ಬಿಗ್​ ಬಾಸ್​ ಮನೆಯಲ್ಲಿ ಮಾಡಿದ ಆ ಒಂದು ತಪ್ಪಿಗೆ ಭಾರೀ ದಂಡ ತೆರಲಿದ್ದಾರಾ ಅರವಿಂದ್​?

ಅರವಿಂದ್​ ಈ ರೀತಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್​ಗಳಾಗಿವೆ. ಇತ್ತೀಚೆಗೆ ಚಕ್ರವರ್ತಿ ಜತೆ ಅರವಿಂದ್​ ಹೆಚ್ಚು ಬೆರೆಯುತ್ತಿದ್ದಾರೆ. ಹೀಗಾಗಿ, ಸಹವಾಸ ದೋಷ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಾಡಿದ ಆ ಒಂದು ತಪ್ಪಿಗೆ ಭಾರೀ ದಂಡ ತೆರಲಿದ್ದಾರಾ ಅರವಿಂದ್​?
ಅರವಿಂದ್​ ಕೆಪಿ- ನಿಧಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 30, 2021 | 4:21 PM

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಕೆ.ಪಿ. ತಾವಾಗಿಯೇ ಯಾರ ತಂಟೆಗೂ ಹೋದವರಲ್ಲ. ಪ್ರತಿ ಬಾರಿ ಆಟವನ್ನು ಅವರು ಸ್ಪೋರ್ಟಿವ್​ ಆಗಿ ತೆಗೆದುಕೊಳ್ಳುತ್ತಾರೆ. ಆದರೆ, ಜೂನ್​ 29ರ ಎಪಿಸೋಡ್​ನಲ್ಲಿ ಅವರು ಮೊದಲಿನ ಅರವಿಂದ್ ಆಗಿರಲಿಲ್ಲ. ಅವರು ಮಾಡಿದ ಆ ಒಂದು ತಪ್ಪಿನಿಂದ ಸಾಕಷ್ಟು ಟ್ರೋಲ್​ ಆಗುತ್ತಿದ್ದಾರೆ.

ಬಿಗ್​ ಬಾಸ್ ಸ್ಪರ್ಧಿಗಳಿಗೆ​ ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರ ಅನುಸಾರ ಎರಡು ಟೀಂಗಳನ್ನು ಮಾಡಲಾಗಿದೆ. ಒಂದು ತಂಡಕ್ಕೆ ಅರವಿಂದ್ ಕ್ಯಾಪ್ಟನ್​ ಆದರೆ, ಮತ್ತೊಂದು ಟೀಂಅನ್ನು ಮಂಜು ಮುನ್ನಡೆಸುತ್ತಿದ್ದಾರೆ. ಟಾಸ್ಕ್​ ನಿಯಮದ ಅನುಸಾರ ಟಿಶ್ಯೂ ರೋಲ್​ಗಳನ್ನು ಸ್ಟೋ ರೂಂನಿಂದ ತಂದು ಗುರುತಿಸಿದ ಜಾಗದಲ್ಲಿ ಒಂದರ ಮೇಲೆ ಒಂದನ್ನು ಎತ್ತರವಾಗಿ ನಿಲ್ಲಿಸಬೇಕು. ಈ ಟಾಸ್ಕ್​ ಆಡುವಾಗ ದಾರಿಯಲ್ಲಿ ಬಿದ್ದ ಟಿಶ್ಯುರೋಲ್​ಗಳನ್ನು ನಿಧಿ ಹೆಕ್ಕಿದ್ದಾರೆ. ಇದು ಅರವಿಂದ್ ಕೋಪಕ್ಕೆ ಕಾರಣವಾಗಿದೆ.

ಈ ವಿಚಾರದಲ್ಲಿ ಮಂಜು-ಅರವಿಂದ್ ಮಾತನಾಡುವಾಗ ನಿಧಿ ಮಧ್ಯ ಪ್ರವೇಶಿಸಿದ್ದಾರೆ. ಆಗ ಅರವಿಂದ್, ‘ನಾನು ಕ್ಯಾಪ್ಟನ್​ ಜತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳಿ’ ಎಂದಿದ್ದಾರೆ.

ನಂತರ ಅರವಿಂದ್​ ಅವರು ಹೋಗಿ ನಿಧಿಗೆ ಕ್ಷಮೆ ಕೇಳಿದ್ದಾರೆ. ಆದರೆ, ನಿಧಿ ಇದನ್ನು ಒಪ್ಪಿಲ್ಲ. ಇಬ್ಬರ ನಡುವೆ ಈ ವಿಚಾರಕ್ಕೆ ಮಾತಿನ ಚಕಮಕಿ ಏರ್ಪಟ್ಟಿದೆ. ‘ನೀವು ಏನು ಎಂಬುದು ನಂಗೆ ಗೊತ್ತು ಎಂದು ಪದೇಪದೇ ಹೇಳಿದ್ದೀರಿ. ಈ ಆಟದಿಂದ ನಾನು ಏನು ಎಂಬುದು ಗೊತ್ತಾಗುತ್ತದೆಯೇ? ನಾನು ಎಲ್ಲ ಬೈಗುಳಗಳನ್ನು ತೆಗೆದುಕೊಳ್ಳೋಕೆ ರೆಡಿ ಇಲ್ಲ. ನೀವು ಸಾರಿ ಎಂದು ಕೇಳುತ್ತೀರಿ. ಮತ್ತೆ ನನಗೆ ಕ್ಯಾರೆಕ್ಟರ್​ ಇಲ್ಲ ಎಂದು ಹೇಳುತ್ತೀರಿ. ನನಗೆ ಕ್ಯಾರೆಕ್ಟರ್​ ಇದೆ ಅರವಿಂದ್. ನಿಮಗೆ  ಕ್ರೀಡಾಸ್ಫೂರ್ತಿ ​ ಇಲ್ಲ. ಸೋಲನ್ನು ಒಪ್ಪಿಕೊಳ್ಳೋಕೆ ನಿನಗೆ ಆಗಲ್ಲ’ ಎಂದು ನಿಧಿ ಗರಂ ಆದರು.

ಅರವಿಂದ್​ ಈ ರೀತಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್​ಗಳಾಗಿವೆ. ಇತ್ತೀಚೆಗೆ ಚಕ್ರವರ್ತಿ ಜತೆ ಅರವಿಂದ್​ ಹೆಚ್ಚು ಬೆರೆಯುತ್ತಿದ್ದಾರೆ. ಹೀಗಾಗಿ, ಸಹವಾಸ ದೋಷ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ. ಅರವಿಂದ್ ಈ ರೀತಿ ಮಾತನಾಡಿರುವುದಕ್ಕೆ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಅವರ ಬಿಗ್​ ಬಾಸ್​ ಜರ್ನಿಗೆ ಹಿನ್ನಡೆ ಆದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

Published On - 3:28 pm, Wed, 30 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ