Divya Uruduga: ಪದೇಪದೇ ಅರವಿಂದ್ ವಹಿಸಿಕೊಂಡು ಬರುವ ದಿವ್ಯಾಗೆ ಮಾತಿನಲ್ಲೇ ತಿವಿದ ಸುದೀಪ್

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಮ್ಮ ಆಟವನ್ನು ಆಡಬೇಕು ಎಂಬುದು ಸುದೀಪ್ ಅಭಿಪ್ರಾಯ. ಆದರೆ, ದಿವ್ಯಾ ಉರುಡುಗ ಆಟ ಸಂಪೂರ್ಣ ಬದಲಾಗಿದೆ. ಪ್ರತಿ ವಿಚಾರದಲ್ಲೂ ಅವರು ಅರವಿಂದ್ ಮೇಲೆ ಡಿಪೆಂಡ್ ಆಗುತ್ತಿದ್ದಾರೇನೋ ಎನ್ನುವ ಫೀಲ್ ವೀಕ್ಷಕರಲ್ಲಿ ಬರುತ್ತಿದೆ.

Divya Uruduga: ಪದೇಪದೇ ಅರವಿಂದ್ ವಹಿಸಿಕೊಂಡು ಬರುವ ದಿವ್ಯಾಗೆ ಮಾತಿನಲ್ಲೇ ತಿವಿದ ಸುದೀಪ್
ದಿವ್ಯಾ ಉರುಡುಗ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 27, 2021 | 4:29 PM

‘ಬಿಗ್ ಬಾಸ್ ಸೀಸನ್ 8’ ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಬಿಗ್ ಬಾಸ್ ವೇದಿಕೆ ಏರಿದ್ದ ದಿವ್ಯಾ ಉರುಡುಗಗೆ ಕಿಚ್ಚ ಸುದೀಪ್ ಪ್ರಶ್ನೆ ಒಂದನ್ನು ಕೇಳಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ನಿಮ್ಮದು ಡಬಲ್ ರೈಡಿಂಗ್ ಇರುತ್ತದೆಯೋ ಅಥವಾ ಸಿಂಗಲ್ ರೈಡಿಂಗೋ’ ಎಂದು ಪ್ರಶ್ನಿಸಿದ್ದರು. ಆಗ ದಿವ್ಯಾ, ‘ನಾನು ಬದಲಾಗಿದ್ದೇನೆ. ಮೊದಲಿನಂತೆ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ’ ಎಂದಿದ್ದರು. ಆದರೆ, ಅರವಿಂದ್ ಕೆ.ಪಿ. ಅವರನ್ನು ನಿರಂತರವಾಗಿ ವಹಿಸಿಕೊಂಡು ಬರುವುದನ್ನು ಅವರು ನಿಲ್ಲಿಸಿಲ್ಲ. ಈ ವಿಚಾರ ಸುದೀಪ್​ಗೆ ಕೋಪ ತರಿಸಿದೆ. ಅವರು ಮಾತಿನಲ್ಲೇ ದಿವ್ಯಾಗೆ ತಿವಿದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಮ್ಮ ಆಟವನ್ನು ಆಡಬೇಕು ಎಂಬುದು ಸುದೀಪ್ ಅಭಿಪ್ರಾಯ. ಆದರೆ, ದಿವ್ಯಾ ಉರುಡುಗ ಆಟ ಸಂಪೂರ್ಣ ಬದಲಾಗಿದೆ. ಪ್ರತಿ ವಿಚಾರದಲ್ಲೂ ಅವರು ಅರವಿಂದ್ ಮೇಲೆ ಡಿಪೆಂಡ್ ಆಗುತ್ತಿದ್ದಾರೇನೋ ಎನ್ನುವ ಫೀಲ್ ವೀಕ್ಷಕರಲ್ಲಿ ಬರುತ್ತಿದೆ. ಶನಿವಾರದ (ಜೂನ್ 26) ಎಪಿಸೋಡ್​ನಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು.

‘ಬಿಗ್ ಬಾಸ್ ಮನೆಯಲ್ಲಿ ಹಾರ್ಡ್ ವರ್ಕ್ ಮಾಡಿ ಬಂದವರು ಯಾರು ಮತ್ತು ಅದೃಷ್ಟ ಬಲದಲ್ಲಿ ನಿಂತವರು ಯಾರು’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಅದೃಷ್ಟ ಬಲದ ವಿಚಾರದಲ್ಲಿ ಬಹುತೇಕರು ಶಮಂತ್ ಹೆಸರು ತೆಗೆದುಕೊಂಡರು. ಇನ್ನು, ಹಾರ್ಡ್ ವರ್ಕ್ ಮಾಡಿ ಬಂದವರ ಬಗ್ಗೆ ಮಾತನಾಡುವಾಗ ತಮಗೆ ಅನಿಸಿದವರ ಹೆಸರನ್ನು ಸ್ಪರ್ಧಿಗಳು ಹೇಳಿದರು. ಶಮಂತ್ ಸೇರಿ ಕೆಲವರು ತಮ್ಮದೇ ಹೆಸರು ತೆಗೆದುಕೊಂಡರು. ಆಗ ಸುದೀಪ್ ನಿಮ್ಮ ಹೆಸರು ಬಿಟ್ಟು ಬೇರೆಯವರ ಹೆಸರು ಹೇಳಿ ಎಂದು ಕೇಳಿದರು.

ಇದೇ ಪ್ರಶ್ನೆ ದಿವ್ಯಾ ಉರುಡುಗ ಬಳಿಗೂ ಬಂತು. ಆಗ, ದಿವ್ಯಾ ಎಂದಿನಂತೆ ಅರವಿಂದ್ ಹೆಸರನ್ನು ತೆಗೆದುಕೊಂಡರು. ಸುದೀಪ್ ಈ ವಿಚಾರಕ್ಕೆ ಕೋಪಗೊಂಡಂತೆ ಕಂಡರು. ‘ನೀವು ಅರವಿಂದ್ ಹೆಸರು ಬಿಟ್ಟು ಬೇರೆಯವರ ಹೆಸರನ್ನು ಹೇಳಿ. ಎಲ್ಲ ವಿಚಾರದಲ್ಲೂ ಅರವಿಂದ್ ಹೆಸರನ್ನೇ ತೆಗೆದುಕೊಂಡು ಬರ್ತೀರಾ. ಉಳಿದವರಿಗೆ ನಿಮ್ಮ ಹೆಸರನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆ. ಆದರೆ, ನಿಮಗೆ ಅರವಿಂದ್ ಹೆಸರು ತೆಗೆದುಕೊಳ್ಳುವುದು ಬೇಡ ಎಂದು ಹೇಳುತ್ತಿದ್ದೇನೆ’ ಎಂದು ಗಂಭೀರವಾಗಿ ಮಾತಿನಲ್ಲೇ ತಿವಿದರು.

ಮಂಜುವಿನ ಬಾಲ ದಿವ್ಯಾ ಸುರೇಶ್ ಎಂದು ಮೊದಲ ಇನ್ನಿಂಗ್ಸ್​ನ​ಲ್ಲಿ ಎಲ್ಲರೂ ಆಡಿಕೊಂಡಿದ್ದರು. ಆದರೆ, ಈ ಬಾರಿ ಅವರು ಬದಲಾಗಿದ್ದಾರೆ. ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಬೆರೆಯುತ್ತಿದ್ದಾರೆ. ದಿವ್ಯಾಗೆ ಮಾತ್ರ ಸೀಮಿತವಾಗದೆ  ಎಲ್ಲರನ್ನೂ ನಗಿಸುವ ಕೆಲಸವನ್ನು ಮಂಜು ಮಾಡುತ್ತಿದ್ದಾರೆ. ಆದರೆ, ದಿವ್ಯಾ ಉರುಡುಗ ಮಾತ್ರ ಬದಲಾದಂತೆ ಕಾಣುತ್ತಿಲ್ಲ.

ಇದನ್ನೂ ಓದಿ:

ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹೊತ್ತಿಕೊಂಡಿತು ದ್ವೇಷದ ಬೆಂಕಿ; ಪ್ರಶಾಂತ್ ಸಂಬರಗಿ ಫೋಟೋ ಸುಟ್ಟ ಸ್ಪರ್ಧಿಗಳು

‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?

Published On - 4:17 pm, Sun, 27 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ