ನಾನು ಮದುವೆ ಆದ್ಮೇಲೆ ಮೋಸ ಮಾಡಲ್ಲ; ಮನಸಿನ ಮಾತು ಬಿಚ್ಚಿಟ್ಟ ವೈಷ್ಣವಿ

ಮೊದಲ ಇನ್ನಿಂಗ್ಸ್​ನಲ್ಲಿ ಮದುವೆ ವಿಚಾರ ಮಾತನಾಡಿದ್ದಕ್ಕೆ ವೈಷ್ಣವಿ ತಾಯಿ ಸಿಟ್ಟಾಗಿದ್ದರು. ಈ ಕಾರಣಕ್ಕೆ ವೈಷ್ಣವಿ ಮದುವೆ ವಿಚಾರದಲ್ಲಿ ಸುಮ್ಮನಿದ್ದಾರೆ. ಆ ಬಗ್ಗೆ ಅವರು ಹೆಚ್ಚು ಮಾತನಾಡುತ್ತಿಲ್ಲ.

ನಾನು ಮದುವೆ ಆದ್ಮೇಲೆ ಮೋಸ ಮಾಡಲ್ಲ; ಮನಸಿನ ಮಾತು ಬಿಚ್ಚಿಟ್ಟ ವೈಷ್ಣವಿ
ಚಕ್ರವರ್ತಿ ಚಂದ್ರಚೂಡ್​, ವೈಷ್ಣವಿ
Follow us
TV9 Web
| Updated By: ಮದನ್​ ಕುಮಾರ್​

Updated on: Jul 06, 2021 | 3:20 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ರ ಮೊದಲ ಇನ್ನಿಂಗ್ಸ್​ನಲ್ಲಿ ವೈಷ್ಣವಿ ನಿತ್ಯ ಒಮ್ಮೆಯಾದರೂ ಮದುವೆ ವಿಚಾರ ಮಾತನಾಡುತ್ತಿದ್ದರು. ಅವರು ಹೈಲೈಟ್​ ಆಗೋಕೆ ಇದು ಕೂಡ ಪ್ರಮುಖ ಕಾರಣವಾಗಿತ್ತು. ಪರಿಣಾಮ ಅವರಿಗೆ ಸಾಕಷ್ಟು ಮದುವೆ ಪ್ರಪೋಸಲ್​ಗಳು ಬಂದವು. ಆದರೆ, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಅವರು ಮದುವೆ ಬಗ್ಗೆ ಮಾತನಾಡಿದ್ದು ತುಂಬಾನೇ ಕಡಿಮೆ. ಆದರೆ, ಈಗ ಅವರ ಬಾಯಿಂದ ಮತ್ತೆ ಮದುವೆ ವಿಚಾರ ಬಂದಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಮದುವೆ ವಿಚಾರ ಮಾತನಾಡಿದ್ದಕ್ಕೆ ವೈಷ್ಣವಿ ತಾಯಿ ಸಿಟ್ಟಾಗಿದ್ದರು. ಕುಟುಂಬದವರಿಗೆ ಜವಾಬ್ದಾರಿ ಇಲ್ಲ ಎಂದು ಜನರು ಭಾವಿಸುತ್ತಾರೆ ಎಂಬುದಾಗಿ ವೈಷ್ಣವಿ ತಾಯಿ ಹೇಳಿದ್ದರು. ಈ ಕಾರಣಕ್ಕೆ ವೈಷ್ಣವಿ ಮದುವೆ ವಿಚಾರದಲ್ಲಿ ಸುಮ್ಮನಿದ್ದಾರೆ. ಆ ಬಗ್ಗೆ ಅವರು ಹೆಚ್ಚು ಮಾತನಾಡುತ್ತಿಲ್ಲ.

ಈಗ ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಮದುವೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಚಕ್ರವರ್ತಿ ಚಂದ್ರಚೂಡ್​ ಅವರು ವೈಷ್ಣವಿ ಮದುವೆ ವಿಚಾರ ತೆಗೆದಿದ್ದಾರೆ. ‘ನಿಮ್ಮಲ್ಲೊಂದು ದೈವಿಕ ಶಕ್ತಿ ಇದೆ. ಯಾಕೆ ಕೌಂಟುಬಿಕ ಜಂಜಾಟಕ್ಕೆ ಬೀಳುತ್ತಿದ್ದೀರೋ ಗೊತ್ತಿಲ್ಲ. ಈಗಲೂ ದೊಡ್ಡವನಾಗಿ ಹೇಳ್ತಾ ಇದೀನಿ. ಮದುವೆ ಆಗಬೇಡಿ’ ಎಂದು ವೈಷ್ಣವಿಗೆ ಚಕ್ರವರ್ತಿ ಕಿವಿಮಾತು ಹೇಳಿದರು.

‘ಜೀವನ ಅಂದಮೇಲೆ ಎಲ್ಲವನ್ನೂ ನೋಡಬೇಕು. ನಾನು ಸಾಯುವಾಗ ಜೀವನದಲ್ಲಿ ಯಾವುದನ್ನೂ ಮಿಸ್ ಮಾಡಿಕೊಂಡೆ ಎಂದು ನನಗೆ ಅನ್ನಿಸಬಾರದು. ಹೀಗಾಗಿ ಮದುವೆ ಆಗಬೇಕು’ ಎಂದು ವೈಷ್ಣವಿ ತಮ್ಮ ವಾದ ಮುಂದಿಟ್ಟರು.

ವೈಷ್ಣವಿ ಮದುವೆ ಆದಮೇಲೆ ಹುಡುಗನಿಗೆ ಮೋಸ ಮಾಡುವುದಿಲ್ಲ ಎಂದಿದ್ದಾರೆ. ‘ನಾನು ವಿವಾಹ ಅಂತ ಆದ್ಮೇಲೆ ಚೀಟ್​ ಮಾಡುವುದಿಲ್ಲ. ಅವನ ಜೀವನ ಚೆನ್ನಾಗಿರಬೇಕು’ ಎಂದು ವೈಷ್ಣವಿ ತಮ್ಮ ಮನದಾಳದ ಮಾತನ್ನು ಹೇಳಿದರು. ಹಾಗಾದರೆ ಮನೆಯಲ್ಲಿ ಗಂಡು ನೋಡ್ತಾ ಇದಾರಾ ಎನ್ನುವ ಪ್ರಶ್ನೆಯನ್ನು ಚಕ್ರವರ್ತಿ ಕೇಳಿದರು. ‘ಯಾಕೆ ಸರ್​ ನನ್ನ ಬಾಯಿಂದ ಏನೇನೋ ಬರ್ಸ್ತೀರಾ? ನಾನು ಇನ್ನು ಆ ಬಗ್ಗೆ ಮಾತನಾಡುವುದಿಲ್ಲ’ ಎಂದು ವೈಷ್ಣವಿ ಶಪಥ ಮಾಡಿದರು.

ಇದನ್ನೂ ಓದಿ:

‘ಮಂಜು ವಿನ್ನರ್​, ವೈಷ್ಣವಿ ರನ್ನರ್​ ಅಪ್​’; ಬಿಗ್​ ಬಾಸ್​ ಸ್ಪರ್ಧಿ ನುಡಿದ್ರು ಭವಿಷ್ಯ

‘ಅಗ್ನಿಸಾಕ್ಷಿ’ ಶೂಟಿಂಗ್ ವೇಳೆ ವೈಷ್ಣವಿ ಕೈಯಲ್ಲಿ ಯಾವಾಗಲೂ ಇರ್ತಿತ್ತು ರೇಷ್ಮೆ ಸೀರೆ; ಸುದೀಪ್ ಬಿಚ್ಚಿಟ್ಟ ಅಚ್ಚರಿಯ ವಿಚಾರ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ