AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್​ ಪುತ್ರಿಯ ಗಾಂಜಾ ಪುರಾಣ ಬಯಲು ಮಾಡಿದ ರಿಯಾ ಚಕ್ರವರ್ತಿ; ಎನ್​ಸಿಬಿ ಮುಂದೆ ಶಾಕಿಂಗ್​ ಹೇಳಿಕೆ

2017ರ ಜೂನ್​ನಲ್ಲಿ ಸಾರಾ ಅಲಿ ಖಾನ್​ ಮತ್ತು ರಿಯಾ ಚಕ್ರವರ್ತಿ ನಡುವೆ ಮೊಬೈಲ್​ ಚಾಟ್​ ನಡೆದಿತ್ತು. ಅದರಲ್ಲಿ ರಿಯಾಗೆ ಗಾಂಜಾ ತೆಗೆದುಕೊಳ್ಳಲು ಸಾರಾ ಸಲಹೆ ನೀಡಿದ್ದರು ಎಂಬುದು ಬಯಲಾಗಿದೆ.

ಸೈಫ್​ ಪುತ್ರಿಯ ಗಾಂಜಾ ಪುರಾಣ ಬಯಲು ಮಾಡಿದ ರಿಯಾ ಚಕ್ರವರ್ತಿ; ಎನ್​ಸಿಬಿ ಮುಂದೆ ಶಾಕಿಂಗ್​ ಹೇಳಿಕೆ
ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್​
ಮದನ್​ ಕುಮಾರ್​
| Edited By: |

Updated on: Jun 07, 2021 | 3:34 PM

Share

ಕಳೆದ ವರ್ಷ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ರಿಯಾ ಚಕ್ರವರ್ತಿ ಸದ್ಯ ಜಾಮೀನು ಪಡೆದು ಹೊರಗೆ ಬಂದು ಆರಾಮಾಗಿ ಇದ್ದಾರೆ. ಸುಶಾಂತ್​ ಸಾವಿನ ತನಿಖೆಯ ಜೊತೆಗೆ ಬಾಲಿವುಡ್​ನ ಡ್ರಗ್ಸ್​ ಮಾಫಿಯಾ​ ಕೂಡ ಬಯಲಾದ ಬಳಿಕ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಸಂಬಂಧ ಎನ್​ಸಿಬಿ ಅಧಿಕಾರಿಗಳಿಗೆ ತಮ್ಮ ಹೇಳಿಕೆ ನೀಡಿರುವ ನಟಿ ರಿಯಾ ಚಕ್ರವರ್ತಿ ಅವರು ಸಾರಾ ಅಲಿ ಖಾನ್​ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಬಾಲಿವುಡ್​ನ ಹಲವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂಬ ಗುಮಾನಿ ಬಹಳ ದಿನಗಳ ಹಿಂದೆಯೇ ಶುರುವಾಗಿತ್ತು. ಆ ಕುರಿತು ಅನೇಕರನ್ನು ಎನ್​ಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಅದರಲ್ಲಿ ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ ಹೆಸರು ಕೂಡ ಇತ್ತು. ಕಳೆದ ವರ್ಷ ವಿಚಾರಣೆ ಎದುರಿಸಿ ಸೈಲೆಂಟ್​ ಆಗಿದ್ದ ಅವರಿಗೆ ಈಗ ಮತ್ತೆ ಟೆನ್ಷನ್​ ಶುರು ಆಗಿದೆ. ಅದಕ್ಕೆ ಕಾರಣವೇ ರಿಯಾ ಚಕ್ರವರ್ತಿ ಹೇಳಿಕೆ.

2017ರ ಜೂನ್​ನಲ್ಲಿ ಸಾರಾ ಅಲಿ ಖಾನ್​ ಮತ್ತು ರಿಯಾ ಚಕ್ರವರ್ತಿ ನಡುವೆ ಚಾಟ್​ ನಡೆದಿತ್ತು. ಅದರಲ್ಲಿ ರಿಯಾಗೆ ಗಾಂಜಾ ತೆಗೆದುಕೊಳ್ಳಲು ಸಾರಾ ಸಲಹೆ ನೀಡಿದ್ದರು ಎಂಬುದು ಬಯಲಾಗಿದೆ. ‘ಸಾರಾ ಅಲಿ ಖಾನ್​ ಬಳಿ ಯಾವಾಗಲೂ ಗಾಂಜಾ ಸುರುಳಿ ಇರುತ್ತಿತ್ತು. ಅದನ್ನೇ ಅವರು ನನಗೂ ಕೊಡಲು ಮುಂದಾಗಿದ್ದರು’ ಎಂದು ಎನ್​ಸಿಬಿ ಅಧಿಕಾರಿಗಳ ಮುಂದೆ ರಿಯಾ ಚಕ್ರವರ್ತಿ ಹೇಳಿದ್ದಾರೆ. ಅವರ ಹೇಳಿಕೆಯ ಪ್ರತಿಯು ಮಾಧ್ಯಮವೊಂದಕ್ಕೆ ಲಭ್ಯವಾಗಿದ್ದು, ಆ ಮೂಲಕ ಈ ವಿಚಾರ ಬಯಲಾಗಿದೆ.

ಸುಶಾಂತ್​ ಸಿಂಗ್​ ರಜಪೂತ್​ ಜೊತೆ ರಿಯಾ ಚಕ್ರವರ್ತಿ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿ ಇದ್ದರು. ಅನೇಕ ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಸುಶಾಂತ್​ ನಿಧನದ ಬಳಿಕ ಅವರ ತಂದೆ ಕೆಕೆ ಸಿಂಗ್​ ಅವರು ರಿಯಾ ವಿರದ್ಧವೇ ದೂರು ನೀಡಿದರು. ಆ ಪ್ರಕರಣವನ್ನು ಹುಡುಕಿ ಹೊರಟ ಪೊಲೀಸರಿಗೆ ಬಾಲಿವುಡ್​ನ ಡ್ರಗ್ಸ್​ ಮತ್ತು ಅಕ್ರಮ ಹಣ ಸಾಗಾಣಿಕೆ ವಿಷಯಗಳು ತಿಳಿದುಬಂದವು. ಸುಶಾಂತ್​ ಸಾವಿನ ತನಿಖೆಯ ಅಂತಿಮ ವರದಿ ಇನ್ನೂ ಸಲ್ಲಿಕೆ ಆಗಿಲ್ಲ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?

ಸುಶಾಂತ್ ಸಿಂಗ್ ಸಾವಿನ ಬಳಿಕವೂ ಪ್ರೀತಿ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ; ಅಚ್ಚರಿಯ ಹೇಳಿಕೆ ನೀಡಿದ ರಿಯಾ ಚಕ್ರವರ್ತಿ

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ