AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರವಿಂದ್​ ಕೆ.ಪಿ.-ದಿವ್ಯಾ ಉರುಡುಗ ಪ್ರೇಮಕಥೆ ಆಧರಿಸಿ ಸಿನಿಮಾ; ಟೈಟಲ್​ ಕೂಡ ಫೈನಲ್

ಚಕ್ರವರ್ತಿ ಚಂದ್ರಚೂಡ್​ ಅವರಿಗೆ ದಿವ್ಯಾ-ಅರವಿಂದ್ ಕಂಡರೆ ಎಲ್ಲಿಲ್ಲದ ಅಕ್ಕರೆ. ಇಬ್ಬರ ಪ್ರೀತಿ ನಿಜ ಎನಿಸುತ್ತದೆ. ಹಾಗಾಗಿ, ನಾನು ಆ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದರು.

ಅರವಿಂದ್​ ಕೆ.ಪಿ.-ದಿವ್ಯಾ ಉರುಡುಗ ಪ್ರೇಮಕಥೆ ಆಧರಿಸಿ ಸಿನಿಮಾ; ಟೈಟಲ್​ ಕೂಡ ಫೈನಲ್
ಅರವಿಂದ್​ ಕೆಪಿ, ದಿವ್ಯಾ ಉರುಡುಗ
TV9 Web
| Updated By: ಮದನ್​ ಕುಮಾರ್​|

Updated on: Jul 02, 2021 | 7:21 AM

Share

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ಸಾಕಷ್ಟು ಕ್ಲೋಸ್​ ಆಗಿದ್ದಾರೆ. ಬಿಗ್​ ಬಾಸ್​ ಮನೆಯ ಇವರು ಕ್ಯೂಟ್​ ಕಪಲ್​ ಕೂಡ ಹೌದು. ಜೋಡಿ ಟಾಸ್ಕ್​ ಮೂಲಕ ಆರಂಭವಾದ ಇವರ ಜರ್ನಿ ಇಲ್ಲಿಯವರೆಗೆ ಬಂದು ನಿಂತಿದೆ. ಇಬ್ಬರೂ ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ಒಟ್ಟಾಗಿಯೇ ಇರುತ್ತಾರೆ. ಈಗ ಇಬ್ಬರ ಜೀವನ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದೆ! ಹೀಗೊಂದು ಘೋಷಣೆ ಬಿಗ್​ ಬಾಸ್​ ಮನೆಯಲ್ಲಿಯೇ ಆಗಿದೆ.

ಚಕ್ರವರ್ತಿ ಚಂದ್ರಚೂಡ್​ ಅವರಿಗೆ ದಿವ್ಯಾ-ಅರವಿಂದ್ ಕಂಡರೆ ಎಲ್ಲಿಲ್ಲದ ಅಕ್ಕರೆ. ‘ಇಬ್ಬರ ಪ್ರೀತಿ ನಿಜ ಎನಿಸುತ್ತದೆ. ಹಾಗಾಗಿ, ನಾನು ಆ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ’ ಎಂದು ಹೇಳಿದ್ದರು. ಹೀಗಾಗಿ, ಅರವಿಂದ್​-ದಿವ್ಯಾ ಬಗ್ಗೆ ಸಿನಿಮಾ ಮಾಡೋಕೆ ಚಕ್ರವರ್ತಿ ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿಯೇ ಹೇಳಿದ್ದಾರೆ.

‘ನನಗೊಂದು ಆಸೆ ಇದೆ. ದಿವ್ಯಾ ಉರುಡುಗ-ಅರವಿಂದ್ ಇಟ್ಟುಕೊಂಡು ಸಿನಿಮಾ ಮಾಡಬೇಕು. ಕಥೆಯನ್ನು 10 ನಿಮಿಷಕ್ಕೆ ಕೊಡ್ತೀನಿ. ಸಿನಿಮಾ ನಾನಿನ್ನ ಮರೆಯಲಾರೆ ತರ ಇರಬೇಕು.  ಮ್ಯೂಸಿಕ್​ ಡೈರೆಕ್ಟರ್ (ಶಮಂತ್​)​ ಇಲ್ಲಿಯೇ ಕೂತಿದ್ದಾನೆ. ನಾನು ಡೈರೆಕ್ಟ್​ ಮಾಡ್ತೀನಿ. ಸಿನಿಮಾಗೆ ‘ಅರವಿಯಾ’ ಎಂದು ಹೆಸರಿಡೋಣ’ ಎಂದರು ಚಕ್ರವರ್ತಿ.

ನಾನು ಹೀರೋಯಿನ್​ ತಮ್ಮ ಆಗ್ತೀನಿ ಎಂದು ಶಮಂತ್​ ಹೇಳಿದರೆ, ನಾನು ಹೀರೋ ಅಣ್ಣ ಆಗ್ತೀನಿ ಎಂದು ಪ್ರಶಾಂತ್​ ಹೇಳಿದರು. ‘ಕಥೆ ರೆಡಿ ಆದಮೇಲೆ ಹೇಳ್ತೀನಿ. ರಿಕ್ವೆಸ್ಟ್​ ಮಾಡಿಕೊಂಡ್ರೆ ಪಾತ್ರ ಕೊಡುತ್ತೇನೆ. ಈ ಕಥೇಲಿ ಹೊರಗಿನ ವಿಚಾರ ಹೆಚ್ಚಿರುತ್ತದೆ. ಬಿಗ್​ ಬಾಸ್​ ಒಂದು ಎಪಿಸೋಡ್​ ಮಾತ್ರ ಇರುತ್ತದೆ. ಅದರಲ್ಲಿ ಇಬ್ಬರು ರಿಂಗ್​ ಕೊಟ್ಟು ಹೇಗೆ ಒಂದಾದರು ಎಂದು ಮಾತ್ರ ತೋರಿಸುತ್ತೇವೆ. ಉಳಿದೆಲ್ಲ ವಿಚಾರಗಳು ಹೊರಗಿನದ್ದು ಇರಲಿದೆ. ಬೇಕಿದ್ದರೆ ಇಲ್ಲಿಯೇ ಸಿನಿಮಾ ಕಥೆ ಹೇಳುತ್ತೇನೆ. ಜನರಿಗೆ ಕಥೆ ಹೇಳಿಯೇ ಸಿನಿಮಾ ಮಾಡೋಣ’ ಎಂದರು ಚಕ್ರವರ್ತಿ.

ಇದನ್ನೂ ಓದಿ:

‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು 

‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!