AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ಬಿಗ್​ ಬಾಸ್​ ಮನೆಯಲ್ಲಿ ‘ಕ್ವಾಟ್ಲೆ ಕಿಲಾಡಿಗಳು’ ಹಾಗೂ ‘ಸೂರ್ಯ ಸೇನೆ’ ಎಂದು ಎರಡು ತಂಡಗಳನ್ನು ಮಾಡಲಾಗಿತ್ತು. ಕ್ವಾಟ್ಲೆ ತಂಡಕ್ಕೆ ಮಂಜು ಕ್ಯಾಪ್ಟನ್​ ಆದರೆ, ಸೂರ್ಯಸೇನೆ ತಂಡಕ್ಕೆ ಅರವಿಂದ್ ಕ್ಯಾಪ್ಟನ್​.

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ
ದಿವ್ಯಾ ಉರುಡುಗ
TV9 Web
| Edited By: |

Updated on: Jul 02, 2021 | 10:35 PM

Share

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಮೊದಲ​ ಇನ್ನಿಂಗ್ಸ್​ನಲ್ಲಿ 11 ವಾರ ಕಳೆದಿದ್ದ ಸ್ಪರ್ಧಿಗಳು ಒಂದು ಗ್ಯಾಪ್​ ತೆಗೆದುಕೊಂಡು ಮತ್ತೆ ಮನೆ ಪ್ರವೇಶಿಸಿದ್ದಾರೆ. ಎರಡನೇ ಇನ್ನಿಂಗ್ಸ್​ನಲ್ಲಿ ಸ್ಪರ್ಧಿಗಳು ಎರಡು ವಾರ ಕಳೆದಿದ್ದಾರೆ. ಹೀಗಿರುವಾಗಲೇ ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ‘ಕ್ವಾಟ್ಲೆ ಕಿಲಾಡಿಗಳು’ ಹಾಗೂ ‘ಸೂರ್ಯ ಸೇನೆ’ ಎಂದು ಎರಡು ತಂಡಗಳನ್ನು ಮಾಡಲಾಗಿತ್ತು. ಕ್ವಾಟ್ಲೆ ತಂಡಕ್ಕೆ ಮಂಜು ಕ್ಯಾಪ್ಟನ್​ ಆದರೆ, ಸೂರ್ಯಸೇನೆ ತಂಡಕ್ಕೆ ಅರವಿಂದ್ ಕ್ಯಾಪ್ಟನ್​. ಎರಡೂ ತಂಡಗಳು ಮೂರ್ನಾಲ್ಕು ದಿನಗಳ ಕಾಲ ಟಾಸ್ಕ್​ನಲ್ಲಿ ಪಾಲ್ಗೊಂಡರು. ಈ ಟಾಸ್ಕ್​ನಲ್ಲಿ ಸೂರ್ಯ ಸೇನೆ ಗೆದ್ದಿದೆ. ಈ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಂಡಿದೆ.

ಸೂರ್ಯಸೇನೆ ತಂಡದಲ್ಲಿರುವ ಅರವಿಂದ್​, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್​ ಸಂಬರಗಿ, ಶಮಂತ್​ ಬ್ರೋ ಗೌಡ, ವೈಷ್ಣವಿ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಪಾಲ್ಗೊಂಡರು. ಟಾಸ್ಕ್​ನ ಅನುಸಾರ ಧರಿಸಿದ ಬಟ್ಟೆಯ ಮೇಲೆ ಮತ್ತೊಂದು ಬಟ್ಟೆ ಹಾಕಿಕೊಳ್ಳಬೇಕು. ಅತಿ ಹೆಚ್ಚು ಬಟ್ಟಿ ಹಾಕಿದವರು ಟಾಸ್ಕ್​ ಗೆದ್ದಂತೆ. ಈ ಟಾಸ್ಕ್​​ನಲ್ಲಿ ದಿವ್ಯಾ ಗೆದ್ದು ಬಿಗ್​ ಬಾಸ್​ ಸೀಸನ್​ 8ರ ಮೊದಲ ಮಹಿಳಾ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದರು.

ಈವರೆಗೆ ಬಿಗ್​ ಬಾಸ್​ ಸೀಸನ್​ 8ರಲ್ಲಿ ಮಹಿಳಾ ಕ್ಯಾಪ್ಟನ್​ ಆಗಿರಲಿಲ್ಲ. ಕಳೆದ ವಾರದ ಪಂಚಾಯ್ತಿಯಲ್ಲಿ ಸುದೀಪ್​ ಕೂಡ ಈ ಬಗ್ಗೆ ಮಾತನಾಡಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಮಹಿಳೆಯರು ಕ್ಯಾಪ್ಟನ್​ ಆಗದೇ ಇರೋದಕ್ಕೆ ಕಾರಣವೇನು ಎಂದು ಮನೆಯವರನ್ನು ಪ್ರಶ್ನೆ ಮಾಡಿದ್ದರು. ಇದಕ್ಕೆ ಕೆಲವರು ಅದೃಷ್ಟವನ್ನು​ ದ್ವೇಷಿಸಿದರೆ, ಇನ್ನೂ ಕೆಲವರು ನಾವು ಪ್ರಯತ್ನ ಮಾಡುತ್ತೇವೆ ಆದರೆ, ಕ್ಯಾಪ್ಟನ್​ ಆಗೋಕೆ ಸಾಧ್ಯವಾಗುತ್ತಿಲ್ಲ ಎಂದಿದ್ದರು. ಕೊನೆಗೂ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಕ್ಯಾಪ್ಟನ್​ ಆಗಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಇದನ್ನೂ ಓದಿ: ‘ಮಂಜು ಬೆಂಬಲಿಗರ ವೋಟ್​ ನಂಗೆ ಸಿಗಲ್ಲ’; ದಿವ್ಯಾ ಸುರೇಶ್​ ಲೆಕ್ಕಾಚಾರ ಉಲ್ಟಾಪಲ್ಟಾ

ಅರವಿಂದ್​ ಕೆ.ಪಿ.-ದಿವ್ಯಾ ಉರುಡುಗ ಪ್ರೇಮಕಥೆ ಆಧರಿಸಿ ಸಿನಿಮಾ; ಟೈಟಲ್​ ಕೂಡ ಫೈನಲ್

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?