ಆಡಿದ್ದಾರೆ. ನಿಧಿ ಸುಬ್ಬಯ್ಯ ಹಾಗೂ ಅರವಿಂದ್ ಕೆಪಿ ಕಿತ್ತಾಡಿಕೊಂಡಿದ್ದಾರೆ. ಕ್ಲೋಸ್​ ಫ್ರೆಂಡ್ಸ್​ ಆಗಿರುವ ನಿಧಿ-ಶುಭಾ ನಡುವೆಯೂ ಮಾತಿನ ಚಕಮಕಿ ನಡೆದಿದೆ. ರಘು-ವೈಷ್ಣವಿ ನಡುವೆ ಉಂಟಾದ ಮಿಸ್​ ಅಂಡರ್​​ಸ್ಟ್ಯಾಂಡಿಗ್​ನಿಂದ ಇಬ್ಬರೂ ಬೇಸರ ಮಾಡಿಕೊಂಡರು.

ಒಟ್ಟಿನಲ್ಲಿ ಎರಡನೇ ಇನ್ನಿಂಗ್ಸ್​ನ ಎರಡನೇ ವಾರ ಮನೆ ಸಂಪೂರ್ಣವಾಗಿ ರಣರಂಗವಾಗಿದೆ. ಶಮಂತ್​ ಹಾಗೂ ಶುಭಾ ಪೂಂಜಾ ಎಲ್ಲವನ್ನೂ ಸರಿ ಮಾಡೋಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಭಿನ್ನಾಭಿಪ್ರಾಯಗಳು ಶಮನವಾಗುತ್ತಿಲ್ಲ. ಹೀಗಾಗಿ, ಈ ವಾರ​ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್​ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.

ಇದನ್ನೂ ಓದಿ:

 ‘ಮಂಜು ಬೆಂಬಲಿಗರ ವೋಟ್​ ನಂಗೆ ಸಿಗಲ್ಲ’; ದಿವ್ಯಾ ಸುರೇಶ್​ ಲೆಕ್ಕಾಚಾರ ಉಲ್ಟಾಪಲ್ಟಾ

Divya Uruduga: ಪದೇಪದೇ ಅರವಿಂದ್ ವಹಿಸಿಕೊಂಡು ಬರುವ ದಿವ್ಯಾಗೆ ಮಾತಿನಲ್ಲೇ ತಿವಿದ ಸುದೀಪ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ