ಬಿಗ್ ಬಾಸ್ 2ನೇ ಇನ್ನಿಂಗ್ಸ್ ಮೊದಲ ವಾರವೇ ಯಾರ ಮೇಲಿದೆ ಎಲಿಮಿನೇಷನ್ ತೂಗುಗತ್ತಿ?
Bigg Boss Elimination: ಬಿಗ್ ಬಾಸ್ ಮನೆಯಲ್ಲಿ ಬಹುತೇಕರು ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಂಡಿದ್ದಾರೆ. ಸುದೀಪ್ ಅವರು ಬಹುದಿನಗಳ ಬಳಿಕ ಪಂಚಾಯಿತಿ ಮಾಡಲು ಬರುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ.
ಎಲ್ಲರ ನಿರೀಕ್ಷೆಯನ್ನೂ ಮೀರಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಎರಡನೇ ಇನ್ನಿಂಗ್ಸ್ ಶುರು ಆಯಿತು. ಇಷ್ಟು ವರ್ಷಗಳ ಬಿಗ್ ಬಾಸ್ ಇತಿಹಾಸದಲ್ಲಿ ಈ ರೀತಿ ಆಗಿದ್ದು ಇದೇ ಮೊದಲು. 12 ಸ್ಪರ್ಧಿಗಳಿಗೆ ಮತ್ತೊಮ್ಮೆ ದೊಡ್ಮನೆ ಪ್ರವೇಶಿಸುವ ಅವಕಾಶ ಸಿಕ್ಕಿದೆ. ಇದಕ್ಕೆ ಎರಡನೇ ಇನ್ನಿಂಗ್ಸ್ ಎಂದು ಕರೆಯಲಾಗಿದ್ದರೂ, ಶುರುವಿನಲ್ಲೇ ಪೈಪೋಟಿ ಜೋರಾಗಿದೆ. ಈಗ ನೋಡನೋಡುತ್ತಿದ್ದಂತೆಯೇ ಎಲಿಮಿನೇಷನ್ ಸಮಯ ಬಂದೇ ಬಿಟ್ಟಿದೆ. ಈ ವಾರ ನಾಮಿನೇಟ್ ಆದವರ ಎದೆಯಲ್ಲಿ ಢವಢವ ಶುರು ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಸದ್ಯ 12 ಜನರು ಸ್ಪರ್ಧಿಸುತ್ತಿದ್ದಾರೆ. ಒಂದು ದೀರ್ಘ ಗ್ಯಾಪ್ನಲ್ಲಿ ಎಲ್ಲ ಎಪಿಸೋಡ್ಗಳನ್ನು ನೋಡಿಕೊಂಡು, ಎಲ್ಲರ ಬಗ್ಗೆ ಇರುವ ಅಭಿಪ್ರಾಯನ್ನು ತಿಳಿದುಕೊಂಡು ದೊಡ್ಮನೆಗೆ ಕಾಲಿಟ್ಟಿರುವ ಸ್ಪರ್ಧಿಗಳು ನಿಷ್ಠುರವಾಗಿಯೇ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ರಘು ಗೌಡ, ಮಂಜು ಪಾವಗಡ, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ.
ಈ 7 ಜನರ ಪೈಕಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ಇಂದು (ಜೂ.26) ಸಂಜೆ 9 ಗಂಟೆಗೆ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್ ಪ್ರಸಾರ ಆಗಲಿದೆ. ಸುದೀಪ್ ಅವರು ಬಹುದಿನಗಳ ಬಳಿಕ ಪಂಚಾಯಿತಿ ಮಾಡಲು ಬರುತ್ತಿರುವುದರಿಂದ ಆ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಬಹುತೇಕರು ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಸದಾ ಕಾಲ ದಿವ್ಯಾ ಸುರೇಶ್ ಅವರ ಹಿಂದೆ ಸುತ್ತುತ್ತಿದ್ದ ಮಂಜು ಪಾವಗಡ ಈಗ ಆಟದ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಬರುವುದರಿಂದ ಟ್ರೋಫಿ ಗೆಲ್ಲುವತ್ತ ಎಲ್ಲರೂ ಗುರಿ ಇರಿಸಿಕೊಂಡಿದ್ದಾರೆ.
ಇದನ್ನೂ ಓದಿ:
ವಾರ್ನಿಂಗ್ ನಂತರವೂ ಬಿಗ್ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?
ಬಿಗ್ ಬಾಸ್ ಕ್ಯಾಪ್ಟನ್ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್