- TV9 Kannada Photo gallery Sharmiela Mandre Marriage with Sudhan Sundaram in Jaipur Wedding Pics go viral
ಜೈಪುರದಲ್ಲಿ ನಡೆಯಿತು ಶರ್ಮಿಳಾ ಮಾಂಡ್ರೆ ಮದುವೆ; ಇಲ್ಲಿದೆ ಫೋಟೋ ಗ್ಯಾಲರಿ
ಜೈಪುರದಲ್ಲಿ ಅದ್ದೂರಿಯಾಗಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ನಿರ್ಮಾಪಕ ಸುಧನ್ ಸುಂದರಂ ಅವರು ಮದುವೆ ಆಗಿದ್ದಾರೆ. ಜುಲೈ 12ರಂದು ವಿವಾಹ ನಡೆದಿದ್ದು, ಫೋಟೋಗಳು ವೈರಲ್ ಆಗುತ್ತಿವೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶರ್ಮಿಳಾ ಮಾಂಡ್ರೆ ಅವರಿಗೆ ಸೆಲೆಬ್ರಿಟಿಗಳು, ಆಪ್ತರು ಮತ್ತು ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
Updated on: Jul 13, 2026 | 9:36 PM

ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ಅವರ ಮದುವೆ ನಡೆದಿದೆ. ವಿವಾಹದ ಕಲರ್ಫುಲ್ ಫೋಟೋಗಳು ಲಭ್ಯವಾಗಿವೆ.

ಕಾಲಿವುಡ್ ನಿರ್ಮಾಪಕ ಸುಧನ್ ಸುಂದರಂ ಜೊತೆ ಶರ್ಮಿಳಾ ಮಾಂಡ್ರೆ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅವರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

ಈ ವಿವಾಹಕ್ಕೆ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸ್ಯಾಂಡಲ್ವುಡ್ ನಟಿಯರಾದ ಧನ್ಯಾ ರಾಮ್ಕುಮಾರ್, ರಮ್ಯಾ ದಿವ್ಯ ಸ್ಪಂದನಾ ಸೇರಿದಂತೆ ಕೆಲವೇ ಸೆಲೆಬ್ರಿಟಿಗಳು ಮದುವೆಗೆ ಸಾಕ್ಷಿಯಾದರು.

ಇತ್ತೀಚೆಗೆ ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಸುಂದರಂ ಅವರ ನಿಶ್ಚಿತಾರ್ಥ ನೆರವೇರಿತ್ತು. ಆ ಫೋಟೋಗಳನ್ನು ಶರ್ಮಿಳಾ ಮಾಂಡ್ರೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಹಲವು ವರ್ಷಗಳಿಂದ ಶರ್ಮಿಳಾ ಮಾಂಡ್ರೆ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿರ್ಮಾಪಕಿ ಆಗಿಯೂ ಅವರು ಸಕ್ರಿಯರಾಗಿದ್ದಾರೆ. ಪರಭಾಷೆಯ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.




