AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಲಿದೆಯಾ ‘ಈಗ 2’? ಕಿಚ್ಚ ಸುದೀಪ್​-ರಾಜಮೌಳಿ ಮತ್ತೆ ಜೊತೆಯಾಗೋದು ಯಾವಾಗ?​

ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ, ಸುದೀಪ್​ ಅವರು ‘ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಬರಲಿದೆಯಾ ‘ಈಗ 2’? ಕಿಚ್ಚ ಸುದೀಪ್​-ರಾಜಮೌಳಿ ಮತ್ತೆ ಜೊತೆಯಾಗೋದು ಯಾವಾಗ?​
ಬರಲಿದೆಯಾ ‘ಈಗ 2’? ಕಿಚ್ಚ ಸುದೀಪ್-ರಾಜಮೌಳಿ ಮತ್ತೆ ಜೊತೆಯಾಗೋದು ಯಾವಾಗ?
TV9 Web
| Edited By: |

Updated on: Jul 06, 2021 | 2:06 PM

Share

ಸುದೀಪ್ ನಟನೆಯ ‘ಈಗ’ ಚಿತ್ರ ತೆರೆಕಂಡು 9 ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಆ ಚಿತ್ರವನ್ನು ಸುದೀಪ್​ ಮೆಲುಕು ಹಾಕಿದ್ದಾರೆ. ಅಂಥ ಅದ್ಭುತ ಸಿನಿಮಾ ನೀಡಿದ ನಿರ್ಮಾಪಕ ಸಾಯಿ ಹಾಗೂ ನಿರ್ದೇಶಕ ರಾಜಮೌಳಿ ಅವರಿಗೆ ಕಿಚ್ಚ ಧನ್ಯವಾದ ಅರ್ಪಿಸಿದ್ದಾರೆ. ಸುದೀಪ್​ ಅಭಿಮಾನಿಗಳು ‘ಈಗ’ ಚಿತ್ರದ ಬಗ್ಗೆ ಮತ್ತೆ ಮಾತನಾಡುತ್ತಿದ್ದಾರೆ. ಅದರ ಜೊತೆಗೆ ‘ಈಗ 2’ ಯಾವಾಗ ಬರಲಿದೆ ಎಂಬ ಪ್ರಶ್ನೆ ಕೂಡ ಹಲವರ ಮನಸ್ಸಿನಲ್ಲಿ ಕೊರೆಯುತ್ತಿದೆ. ಮತ್ತೆ ರಾಜಮೌಳಿ ಮತ್ತು ಸುದೀಪ್​ ಕಾಂಬಿನೇಷನ್​ಗಾಗಿ ಸಿನಿಪ್ರಿಯರು ಕಾದಿದ್ದಾರೆ. ‘ಈಗ 2’ ಮಾಡಬೇಕು ಎಂಬುದು ಚಿತ್ರತಂಡದ ಹಳೇ ಪ್ಲ್ಯಾನ್​.

‘ಈಗ’ ಸಿನಿಮಾದಲ್ಲಿ ಒಂದು ನೊಣವೇ ಹೀರೋ. ಇಂಥ ಡಿಫರೆಂಟ್​ ಆದಂತಹ ಕಾನ್ಸೆಪ್ಟ್​ ಇಟ್ಟುಕೊಂಡು ಸಿನಿಮಾ ಮಾಡಿದ್ದು ನಿರ್ದೇಶಕ ರಾಜಮೌಳಿ ಅವರ ಹೆಚ್ಚುಗಾರಿಕೆ. ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಸಿಕೊಂಡು ಆ ನೊಣವನ್ನು ಕ್ರಿಯೇಟ್​ ಮಾಡಲಾಯಿತು. ಶೂಟಿಂಗ್​ ಸಮಯದಲ್ಲಿ ಇಲ್ಲದ ನೊಣವನ್ನು ಇದೆ ಎಂದು ಕಲ್ಪಿಸಿಕೊಂಡು ನಟಿಸಿದ್ದು ಸುದೀಪ್​ ಪ್ರತಿಭೆಗೆ ಹಿಡಿದ ಕನ್ನಡಿ ಆಗಿತ್ತು. ಬಾಕ್ಸ್​ ಆಫೀಸ್​ನಲ್ಲಿ ‘ಈಗ’ ಉತ್ತಮ ಕಮಾಯಿ ಮಾಡಿತು. ಆ ಬಳಿಕ ‘ಈಗ’ ಚಿತ್ರಕ್ಕೆ ‘ಪಾರ್ಟ್​ 2’ ಮಾಡುವ ಬಗ್ಗೆ ಮಾತುಕತೆ ಶುರುವಾಯಿತು.

‘ಈಗ 2’ ಬಗ್ಗೆ ಹಲವು ಲೇಖನಗಳು ಪ್ರಕಟ ಆದವು. ಆದರೆ ಈವರೆಗೂ ಸೀಕ್ವೆಲ್​ ಸೆಟ್ಟೇರಿಲ್ಲ. ಹಾಗಂತ ‘ಈಗ 2’ ಬಗ್ಗೆ ಅಭಿಮಾನಿಗಳು ಆಸೆ ಬಿಟ್ಟುಬಿಡಬೇಕು ಎಂದೇನಿಲ್ಲ. ಈ ಕುರಿತು ಕಥೆಗಾರ ವಿಜಯೇಂದ್ರ ಪ್ರಸಾದ್​ ಅವರಿಗೆ ಪ್ರಶ್ನೆ ಮಾಡಿದಾಗ ಅವರಿಂದ ಖುಷಿಯ ವಿಚಾರ ಹೊರಬಿದ್ದಿತ್ತು. ‘ನಮಗೆ ‘ಈಗ’ ಚಿತ್ರದ ಸೀಕ್ವೆಲ್​ ಮಾಡುವ ಬಗ್ಗೆ ಆಲೋಚನೆ ಇದೆ. ಆದರೆ ಅದು ಶೀಘ್ರದಲ್ಲೇ ಆಗುವುದಿಲ್ಲ’ ಎಂದು ಹೇಳಿದ್ದರು. ಹಾಗಾಗಿ ಇನ್ನೂ ಒಂದಷ್ಟು ವರ್ಷಗಳ ಕಾಲ ಅಭಿಮಾನಿಗಳು ಕಾಯಬೇಕಾಗಿರುವುದು ಅನಿವಾರ್ಯ.

ಸದ್ಯ ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ನಂತರ ಮಹೇಶ್​ ಬಾಬು ಜೊತೆ ಅವರು ಹೊಸ ಸಿನಿಮಾ ಮಾಡುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಇತ್ತ, ಸುದೀಪ್​ ಅವರು ‘ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಭಾಗಿ ಆಗಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಆ ಚಿತ್ರ ಮೂಡಿಬರುತ್ತಿದೆ. ಹೀಗೆ ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿ ಸುದೀಪ್​ ಹಾಗೂ ರಾಜಮೌಳಿ ಬ್ಯುಸಿ ಆಗಿರುವುದರಿಂದ ಅವರು ‘ಈಗ 2’ ಬಗ್ಗೆ ಯಾವಾಗ ಗಮನ ಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ:

‘ಈಗ’, ‘ಹುಚ್ಚ’; ಸುದೀಪ್​ ಜೀವನದಲ್ಲಿ ಮರೆಯಲಾಗದ ಈ 2 ಸಿನಿಮಾಗಳಿಗೆ ಸ್ಪೆಷಲ್​ ದಿನವಿದು

ರಾಜಮೌಳಿ ವಿರುದ್ಧ ಸಿಡಿದೆದ್ದ ಶ್ವಾನಪ್ರಿಯರು; ಅಸಲಿಗೆ ಇಲ್ಲಿ ತಪ್ಪು ಯಾರದ್ದು?

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ