AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಮಿನೇಷನ್​​ನಲ್ಲಿ ಅರವಿಂದ್ ಬಿಟ್ಟು ಶುಭಾ ಅವರನ್ನು ದಿವ್ಯಾ ಉರುಡುಗ ಸೇವ್​ ಮಾಡಿದ್ದೇಕೆ?

ದಿವ್ಯಾ ಉರುಡುಗ ಮನೆಯ ಕ್ಯಾಪ್ಟನ್​. ಅರವಿಂದ್ ಅವರು ನೇರವಾಗಿ ನಾಮಿನೇಟ್​ ಆಗಿದ್ದಾರೆ. ಈ ಇಬ್ಬರು ಸದಸ್ಯರನ್ನು ಬಿಟ್ಟು ಉಳಿದವರ ಹೆಸರನ್ನು ಆಯ್ಕೆ ಮಾಡಬೇಕಿತ್ತು.

ನಾಮಿನೇಷನ್​​ನಲ್ಲಿ ಅರವಿಂದ್ ಬಿಟ್ಟು ಶುಭಾ ಅವರನ್ನು ದಿವ್ಯಾ ಉರುಡುಗ ಸೇವ್​ ಮಾಡಿದ್ದೇಕೆ?
ಅರವಿಂದ್​ ಕೆಪಿ, ದಿವ್ಯಾ ಉರುಡುಗ
TV9 Web
| Edited By: |

Updated on: Jul 06, 2021 | 7:05 AM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನಲ್ಲಿ ಮೊದಲ ಎಲಿಮಿನೇಷನ್​​ ನಡೆದಿದೆ. ಇದಾದ ಮರುದಿನವೇ ಎರಡನೇ ಎಲಿಮಿನೇಷನ್​ಗೆ ನಾಮಿನೇಷನ್​​​ ನಡೆದಿದೆ. ಮನೆಯ ಬಹುತೇಕ ಸದಸ್ಯರು ಈ ವಾರ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ. ಈ ಮೂಲಕ ಎಲ್ಲಾ ಸ್ಪರ್ಧಿಗಳು ಅತ್ಯುತ್ತಮವಾಗಿ ಪರ್ಫಾರ್ಮೆನ್ಸ್​ ಮಾಡೋದು ಅನಿವಾರ್ಯವಾಗಿದೆ.  

ದಿವ್ಯಾ ಉರುಡುಗ ಮನೆಯ ಕ್ಯಾಪ್ಟನ್​. ಅರವಿಂದ್ ಅವರು ನೇರವಾಗಿ ನಾಮಿನೇಟ್​ ಆಗಿದ್ದಾರೆ. ಈ ಇಬ್ಬರು ಸದಸ್ಯರನ್ನು ಬಿಟ್ಟು ಉಳಿದವರ ಹೆಸರನ್ನು ಆಯ್ಕೆ ಮಾಡಬೇಕಿತ್ತು. ನಾಮಿನೇಷನ್​ ವೇಳೆ ಚಕ್ರವರ್ತಿ ಚಂದ್ರಚೂಡ್​ಗೆ ಹೆಚ್ಚು ಮತಗಳು ಬಿದ್ದವು. ಚಕ್ರವರ್ತಿ ಮನೆಯ ವಾತಾವರಣ ಹಾಳು ಮಾಡುತ್ತಿದ್ದಾರೆ, ಅವರಲ್ಲಿ ಕೋಪ ಜಾಸ್ತಿ ಎಂಬಿತ್ಯಾದಿ ಆರೋಪಗಳು ಬಂದವು.

ಮನೆಯಲ್ಲಿ ಸ್ಟ್ರಾಂಗ್​ ಸ್ಪರ್ಧಿ ಎನಿಸಿಕೊಂಡಿರುವ ಮಂಜು ಪಾವಗಡ ನಂತರದ ಸ್ಥಾನ ಪಡೆದುಕೊಂಡರು. ಅವರು ತಮ್ಮದೇ ನಿಯಮ ಮಾಡಿಕೊಂಡು ಆಡುತ್ತಿದ್ದಾರೆ, ಗುಂಪುಗಾರಿಕೆ ಹುಟ್ಟು ಹಾಕುತ್ತಿದ್ದಾರೆ, ಸ್ಟ್ರಾಂಗ್​ ಪ್ಲೇಯರ್​ ಎಂಬಿತ್ಯಾದಿ ಆರೋಪಗಳು ಅವರ ವಿರುದ್ಧ ಕೇಳಿ ಬಂದವು.

ಪ್ರಿಯಾಂಕಾ ತಿಮ್ಮೇಶ್ ತುಂಬಾ ಅವಕಾಶವಾದಿ, ಅವರು ಚೆನ್ನಾಗಿ ಆಡಬಹುದಿತ್ತು ಎಂದು ಕೆಲವರು ನಾಮಿನೇಟ್​ ಮಾಡಿದರು. ಪ್ರಶಾಂತ್​ ಸಂಬರಗಿ, ಶುಭಾ ಪೂಂಜಾ, ರಘು, ಶಮಂತ್, ದಿವ್ಯಾ ಸುರೇಶ್​, ವೈಷ್ಣವಿ ಅವರ ಹೆಸರು ನಾಮಿನೇಷನ್​ ಪಟ್ಟಿ ಸೇರಿಕೊಂಡವು.

ಕ್ಯಾಪ್ಟನ್​ ಆದ ಕಾರಣ ದಿವ್ಯಾ ಉರುಡುಗ ಅವರಿಗೆ ಒಬ್ಬರನ್ನು ಸೇವ್​ ಮಾಡೋಕೆ ಅವಕಾಶ ನೀಡಲಾಯಿತು. ಈ ವೇಳೆ ದಿವ್ಯಾ, ‘ಶುಭಾ ಪೂಂಜಾ ಸೇವ್​ ಮಾಡ್ತೀನಿ. ಅವರು ನನಗೆ ವೈಯಕ್ತಿಕವಾಗಿ ಇಷ್ಟ. ಅವರು ಇನ್ನೂ ಮುಂದೆ ಹೋಗಬೇಕು ಅಂತ ನಂಗೆ ಇಷ್ಟ’ ಎಂದು ಸೇವ್​ ಮಾಡಿದರು. ಅರವಿಂದ್​ ನೇರವಾಗಿ ನಾಮಿನೇಟ್​ ಆದ್ದರಿಂದ ಅವರನ್ನು ಸೇವ್​ ಮಾಡುವ ಅವಕಾಶವನ್ನು ಬಿಗ್​ ಬಾಸ್ ನೀಡಿಲ್ಲ.

ಹೀಗಾಗಿ ಈ ವಾರ ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​, ರಘು ಗೌಡ, ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ.

ಇದನ್ನೂ ಓದಿ:

‘ಮಂಜು ಬೆಂಬಲಿಗರ ವೋಟ್​ ನಂಗೆ ಸಿಗಲ್ಲ’; ದಿವ್ಯಾ ಸುರೇಶ್​ ಲೆಕ್ಕಾಚಾರ ಉಲ್ಟಾಪಲ್ಟಾ

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?