ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಸೈಫ್ ಅಲಿ ಖಾನ್; ಈ ಪೋಸ್ಟರ್ನಲ್ಲಿ ಇರುವ ವಿವಾದ ಏನು?
Bhoot Police: ಕೆಲವೇ ದಿನಗಳ ಹಿಂದೆ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಖಾನ್ ಅವರ ಹೆಸರು ಕೂಡ ಇಂಥದ್ದೇ ವಿವಾದದಲ್ಲಿ ಸಿಲುಕಿಕೊಂಡಿತ್ತು. ಆ ವಿವಾದ ತಣ್ಣಗಾಯಿತು ಎನ್ನುವಾಗಲೇ ಸೈಫ್ ನಟನೆಯ ‘ಭೂತ್ ಪೊಲೀಸ್’ ಚಿತ್ರವೀಗ ಕಿರಿಕ್ ಮಾಡಿಕೊಂಡಿದೆ.
ಅದೇಕೋ ಗೊತ್ತಿಲ್ಲ, ನಟ ಸೈಫ್ ಅಲಿ ಖಾನ್ ಅವರು ಪದೇಪದೇ ಹಿಂದೂಗಳ ಭಾವನೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಈ ಹಿಂದೆ ಅವರು ನಟಿಸಿದ ‘ತಾಂಡವ್’ ವೆವ್ ಸರಣಿಯಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಹಿಂದೂಗಳು ಪ್ರತಿಭಟನೆ ಮಾಡಿದ್ದರು. ‘ಆದಿಪುರುಷ್’ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿರುವ ಸೈಫ್ ಅವರು ರಾವಣ ಒಳ್ಳೆಯವನು ಎಂಬರ್ಥದಲ್ಲಿ ಹೇಳಿಕೆ ನೀಡಿ ಅನೇಕರ ಕೆಂಗಣ್ಣಿಗೆ ಗುರಿಯಾದರು. ಈಗ ಅವರ ಹೊಸ ಸಿನಿಮಾದ ಒಂದು ಪೋಸ್ಟರ್ ನೋಡಿದ ಬಳಿಕ ಮತ್ತೆ ಹಿಂದೂಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೈಫ್ ಅಲಿ ಖಾನ್ ಅವರು ‘ಭೂತ್ ಪೊಲೀಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಹಾರರ್ ಕಾಮಿಡಿ ಶೈಲಿಯ ಸಿನಿಮಾ ಆಗಿದ್ದ್ದು, ಅದಕ್ಕೆ ತಕ್ಕಂತೆಯೇ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅಷ್ಟಕ್ಕೂ ಈ ಪೋಸ್ಟರ್ನಲ್ಲಿ ಅಂತಹ ಆಕ್ಷೇಪಾರ್ಹ ಅಂಶ ಏನಿದೆ? ಸೂಕ್ಷ್ಮವಾಗಿ ಗಮನಿಸಿದಾಗ ಸೈಫ್ ಅವರ ಹಿನ್ನೆಲೆಯಲ್ಲಿ ಹಿಂದೂ ಸಂತರು ಇರುವುದು ಕಾಣಿಸುತ್ತಿದೆ. ಅದನ್ನು ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ. ಆ ಸೈಫ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
View this post on Instagram
‘ಈ ಸಿನಿಮಾ ಪೋಸ್ಟರ್ನಲ್ಲಿ ಹಿಂದೂ ಸಂತರು ಯಾಕೆ ಇದ್ದಾರೆ? ಇದರಲ್ಲಿ ಮುಸ್ಲಿಂ ಮೌಲ್ವಿ ಯಾಕೆ ಇಲ್ಲ? ತಾಂಡವ್ ವಿವಾದದಿಂದ ಸೈಫ್ ಯಾವುದೇ ಪಾಠ ಕಲಿತಿಲ್ಲ ಎನಿಸುತ್ತದೆ’ ಎಂದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ. ಅಲ್ಲದೆ, ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂಬ ಅಭಿಯಾನ ಕೂಡ ಟ್ವಿಟರ್ನಲ್ಲಿ ಶುರುವಾಗಿದೆ. ‘ಭೂತ್ ಪೊಲೀಸ್’ ಚಿತ್ರದಲ್ಲಿ ಅರ್ಜುನ್ ಕಪೂರ್, ಜಾಕ್ವಲೀನ್ ಫರ್ನಾಂಡೀಸ್, ಯಾಮಿ ಗೌತಮ್ ಮುಂತಾದವರು ನಟಿಸುತ್ತಿದ್ದಾರೆ.
Why #BhootPolice poster had Hindu Saints in background ?
Why it’s not any Muslim mulla or Maulanas ?? #BoycottBollywood
Bollywood consistently finds its way to mock Hindu Saints ?????#SaifAliKhan | #ArjunKapoor | #YamiGautam | #JacquelineFernandez @YogiDevnath2 pic.twitter.com/MBof4ZlGKc
— jadhav shankar (@jadhav_shankara) July 5, 2021
ಕೆಲವೇ ದಿನಗಳ ಹಿಂದೆ ಸೈಫ್ ಪತ್ನಿ ಕರೀನಾ ಕಪೂರ್ ಖಾನ್ ಅವರ ಹೆಸರು ಕೂಡ ಇಂಥದ್ದೇ ವಿವಾದದಲ್ಲಿ ಸಿಲುಕಿಕೊಂಡಿತ್ತು. ಸಿನಿಮಾವೊಂದರಲ್ಲಿ ಸೀತೆಯ ಪಾತ್ರ ಮಾಡಲು ಕರೀನಾ ಕಪೂರ್ ಕೋಟಿಗಟ್ಟಲೆ ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದ ಯಾವುದೇ ನಟಿಯಿಂದ ಸೀತೆಯ ಪಾತ್ರ ಮಾಡಿಸಬಾರದು ಎಂದು ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ವಿವಾದ ತಣ್ಣಗಾಯಿತು ಎನ್ನುವಾಗಲೇ ಸೈಫ್ ಅವರ ‘ಭೂತ್ ಪೊಲೀಸ್’ ಚಿತ್ರವೀಗ ಕಿರಿಕ್ ಮಾಡಿಕೊಂಡಿದೆ.
ಇದನ್ನೂ ಓದಿ:
ಕರೀನಾ ಕಪೂರ್ ಸೀತೆ ಪಾತ್ರ ಮಾಡುವಂತಿಲ್ಲ; ಇದಕ್ಕೂ ಸೈಫ್ ಅಲಿ ಖಾನ್ಗೂ ಏನು ಸಂಬಂಧ?
ಸೈಫ್ ಪುತ್ರಿಯ ಗಾಂಜಾ ಪುರಾಣ ಬಯಲು ಮಾಡಿದ ರಿಯಾ ಚಕ್ರವರ್ತಿ; ಎನ್ಸಿಬಿ ಮುಂದೆ ಶಾಕಿಂಗ್ ಹೇಳಿಕೆ