ರಾಜ್​ ಕೌಶಲ್​ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ

Raj Kaushal Funeral: ಪತಿ ರಾಜ್​ ಕೌಶಲ್​ ಅವರನ್ನು ಕಳೆದುಕೊಂಡ ನಟಿ ಮಂದಿರಾ ಬೇಡಿಗೆ ಇಡೀ ಬಾಲಿವುಡ್​ ಬಳಗ ಸಮಾಧಾನದ ಮಾತುಗಳನ್ನು ಹೇಳುತ್ತಿದೆ. ಮುಂಬೈನಲ್ಲಿ ರಾಜ್​ ಕೌಶಲ್​ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ರಾಜ್​ ಕೌಶಲ್​ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ
ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ
Follow us
TV9 Web
| Updated By: ಮದನ್​ ಕುಮಾರ್​

Updated on: Jul 01, 2021 | 9:50 AM

ಬಾಲಿವುಡ್​ನ ಖ್ಯಾತ ನಟಿ ಮಂದಿರಾ ಬೇಡಿ ಅವರ ಪತಿ ರಾಜ್​ ಕೌಶಲ್​ ಅವರು ಬುಧವಾರ (ಜೂ.30) ನಿಧನರಾದರು. ಕೇವಲ 49ನೇ ವಯಸ್ಸಿಗೆ ಅವರು ಹೃದಯಾಘಾತದಿಂದ ಅಸುನೀಗಿದ ಸುದ್ದಿ ಕೇಳಿ ಇಡೀ ಚಿತ್ರರಂಗಕ್ಕೆ ಆಘಾತ ಆಗಿದೆ. ಮುಂಬೈನಲ್ಲಿ ರಾಜ್​ ಕೌಶಲ್​ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ಸಂದರ್ಭದ ಫೋಟೋಗಳು ವೈರಲ್​ ಆಗಿವೆ. ಸಂಪ್ರದಾಯಕ್ಕೆ ಸೆಡ್ಡು ಹೊಡೆದ ಮಂದಿರಾ ಬೇಡಿ ಅವರು ಪತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಸಾಮಾನ್ಯವಾಗಿ ಮಹಿಳೆಯರು ಚಟ್ಟವನ್ನು ಹೊರುವುದಿಲ್ಲ. ಕೆಲವರ ಸಂಪ್ರದಾಯದ ಪ್ರಕಾರ ಸ್ತ್ರೀಯರು ಸ್ಮಶಾನಕ್ಕೂ ಬರುವಂತಿಲ್ಲ. ಈ ಎಲ್ಲ ಸಂಪ್ರದಾಯಗಳನ್ನು ಮಂದಿರಾ ಬೇಡಿ ಮುರಿಯುವ ಮೂಲಕ ದಿಟ್ಟತನ ಪ್ರದರ್ಶಿಸಿದ್ದಾರೆ. ಅಂತ್ಯ ಸಂಸ್ಕಾರದ ಸ್ಥಳಕ್ಕೆ ರಾಜ್​ ಕೌಶಲ್​ ಅವರ ಶವವನ್ನು ಸಾಗಿಸುವಾಗ ಮಂದಿರಾ ಕೂಡ ಪುರುಷರ ಜೊತೆ ಸೇರಿಕೊಂಡು ಪತಿಯ ಶವವನ್ನು ಹೊತ್ತು ಸಾಗಿದ್ದಾರೆ. ಅಲ್ಲದೆ, ತಾವೇ ನಿಂತು ಅಂತ್ಯಸಂಸ್ಕಾರ ಕೂಡ ನೆರವೇರಿಸಿದ್ದಾರೆ. ಅವರ ಈ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪತಿಯ ಅಗಲಿಕೆಯಿಂದ ತೀವ್ರ ದುಃಖ ಆವರಿಸಿದ್ದರೂ ಕೂಡ ಮಂದಿರಾ ಅವರು ಸ್ಟ್ರಾಂಗ್​ ಆಗಿದ್ದಂತೆ ಕಾಣಿಸಿದರು. ಅವರಿಗೆ ಇಡೀ ಬಾಲಿವುಡ್​ ಬಳಗ ಸಮಾಧಾನದ ಮಾತುಗಳನ್ನು ಹೇಳುತ್ತಿದೆ. ಅಕಾಲಿಕ ಮರಣಕ್ಕೆ ತುತ್ತಾದ ರಾಜ್​ ಕೌಶಲ್​ಗೆ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದ ರಾಜ್​ ಕೌಶಲ್​ ಜೊತೆ 1999ರಲ್ಲಿ ಮಂದಿರಾ ವಿವಾಹ ಆಗಿದ್ದರು. ಈ ದಂಪತಿಗೆ 2011ರಲ್ಲಿ ಗಂಡು ಮಗು ಜನಿಸಿತ್ತು. ಬಳಿಕ ಹೆಣ್ಣುಮಗುವೊಂದನ್ನು ದತ್ತು ಪಡೆದುಕೊಂಡಿದ್ದರು.

ನಿಧನರಾಗುವುದಕ್ಕೂ ಒಂದು ದಿನ ಮುಂಚೆ ನಟಿ ಮೌನಿ ರಾಯ್​ ಸೇರಿದಂತೆ ಚಿತ್ರರಂಗದ ಕೆಲವು ಸ್ನೇಹಿತರನ್ನು ರಾಜ್​ ಕೌಶಲ್​ ಭೇಟಿ ಮಾಡಿದ್ದರು. ನಿರ್ದೇಶಕ ಓನಿರ್​, ನಟಿಯರಾದ ನೇಹಾ ಧೂಪಿಯಾ, ಟಿಸ್ಕಾ ಚೋಪ್ರಾ, ನಟ ರೋಹಿತ್​ ಬೋಸ್​ ರಾಯ್​ ಸೇರಿದಂತೆ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ರಾಜ್​ ಕೌಶಲ್​ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಇದನ್ನೂ ಓದಿ:

ನಟಿ ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ನಿಧನ; 49 ವರ್ಷಕ್ಕೇ ಬದುಕು ಮುಗಿಸಿದ ಬಾಲಿವುಡ್ ಸಿನಿಮಾ ನಿರ್ಮಾಪಕ

Sanchari Vijay Final Rites : ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದ ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ