Rakhi Sawant: ವಿಚಿತ್ರ ಭಂಗಿ, ವಿಚಿತ್ರ ಬಟ್ಟೆ; ಹೀಗೂ ಯೋಗ ಮಾಡ್ತಾರಾ? ಟ್ರೋಲ್​ ಆದ ರಾಖಿ ಸಾವಂತ್​

Rajesh Duggumane

Updated on: Jun 10, 2021 | 5:40 PM

ನಟಿ ರಾಖಿ ಸಾವಂತ್​ ಸೆಲೆಬ್ರಿಟಿಯಾದರೂ ವಿವಾದದ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಅವರು ನಟಿ ಕಂಗನಾ ರಣಾವತ್​ ವಿರುದ್ಧ ನೇರವಾಗಿಯೇ ಹರಿಹಾಯ್ದಿದ್ದರು.

Rakhi Sawant: ವಿಚಿತ್ರ ಭಂಗಿ, ವಿಚಿತ್ರ ಬಟ್ಟೆ; ಹೀಗೂ ಯೋಗ ಮಾಡ್ತಾರಾ? ಟ್ರೋಲ್​ ಆದ ರಾಖಿ ಸಾವಂತ್​
ರಾಖಿ ಸಾವಂತ್

ನಟಿ ರಾಖಿ ಸಾವಂತ್​ ಚಿತ್ರರಂಗದ ವಿಷಯಕ್ಕಿಂತ ವಿವಾದದ ಮೂಲಕವೇ ಹೆಚ್ಚು ಸುದ್ದಿಯಾಗುತ್ತಾರೆ. ಅವರು ಮಾಡುವ ವಿವಾದಗಳು ಒಂದೆರಡಲ್ಲ. ಈಗ ರಾಖಿ ವಿಚಿತ್ರ ಬಟ್ಟೆ ತೊಟ್ಟು ಯೋಗ ಮಾಡುವ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅನೇಕರು ಹೀಗೂ ಯೋಗ ಮಾಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಸಾಮಾನ್ಯವಾಗಿ ಯೋಗ ಮಾಡುವವರು ಸಿಂಪಲ್​ ಉಡುಗೆ ತೊಡುತ್ತಾರೆ. ಆದರೆ, ರಾಖಿ ಸ್ಪೋರ್ಟ್ಸ್​ ಬ್ರಾ ಹಾಗೂ ಶಾರ್ಟ್ಸ್​ ಧರಿಸಿ ಯೋಗ ಮಾಡಿದ್ದಾರೆ. ಅನೇಕರು ಅವರ ಉಡುಗೆ ನೋಡಿ ತಲೆಕೆರೆದುಕೊಂಡಿದ್ದಾರೆ. ಅನೇಕರು ಇಂದೆಥಾ ಬಟ್ಟೆ ಎಂದು ಪ್ರಶ್ನೆ ಮಾಡಿದ್ದಾರೆ.

ನಟಿ ರಾಖಿ ಸಾವಂತ್​ ಸೆಲೆಬ್ರಿಟಿಯಾದರೂ ವಿವಾದದ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಅವರು ನಟಿ ಕಂಗನಾ ರಣಾವತ್​ ವಿರುದ್ಧ ನೇರವಾಗಿಯೇ ಹರಿಹಾಯ್ದಿದ್ದರು. ಈ ಮೂಲಕ ಕಂಗನಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಬೇರೆಯವರಿಗೆ ಪಾಠ ಮಾಡುವ ರಾಖಿ ಸಾವಂತ್​ ಲಾಕ್​ಡೌನ್​​ ಆದಮೇಲೆ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಮುಂಬೈನ ಕಾಫಿ ಶಾಪ್​ ಒಂದಕ್ಕೆ ರಾಖಿ ಬಂದಿದ್ದರು. ನಂತರ ಕ್ಯಾಮೆರಾ ಕಾಣುತ್ತಿದ್ದಂತೆ ಅವರು ಅಲ್ಲಿಂದ ಕಾಲ್ಕಿತ್ತಿದ್ದರು. ಕೈಯಲ್ಲಿ ಸ್ಯಾನಿಟೈಸರ್ ಹಿಡಿದು ಸ್ಕೂಟರ್​ ಏರಿದ್ದರು. ಸ್ಕೂಟರ್​ಗೆ ಸ್ಯಾನಿಟೈಸರ್​ ಹಾಕಿ, ಕೊರೊನಾ ಹೋಗು. ಇಲ್ಲದಿದ್ದರೆ ನಾನು ನಿನ್ನನ್ನು ಸುಟ್ಟು ಹಾಕಿಬಿಡುತ್ತೇನೆ ಎಂದಿದ್ದರು. ಇದು ಕೂಡ ಟ್ರೋಲ್​ ಆಗಿತ್ತು.

ಬಿಗ್​ ಬಾಸ್​ 14ನೇ ಸೀಸನ್​ನಲ್ಲಿ ರಾಖಿ ಕಾಣಿಸಿಕೊಂಡಿದ್ದರು. ಬಿಗ್​ ಬಾಸ್​ ಮನೆಯಲ್ಲೂ ಅವರು ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿದ್ದರು. ಬಿಗ್​ ಬಾಸ್​ ಮೂಲಕ ಅವರ ಖ್ಯಾತಿ ಹೆಚ್ಚಿದೆ.

ಇದನ್ನೂ ಓದಿ: ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಹುಡುಗನನ್ನು ರಾಖಿ ಸಾವಂತ್​ ಮದುವೆ ಆಗಿದ್ದೇಕೆ? ಇದರ ಹಿಂದಿದೆ ಡಾನ್​ ಕೈವಾಡ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada