AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್‌ನಲ್ಲಿ ಮೋಡಿ ಮಾಡಲು ‘ಧುರಂಧರ್ 2’ ವಿಫಲ; ಮೊದಲ ದಿನವೇ ಮುಗ್ಗರಿಸಿದ ಚಿತ್ರ

‘ಧುರಂಧರ್ 2’ ಸಿನಿಮಾ ಜಪಾನ್​ನಲ್ಲಿ ಭಾರಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ. ಮೊದಲ ದಿನ ಈ ಚಿತ್ರಕ್ಕೆ ಜಪಾನ್ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಟಾಪ್ 25 ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೂಡ ‘ಧುರಂಧರ್ 2’ ಸೋತಿದೆ.

ಜಪಾನ್‌ನಲ್ಲಿ ಮೋಡಿ ಮಾಡಲು ‘ಧುರಂಧರ್ 2’ ವಿಫಲ; ಮೊದಲ ದಿನವೇ ಮುಗ್ಗರಿಸಿದ ಚಿತ್ರ
Dhurandhar
ಮದನ್​ ಕುಮಾರ್​
|

Updated on: Jul 13, 2026 | 10:31 PM

Share

ಮುಖ್ಯಾಂಶಗಳು

  • ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಚಿತ್ರಕ್ಕೆ ಜಪಾನ್​ನಲ್ಲಿ ಹಿನ್ನಡೆ.
  • ಭಾರಿ ಪ್ರಚಾರ ಮಾಡಿ ಸಿನಿಮಾ ಬಿಡುಗಡೆ ಮಾಡಿದರೂ ನೀರಸ ಪ್ರತಿಕ್ರಿಯೆ.
  • ವಿಶ್ವಾದ್ಯಂತ ಅಬ್ಬರಿಸಿದ ಈ ಚಿತ್ರಕ್ಕೆ ಜಪಾನ್ ಜನರು ತೋರಿಸುತ್ತಿಲ್ಲ ಆಸಕ್ತಿ.

ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಸೂಪರ್ ಹಿಟ್ ‘ಧುರಂಧರ್’ (Dhurandhar) ಸಿನಿಮಾ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಈ ಫ್ರಾಂಚೈಸಿಯ ಎರಡೂ ಸಿನಿಮಾಗಳು ಸೇರಿ ಬರೋಬ್ಬರಿ 3,100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದ್ದವು. ಆದರೆ, ಜುಲೈ 10ರಂದು ಜಪಾನ್‌ನಲ್ಲಿ ಬಿಡುಗಡೆಯಾಗಿರುವ ಈ ಆ್ಯಕ್ಷನ್ ಡ್ರಾಮಾ ಸಿನಿಮಾ ಅಲ್ಲಿನ ಬಾಕ್ಸ್ ಆಫೀಸ್‌ನಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ಕಾಣುವ ಮೂಲಕ ತನ್ನ ಜರ್ನಿಯನ್ನು ಆರಂಭಿಸಿದೆ.

25 ಸಿನಿಮಾಗಳ ಪಟ್ಟಿಯಲ್ಲೂ ಇಲ್ಲ:

ಭಾರೀ ಬಜೆಟ್‌ನ ಈ ಆ್ಯಕ್ಷನ್ ಚಿತ್ರವನ್ನು ಜಪಾನ್‌ನ ಸುಮಾರು 80 ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿತ್ತು. ಬಿಡುಗಡೆಗೂ ಮುನ್ನ ಜಪಾನ್‌ನಲ್ಲಿ ಚಿತ್ರದ ಪ್ರಚಾರವನ್ನು ಕೂಡ ಜೋರಾಗಿಯೇ ಮಾಡಲಾಗಿತ್ತು. ಆದರೆ, ವರದಿಗಳ ಪ್ರಕಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೂರೂ ದಿನಗಳಲ್ಲಿ ಜಪಾನ್‌ನ ಟಾಪ್ 25 ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೂಡ ಈ ಸಿನಿಮಾ ವಿಫಲವಾಗಿದೆ.

ಮೊದಲ ದಿನದ ಆಘಾತಕಾರಿ ಕಲೆಕ್ಷನ್:

ಚಿತ್ರ ಬಿಡುಗಡೆಯಾದ ಮೊದಲ ದಿನ ಮಧ್ಯಾಹ್ನ 2 ಗಂಟೆಯವರೆಗೆ 57 ಚಿತ್ರಮಂದಿರಗಳಲ್ಲಿ ಕೇವಲ 449 ಪ್ರೇಕ್ಷಕರು ಮಾತ್ರ ಸಿನಿಮಾ ನೋಡಿದ್ದರು. ಇನ್ನು ದಿನದ ದ್ವಿತೀಯಾರ್ಧದಲ್ಲೂ ಚಿತ್ರದ ಕಲೆಕ್ಷನ್‌ನಲ್ಲಿ ಯಾವುದೇ ದೊಡ್ಡ ಸುಧಾರಣೆ ಕಂಡುಬರಲಿಲ್ಲ. ಒಟ್ಟಾರೆಯಾಗಿ ಮೊದಲ ದಿನ ಜಪಾನ್‌ನ 80 ಸ್ಕ್ರೀನ್‌ಗಳಿಂದ ಚಿತ್ರಕ್ಕೆ ಸಿಕ್ಕಿದ್ದು ಕೇವಲ 900 ಪ್ರೇಕ್ಷಕರು ಮಾತ್ರ.

ಟಾಪ್ 10 ಲಿಸ್ಟ್‌ನಿಂದ ಹೊರಬಿದ್ದ ಧುರಂಧರ್:

ಜಪಾನ್‌ನಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನು ಸೆಳೆದ ಭಾರತದ ಟಾಪ್ 10 ಸಿನಿಮಾಗಳ ಲಿಸ್ಟ್‌ಗೆ ಸೇರಲು ‘ಧುರಂಧರ್’ ಚಿತ್ರಕ್ಕೆ ಕನಿಷ್ಠ 1,300 ಪ್ರೇಕ್ಷಕರ ಅಗತ್ಯವಿತ್ತು. ಸದ್ಯ 1,300 ಪ್ರೇಕ್ಷಕರೊಂದಿಗೆ ಸಲ್ಮಾನ್ ಖಾನ್ ಅವರ ‘ಟೈಗರ್ 3’ ಸಿನಿಮಾ 10ನೇ ಸ್ಥಾನದಲ್ಲಿದೆ. ಆದರೆ ರಣವೀರ್ ಸಿಂಗ್ ಸಿನಿಮಾ ಇದನ್ನು ಮೀರಿಸಲು ಸಾಧ್ಯವಾಗದೇ ಮುಗ್ಗರಿಸಿದೆ. ಇದಕ್ಕೂ ಮುನ್ನ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೂಡ ಈ ಟಾಪ್ 10 ಲಿಸ್ಟ್ ಸೇರುವಲ್ಲಿ ವಿಫಲವಾಗಿತ್ತು.

ಇದನ್ನೂ ಓದಿ: ಹೊಸ ಫೆರಾರಿ ಕಾರಲ್ಲಿ ಮುಂಬೈ ಸುತ್ತಿದ ರಣವೀರ್; ಇದರ ಬೆಲೆ 6 ಕೋಟಿ ರೂಪಾಯಿ

ಜಪಾನ್‌ನಲ್ಲಿ ಮೊದಲ ದಿನವೇ 8,230 ಪ್ರೇಕ್ಷಕರನ್ನು ಸೆಳೆಯುವ ಮೂಲಕ ‘ಆರ್‌ಆರ್‌ಆರ್’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನಗಳಲ್ಲಿ ‘ಸಾಹೋ’, ‘ಕಲ್ಕಿ 2898 ಎಡಿ’, ‘ಪಠಾಣ್’, ‘ಸಲಾರ್’, ‘ಜವಾನ್’, ‘ರಂಗಸ್ಥಲಂ’, ‘ದೇವರ’, ‘ಬಾಹುಬಲಿ 2’ ಮತ್ತು ‘ಟೈಗರ್ 3’ ಸಿನಿಮಾಗಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!