‘ರಸೋಡೆ ಮೇ ಕೌನ್ ಥಾ’ ಎಂದಿದ್ದ ಹಿರಿಯ ನಟಿ ರೂಪಾಲ್ ಪಟೇಲ್ ಆಸ್ಪತ್ರೆಗೆ ದಾಖಲು
‘ಸಾಥ್ ನಿಭಾನಾ ಸಾಥಿಯಾ’ ಧಾರಾವಾಹಿಯಲ್ಲಿ ಕೋಕಿಲಾ ಮೋದಿ ಪಾತ್ರಕ್ಕೆ ರೂಪಾಲ್ ಬಣ್ಣ ಹಚ್ಚಿದ್ದರು. ಈ ಮೂಲಕ ಅವರ ಖ್ಯಾತಿ ಸಾಕಷ್ಟು ಹೆಚ್ಚಿತ್ತು.
ಹಿಂದಿಯ ‘ಸಾಥ್ ನಿಭಾನಾ ಸಾಥಿಯಾ’ ಧಾರಾವಾಹಿ ಖ್ಯಾತಿಯ ಹಿರಿಯ ನಟಿ ರೂಪಾಲ್ ಪಟೇಲ್ಗೆ ಈಗ ಅನಾರೋಗ್ಯ ಕಾಡಿದೆ. ಹೀಗಾಗಿ, ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಯಾವ ಸಮಸ್ಯೆ ಕಾಡುತ್ತಿದೆ ಎಂಬ ವಿಚಾರ ಇನ್ನೂ ಬಹಿರಂಗಗೊಂಡಿಲ್ಲ. ಅವರ ಪತಿ ರಾಧಾ ಕೃಷ್ಣ ದತ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ರೂಪಾಲ್ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಪರೀಕ್ಷೆ ನಡೆಸುತ್ತಿದ್ದು, ರೂಪಾಲ್ ಆರೋಗ್ಯ ಸಮ ಸ್ಥಿತಿಗೆ ಬಂದಿದೆ. ಅವರು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ‘ಮುಂದಿನ ಮೂರ್ನಾಲ್ಕು ದಿನಗಳಲ್ಲಿ ರೂಪಾಲ್ ಆರೋಗ್ಯ ಸಂಪೂರ್ಣವಾಗಿ ಚೇತರಿಕೆ ಕಾಣಲಿದೆ. ಆ ನಂತರವೇ ಅವರು ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಸಾಥ್ ನಿಭಾನಾ ಸಾಥಿಯಾ’ ಧಾರಾವಾಹಿಯಲ್ಲಿ ಕೋಕಿಲಾ ಮೋದಿ ಪಾತ್ರಕ್ಕೆ ರೂಪಾಲ್ ಬಣ್ಣ ಹಚ್ಚಿದ್ದರು. ಈ ಮೂಲಕ ಅವರ ಖ್ಯಾತಿ ಸಾಕಷ್ಟು ಹೆಚ್ಚಿತ್ತು. ರೂಪಾಲ್ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದಕ್ಕೆ ಕಾರಣ ಮ್ಯುಸೀಶಿಯನ್ ಯಶ್ರಾಜ್ ಮುಖಟೆ. ‘ಸಾಥ್ ನಿಭಾನಾ ಸಾಥಿಯಾ’ದಲ್ಲಿ ಬರುವ ರಸೋಡೆ ಮೇ ಕೌನ್ ಥಾ ಎಂಬ ಸಂಭಾಷಣೆಗೆ ರ‍್ಯಾಪ್ ಮಾಡಿದ್ದರು. ಈ ಮೂಲಕ ಯಶ್ರಾಜ್ ಹಾಗೂ ರೂಪಾಲ್ ಇಬ್ಬರೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದರು. ‘ಸಾಥ್ ನಿಭಾನಾ ಸಾಥಿಯಾ 2’ನಲ್ಲಿ ಕೋಕಿಲಾ ಆಗಿಯೇ ರೂಪಾಲ್ ಕಾಣಿಸಿಕೊಂಡಿದ್ದರು. ಆದರೆ, ಒಂದೇ ತಿಂಗಳಲ್ಲಿ ಅವರು ಈ ಧಾರಾವಾಹಿಯಿಂದ ಹೊರ ಬಂದಿದ್ದರು.
ಯೇ ರಿಶ್ತೆ ಹೈ ಪ್ಯಾರ್ ಕೆ ಧಾರಾವಾಹಿಯಲ್ಲೂ ರೂಪಾಲ್ ನಟಿಸಿದ್ದಾರೆ. ಇದಲ್ಲದೆ, ‘ಅಂತರ್ನಾದ’, ‘ಸೂರಜ್ ಕಾ ಸತ್ವಾನ್ ಘೋದಾ’, ಸಮರ್ ಚಿತ್ರಗಳಲ್ಲಿ ರೂಪಾಲ್ ನಟಿಸಿದ್ದಾರೆ. ಅವರ ಆರೋಗ್ಯದಲ್ಲಿ ಏರು ಪೇರು ಕಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ:
ಖ್ಯಾತ ಧಾರಾವಾಹಿ ನಟಿ ಬಗ್ಗೆ ಮಂಜು ಪಾವಗಡ ಹೇಳಿದ ಒಗಟನ್ನು ನಿಮ್ಮಿಂದ ಬಿಡಿಸೋಕೆ ಸಾಧ್ಯವಾ?
2020 year in review | ಸಾಮಾಜಿಕ ಮಾಧ್ಯಮಗಳಲ್ಲಿ ನಗೆಯುಕ್ಕಿಸಿದ ಮೀಮ್ಗಳು