ಖ್ಯಾತ ಧಾರಾವಾಹಿ ನಟಿ ಬಗ್ಗೆ ಮಂಜು ಪಾವಗಡ ಹೇಳಿದ ಒಗಟನ್ನು ನಿಮ್ಮಿಂದ ಬಿಡಿಸೋಕೆ ಸಾಧ್ಯವಾ?

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ ಎರಡು ತಂಡಗಳು ಸೀಟ್​ ಮೇಲೆ ಕೂರಬೇಕು. ಮಂಜು ಪಾವಗಡ, ಶಮಂತ್​, ಪ್ರಶಾಂತ್​, ವೈಷ್ಣವಿ ಗೌಡ, ನಿಧಿ ಸುಬ್ಬಯ್ಯ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಎರಡು ತಂಡಗಳನ್ನು ಪ್ರತಿನಿಧಿಸಿ ಕೂತಿದ್ದಾರೆ.

ಖ್ಯಾತ ಧಾರಾವಾಹಿ ನಟಿ ಬಗ್ಗೆ ಮಂಜು ಪಾವಗಡ ಹೇಳಿದ ಒಗಟನ್ನು ನಿಮ್ಮಿಂದ ಬಿಡಿಸೋಕೆ ಸಾಧ್ಯವಾ?
ಮಂಜು ಪಾವಗಡ
Follow us
TV9 Web
| Updated By: ಮದನ್​ ಕುಮಾರ್​

Updated on: Jun 26, 2021 | 9:57 AM

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಸೆಕೆಂಡ್ ಇನ್ನಿಂಗ್ಸ್​ ಆರಂಭದಿಂದಲೇ ಉತ್ತಮ ಮೈಲೇಜ್​ ಪಡೆದುಕೊಂಡಿದೆ. ಮಂಜು ಪಾವಗಡ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ. ಮನೆಗೆ ಬಂದ ದಿನದಿಂದಲೂ ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರು ಹೀರೋಯಿನ್​ ಒಬ್ಬರ ಬಗ್ಗೆ ಒಂದು ಒಗಟನ್ನು ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ ಎರಡು ತಂಡಗಳು ಸೀಟ್​ ಮೇಲೆ ಕೂರಬೇಕು. ಮಂಜು ಪಾವಗಡ, ಶಮಂತ್​, ಪ್ರಶಾಂತ್​, ವೈಷ್ಣವಿ ಗೌಡ, ನಿಧಿ ಸುಬ್ಬಯ್ಯ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಎರಡು ತಂಡಗಳನ್ನು ಪ್ರತಿನಿಧಿಸಿ ಕೂತಿದ್ದರು. ಈ ವೇಳೆ ಮಂಜು ಸಾಕಷ್ಟು ನಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಪಕ್ಕದಲ್ಲಿ ಕೂತಿದ್ದ ಶಮಂತ್​ಗೆ ಒಗಟೊಂದನ್ನು ಹೇಳಿದ್ದಾರೆ.

‘ಅವರು ಎಂಟೂವರೆ ಅಡಿ ಎತ್ತರ ಇದ್ದಾರೆ. ಈ ಹೀರೋಯಿನ್​ ಒಂದು ಸೀರಿಯಲ್​ ಮಾಡಿದ್ರು. 7-8 ವರ್ಷ ಬರೀ ಅದೇ ಸೌಂಡ್​. ಹೀರೋಯಿನ್​ ವರ್ಲ್ಡ್​​​​ ಫೇಮಸ್​. ಗೊತ್ತಿದ್ದೂ ಸುಮ್ಮನಿರುತ್ತಾರೆ. ಗಂಡ ಎಂದರೆ ಆಕೆಗೆ ಭಯ-ಭಕ್ತಿ. ಗಂಡ-ಹೆಂಡತಿ ಸಂಬಂಧ ಹೆಚ್ಚು ಗಟ್ಟಿ. ಈ ಹೀರೋಯಿನ್​ ಯಾರು? ಸೀರಿಯಲ್​ ಕೊನೆಯ ಪದ ‘..ಸಾಕ್ಷಿ’ ಮೊದಲು ‘ಬೆಂಕಿ’ ಇಟ್ಟಾಗ ಮುಂದೆ ‘ಸಾಕ್ಷಿ’ ಬರುತ್ತೆ’ ಎಂದರು.

ಈ ಮಾತನ್ನು ದಿವ್ಯಾ ಉರುಡುಗ, ವೈಷ್ಣವಿ ಹಾಗೂ ಶಮಂತ್ ಕೇಳುತ್ತಿದ್ದರು. ಈ ವೇಳೆ ‘ಅಗ್ನಿ ಸಾಕ್ಷಿ ಸನ್ನಿಧಿ ವೈಷ್ಣವಿ ಗೌಡ’ ಎಂದು ಒಗಟನ್ನು ಬಿಡಿಸಿದರು ಶಮಂತ್​. ಈ ಮಾತನ್ನು ಕೇಳಿದ ವೈಷ್ಣವಿ ಕೂಡ ಬಿದ್ದು ಬಿದ್ದು ನಕ್ಕರು.

‘ನಿಮ್ಮ ಉಪಕಾರ ಏಳು ಜನ್ಮ ಕಳೆದರೂ ಮರೆಯಲ್ಲ. ನಿಮ್ಮ ಕೈ ಕೊಡಿ. ಕಾಲು ಎಂದು ಹಿಡಿದುಕೊಳ್ತೇನೆ’ ಎಂದರು ವೈಷ್ಣವಿ. ಈ ಚರ್ಚೆ ಸಾಕಷ್ಟು ನಗು ತರಿಸಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ