AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಖಿ ಸಾವಂತ್​ಗೆ ಪಾಠ ಕಲಿಸಿ, ಪ್ರಾಮಿಸ್​ ಮಾಡಿದ್ದ ಸಲ್ಲು; ಎಲ್ಲವನ್ನೂ ಬಾಯ್ಬಿಟ್ಟ ನಟಿ

ಹಿಂದಿ ಬಿಗ್​ ಬಾಸ್​ 14ನೇ ಸೀಸನ್​ನಲ್ಲಿ ಚಾಲೆಂಜರ್​ ಆಗಿ ರಾಖಿ ಸಾವಂತ್​ ಅವರು ದೊಡ್ಮನೆ ಪ್ರವೇಶಿಸಿದ್ದರು. ತಮ್ಮದೇ ಆದ ಮ್ಯಾನರಿಸಂ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ರಾಖಿ ಸಾವಂತ್​ಗೆ ಪಾಠ ಕಲಿಸಿ, ಪ್ರಾಮಿಸ್​ ಮಾಡಿದ್ದ ಸಲ್ಲು; ಎಲ್ಲವನ್ನೂ ಬಾಯ್ಬಿಟ್ಟ ನಟಿ
ರಾಖಿ ಸಾವಂತ್​ಗೆ ಪಾಠ ಕಲಿಸಿ, ಪ್ರಾಮಿಸ್​ ಮಾಡಿದ್ದ ಸಲ್ಲು; ಎಲ್ಲವನ್ನೂ ಬಾಯ್ಬಿಟ್ಟ ನಟಿ
TV9 Web
| Edited By: |

Updated on: Jul 06, 2021 | 5:05 PM

Share

ತಮ್ಮ ನೇರ ನಡೆ-ನುಡಿಯ ಕಾರಣಕ್ಕೆ ಹೆಸರಾದವರು ನಟಿ ರಾಖಿ ಸಾವಂತ್​. ಅವರು ಮಾಡಿದ್ದು ಕೆಲವೇ ಕೆಲವು ಸಿನಿಮಾಗಳಾದರೂ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಕಿರುತೆರೆ ರಿಯಾಲಿಟಿ ಶೋಗಳ ಮೂಲಕ ಅವರು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಖಿ ಬದುಕಿನಲ್ಲಿ ನಟ ಸಲ್ಮಾನ್​ ಖಾನ್​ ಅವರ ಪಾತ್ರ ದೊಡ್ಡದು. ಆ ಬಗ್ಗೆ ಈಗ ರಾಖಿ ಬಾಯಿ ಬಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಅವರು ಹೇಳಿಕೊಂಡಿದ್ದಾರೆ. ‘ನನ್ನ ಮನೆಯವರೂ ಕಲಿಸದ ಪಾಠವನ್ನು ನನಗೆ ಸಲ್ಮಾನ್​ ಖಾನ್​ ಕಲಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ನಾನು ಮೊದಲು ತುಂಬ ನೇರವಾಗಿ ಮಾತನಾಡುತ್ತಿದ್ದೆ. ಬಿಗ್​ ಬಾಸ್​ಗೆ ತೆರಳಿದಾಗ ಸಲ್ಮಾನ್​ ಖಾನ್​ ನನ್ನನ್ನು ಸುಧಾರಿಸಿದರು. ಶೋನಲ್ಲಿ ಕೆಟ್ಟ ಭಾಷೆ ಬಳಸಬಾರದು ಮತ್ತು ಬಿಗ್​ ಬಾಸ್​ನಿಂದ ಹೊರಗೆ ಹೋದ ಬಳಿಕವೂ ಕೆಟ್ಟ ಪದಗಳಲ್ಲಿ ಹೇಳಿಕೆ ನೀಡಬಾರದು ಅಂತ ಹೇಳಿದ್ದರು. ಅಲ್ಲದೆ, ನನ್ನ ಎಲ್ಲ ವಿಡಿಯೋಗಳನ್ನು ತಾವು ನೋಡುವುದಾಗಿ ನನಗೆ ಅವರು ಪ್ರಾಮಿಸ್​ ಮಾಡಿದ್ದಾರೆ’ ಎಂದು ರಾಖಿ ಹೇಳಿದ್ದಾರೆ.

‘ನೀನು ಏನೇ ಮಾಡಿದರೂ ನಾನು ಗಮನಿಸುತ್ತಾ ಇರುತ್ತೇನೆ. ಬಿಗ್​ ಬಾಸ್​ನಿಂದ ಹೊರಹೋದ ಬಳಿಕ ನಿನ್ನಲ್ಲಿ ನಾನು ದೊಡ್ಡ ಬದಲಾವಣೆ ನೋಡಲು ಬಯಸುತ್ತೇನೆ. ಬರೀ ಅದು ಇದು ಮಾತನಾಡಿಕೊಂಡು ಕಾಲ ಕಳೆಯುವ ಬದಲು, ನೀನು ಚೆನ್ನಾಗಿ ಕೆಲಸ ಮಾಡುತ್ತಿರುವುದನ್ನು ನೋಡಲು ನಾನು ಇಷ್ಟಪಡುತ್ತೇನೆ’ ಎಂದು ಸಲ್ಮಾನ್​ ಖಾನ್​ ಅವರು ರಾಖಿಗೆ ಬುದ್ಧಿಹೇಳಿ ಕಳಿಸಿದ್ದರಂತೆ. ಅದಕ್ಕೆ ತಕ್ಕಂತೆಯೇ ತಾವು ನಡೆದುಕೊಳ್ಳುತ್ತಿರುವುದಾಗಿ ರಾಖಿ ಸಾವಂತ್​ ಹೇಳಿದ್ದಾರೆ.

ಬರೀ ಬಾಯಿಮಾತಿನಲ್ಲಿ ಭರವಸೆ ನೀಡಿ ಕಳಿಸದೇ, ರಾಖಿ ಸಾವಂತ್​ ಅವರ ಫ್ಯಾಮಿಲಿಗೆ ಕಷ್ಟ ಬಂದಾಗ ಸಲ್ಲು ಸಹಾಯ ಮಾಡಿದ್ದಾರೆ ಕೂಡ. ‘ಸಲ್ಮಾನ್​ ಭಾಯ್​ ನನ್ನ ತಾಯಿಯನ್ನು ಉಳಿಸಿದರು. ಈ ಜೀವನದಲ್ಲಿ ತಾಯಿ ಬಿಟ್ಟರೆ ನನಗೆ ಏನೂ ಬೇಡ’ ಎಂದು ಈ ಹಿಂದೆ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ರಾಖಿ ತುಂಬಾ ಎಮೋಷನಲ್​ ಆಗಿದ್ದರು.

ಹಿಂದಿ ಬಿಗ್​ ಬಾಸ್​ 14ನೇ ಸೀಸನ್​ನಲ್ಲಿ ಚಾಲೆಂಜರ್​ ಆಗಿ ರಾಖಿ ಸಾವಂತ್​ ಅವರು ದೊಡ್ಮನೆ ಪ್ರವೇಶಿಸಿದ್ದರು. ತಮ್ಮದೇ ಆದ ಮ್ಯಾನರಿಸಂ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಫಿನಾಲೆವರೆಗೂ ಅವರು ಇತರೆ ಸ್ಪರ್ಧಿಗಳಿಗೆ ಪೈಪೋಟಿ ನೀಡಿದ್ದರು ಎಂಬುದು ಗಮನಿಸಬೇಕಾದ ವಿಚಾರ. ಈಗ ಸೋಶಿಯಲ್​ ಮೀಡಿಯಾದಲ್ಲಿ ಅವರು ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ.

ಇದನ್ನೂ ಓದಿ: Rakhi Sawant: ವಿಚಿತ್ರ ಭಂಗಿ, ವಿಚಿತ್ರ ಬಟ್ಟೆ; ಹೀಗೂ ಯೋಗ ಮಾಡ್ತಾರಾ? ಟ್ರೋಲ್​ ಆದ ರಾಖಿ ಸಾವಂತ್​

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!