ಬಿಗ್ ಬಾಸ್ ಮನೆ ಸೇರಲಿದ್ದಾರೆ ಸ್ಟಾರ್ ಕಾಮಿಡಿಯನ್?
ಅಲಿ ತೆಲುಗು ಚಿತ್ರರಂಗದಲ್ಲಿ ಮಾತ್ರ ಹೆಸರು ಮಾಡಿಲ್ಲ. 2010ರಲ್ಲಿ ತೆರೆಗೆ ಬಂದ ಕನ್ನಡದ ಸೂಪರ್ ಚಿತ್ರದಲ್ಲಿ ಅವರು ನಟಿಸಿದ್ದರು. 2014ರ ನಮೋ ಭೂತಾತ್ಮ, ಕೆಂಪೇಗೌಡ 2 ಸಿನಿಮಾಗಳಲ್ಲಿ ಅಲಿ ಆ್ಯಕ್ಟ್ ಮಾಡಿದ್ದಾರೆ.
ತೆಲುಗು ಬಿಗ್ ಬಾಸ್ ನಾಲ್ಕು ಸೀಸನ್ ಪೂರ್ಣಗೊಳಿಸಿದೆ. ಈಗ ಐದನೇ ಸೀಸನ್ಗೆ ಸಿದ್ಧತೆಗಳು ನಡೆಯುತ್ತಿವೆ. ಆರಂಭದಲ್ಲಿ ಜೂನ್ ತಿಂಗಳಲ್ಲೇ ಬಿಗ್ ಬಾಸ್ ಶುರು ಮಾಡುವ ಆಲೋಚನೆ ವಾಹಿನಿಯದ್ದಾಗಿತ್ತು. ಆದರೆ, ಕೊವಿಡ್ ಕಾರಣದಿಂದ ಬಿಗ್ ಬಾಸ್ ಆರಂಭ ದಿನಾಂಕ ಮುಂದೂಡಲ್ಪಟ್ಟಿದೆ. ಆಗಸ್ಟ್ ವೇಳೆಗೆ ತೆಲುಗು ಬಿಗ್ ಬಾಸ್ ಸೀಸನ್-5ಅನ್ನು ಆರಂಭಿಸುವ ಆಲೋಚನೆಯನ್ನು ವಾಹಿನಿ ಹೊಂದಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಮನೆ ಸೇರುವವರ ಸಂಭಾವ್ಯ ಪಟ್ಟಿ ಹರಿದಾಡುತ್ತಿದೆ.
ಟಾಲಿವುಡ್ನ ಸ್ಟಾರ್ ಕಾಮಿಡಿಯನ್ ಅಲಿ ಅವರನ್ನು ಬಿಗ್ ಬಾಸ್ ಮನೆ ಒಳಗೆ ಕಳುಹಿಸುವ ಆಲೋಚನೆಯಲ್ಲಿ ವಾಹಿನಿ ಇದೆ. ಈಗಾಲೇ ಅವರನ್ನು ಅಪ್ರೋಚ್ ಮಾಡಲಾಗಿದ್ದು, ಇದಕ್ಕೆ ಅವರು ಒಕೆ ಎಂದಿದ್ದಾರೆ ಎನ್ನಲಾಗಿದೆ.
ಅಲಿ ತೆಲುಗು ವಲಯದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ತಮ್ಮ ಹಾಸ್ಯದ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾರಣಕ್ಕೆ ಅವರು ಈ ಶೋಗೆ ಬಂದರೆ ಟಿಆರ್ಪಿ ಹೆಚ್ಚಲಿದೆ ಎಂಬುದು ವಾಹಿನಿಯ ಲೆಕ್ಕಾಚಾರ.
ಅಲಿ ತೆಲುಗು ಚಿತ್ರರಂಗದಲ್ಲಿ ಮಾತ್ರ ಹೆಸರು ಮಾಡಿಲ್ಲ. 2010ರಲ್ಲಿ ತೆರೆಗೆ ಬಂದ ಕನ್ನಡದ ಸೂಪರ್ ಚಿತ್ರದಲ್ಲಿ ಅವರು ನಟಿಸಿದ್ದರು. 2014ರ ನಮೋ ಭೂತಾತ್ಮ, ಕೆಂಪೇಗೌಡ 2 ಸಿನಿಮಾಗಳಲ್ಲಿ ಅಲಿ ಆ್ಯಕ್ಟ್ ಮಾಡಿದ್ದಾರೆ. ಸದ್ಯ, ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾದಲ್ಲಿಯೂ ಅಲಿ ಅಭಿನಯಿಸುತ್ತಿದ್ದಾರೆ.
ಅಲಿ ಜತೆಗೆ ಸಾಕಷ್ಟು ಜನರ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ. ತೆಲುಗಿನಲ್ಲಿ ‘ರಾಬರ್ಟ್’ ಸಿನಿಮಾದ ಹಾಡನ್ನು ಹಾಡಿದ ಗಾಯಕಿ ಮಂಗ್ಲಿ, ಆ್ಯಂಕರ್ ರವಿ, ಶರಣ್ ನಟನೆಯ ‘ಅಧ್ಯಕ್ಷ’ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್ ಸೇರಿ ಅನೇಕರು ಬಿಗ್ ಬಾಸ್ ಮನೆ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ. ಶೋ ಆರಂಭವಾದ ನಂತರವೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.
ತೆಲುಗು ಬಿಗ್ ಬಾಸ್-4ರಲ್ಲಿ ಅಭಿಜೀತ್ ವಿನ್ನರ್ ಆಗಿದ್ದರು. ಅಖಿಲ್ ಸಾರ್ಥಕ್ ಹಾಗೂ ಸೋಹೆಲ್ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್ ಆಗಿದ್ದರು.
ಇದನ್ನೂ ಓದಿ:
Divya Uruduga: ಕನ್ನಡ ಬಿಗ್ ಬಾಸ್ ಸೀಸನ್ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ
ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ