AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಹುಡುಗನನ್ನು ರಾಖಿ ಸಾವಂತ್​ ಮದುವೆ ಆಗಿದ್ದೇಕೆ? ಇದರ ಹಿಂದಿದೆ ಡಾನ್​ ಕೈವಾಡ

Bigg Boss 14: ನಾನು ಡೇಟಿಂಗ್​ ಮಾಡುತ್ತಿದ್ದ ವ್ಯಕ್ತಿ ಒಬ್ಬ ಡಾನ್​ ಎಂಬುದು ನನಗೆ ನಂತರ ತಿಳಿಯಿತು. ನನ್ನನ್ನು ಮದುವೆ ಆಗುವಂತೆ ಆ ವ್ಯಕ್ತಿ ಒತ್ತಾಯ ಮಾಡುತ್ತಿದ್ದ. ಅವನಿಂದ ತಪ್ಪಿಸಿಕೊಳ್ಳಲು ನಾನು ರಿತೇಶ್​ ಬಳಿ ಸಹಾಯ ಕೇಳಿದೆ ಎಂದು ರಾಖಿ ಹೇಳಿದ್ದಾರೆ.

ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಹುಡುಗನನ್ನು ರಾಖಿ ಸಾವಂತ್​ ಮದುವೆ ಆಗಿದ್ದೇಕೆ? ಇದರ ಹಿಂದಿದೆ ಡಾನ್​ ಕೈವಾಡ
ರಾಖಿ ಸಾವಂತ್​
ಮದನ್​ ಕುಮಾರ್​
|

Updated on: May 16, 2021 | 2:34 PM

Share

ಬಾಲಿವುಡ್​ ನಟಿ ರಾಖಿ ಸಾವಂತ್​ ಎಲ್ಲಿ ಇರುತ್ತಾರೋ ಅಲ್ಲಿ ವಿವಾದ ಇದ್ದೇ ಇರುತ್ತದೆ. ಒಂದಷ್ಟು ದಿನ ಮೂಲೆಗುಂಪಾಗಿದ್ದ ಅವರು ಬಿಗ್​ ಬಾಸ್​ ಹಿಂದಿ ಸೀಸನ್​ 14ರಲ್ಲಿ ಸ್ಪರ್ಧಿಸಿ ಬಂದ ಬಳಿಕ ಮತ್ತೆ ಸುದ್ದಿ ಆಗುತ್ತಿದ್ದಾರೆ. ವೈಯಕ್ತಿಕ ಜೀವನದ ಕಾರಣದಿಂದ ಅವರು ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ. ರಾಖಿ ಸಾವಂತ್​ ಮದುವೆ ಬಗ್ಗೆ ದೊಡ್ಡ ರಹಸ್ಯ ಸೃಷ್ಟಿ ಆಗಿದೆ. ತಮಗೆ ಮದುವೆ ಆಗಿದೆ ಎಂದು ರಾಖಿ ಸಾವಂತ್​ ಈಗಾಗಲೇ ಹೇಳಿಕೊಂಡಿದ್ದಾರೆ. ಅವರ ಕುಟುಂಬದವರೂ ಈ ಮಾತನ್ನು ಅನುಮೋದಿಸಿದ್ದಾರೆ. ಆದರೆ ಈವರೆಗೂ ರಾಖಿ ಗಂಡನನ್ನು ಯಾರೂ ನೋಡಿಲ್ಲ! ಆ ವ್ಯಕ್ತಿ ಯಾರು ಎಂಬುದು ಯಾರಿಗೂ ಗೊತ್ತಿಲ್ಲ.

ಇಂಗ್ಲೆಂಡ್​ನಲ್ಲಿ ಇರುವ ರಿತೇಶ್​ ಎಂಬ ಉದ್ಯಮಿ ಜೊತೆ ತಮ್ಮ ಮದುವೆ ಆಗಿದೆ ಎಂದು ರಾಖಿ ಸಾವಂತ್​ ಹೇಳಿಕೊಂಡಿದ್ದಾರೆ. ಆದರೆ ಈವರೆಗೆ ಎಲ್ಲಿಯೂ ಅವರ ಮದುವೆ ಫೋಟೋಗಳು ಬಹಿರಂಗ ಆಗಿಲ್ಲ. ಅಚ್ಚರಿ ಎಂದರೆ, ಈಗ ತಮ್ಮ ಮದುವೆ ಹಿಂದಿನ ಒಂದು ರಹಸ್ಯವನ್ನು ರಾಖಿ ಬಹಿರಂಗ ಪಡಿಸಿದ್ದಾರೆ. ರಿತೇಶ್​ ಜೊತೆ ಮದುವೆ ಆಗಲು ಒಬ್ಬ ಡಾನ್​ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ರಾಖಿ ಬಾಯಿ ಬಿಟ್ಟಿದ್ದಾರೆ.

‘ನಾನು ಗುಜರಾತ್​ನ ಒಬ್ಬ ವ್ಯಕ್ತಿ ಜೊತೆ ಡೇಟಿಂಗ್​ ಮಾಡುತ್ತಿದ್ದೆ. ನಾವಿಬ್ಬರೂ ಗೋವಾಗೆ ಹೋಗಿದ್ದೆವು. ಅಲ್ಲಿ ನಾನು ಒಂದು ವಿಡಿಯೋ ನೋಡಿದೆ. ತನ್ನ ಫಾರ್ಮ್​ಹೌಸ್​ನಲ್ಲಿ ಒಬ್ಬರಿಗೆ ಈ ವ್ಯಕ್ತಿ ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯ ಆ ವಿಡಿಯೋದಲ್ಲಿ ಇತ್ತು. ನಾನು ಡೇಟಿಂಗ್​ ಮಾಡುತ್ತಿರುವ ವ್ಯಕ್ತಿ ಒಬ್ಬ ಡಾನ್​ ಎಂಬುದು ನನಗೆ ಆಗ ತಿಳಿಯಿತು. ನನ್ನನ್ನು ಮದುವೆ ಆಗುವಂತೆ ಆ ವ್ಯಕ್ತಿ ಒತ್ತಾಯ ಮಾಡುತ್ತಿದ್ದ. ಅವನಿಂದ ತಪ್ಪಿಸಿಕೊಳ್ಳಲು ನಾನು ರಿತೇಶ್​ ಬಳಿ ಸಹಾಯ ಕೇಳಿದೆ’ ಎಂದು ರಾಖಿ ಹೇಳಿದ್ದಾರೆ.

‘ನನಗೆ ಒಬ್ಬ ಒಳ್ಳೆಯ ಹುಡುಗನನ್ನು ಹುಡುಕಿ ಎಂದು ರಿತೇಶ್​ಗೆ ಹೇಳಿದೆ. ತಾವೇ ಒಳ್ಳೆಯ ಹುಡುಗನಾಗುತ್ತೇನೆ ಎಂದು ಅವರು ಹೇಳಿದರು. ಗುಜರಾತ್​ ಡಾನ್​ನಿಂದ ತಪ್ಪಿಸಿಕೊಳ್ಳಲು ನಾನು ಇವರನ್ನು ಮದುವೆ ಆದೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ. ಆದರೆ ಅವರ ಮಾತು ನಿಜ ಎಂಬುದಕ್ಕೆ ಯಾವುದೇ ಸಾಕ್ಷಿಗಳೂ ಸದ್ಯಕ್ಕೆ ಲಭ್ಯವಿಲ್ಲ. ಹಾಗಾಗಿ ಅವರ ಮಾತನ್ನು ನಂಬಬೇಕೋ ಬಿಡಬೇಕೋ ಎಂಬುದು ಅವರ ಅಭಿಮಾನಿಗಳ ಆಯ್ಕೆಗೆ ಬಿಟ್ಟ ವಿಚಾರ.

ಇದನ್ನೂ ಓದಿ:

ಸಲ್ಮಾನ್​ ಖಾನ್​ಗೆ ಧನ್ಯವಾದ ಹೇಳಿದ ರಾಖಿ ಸಾವಂತ್; ಕಾರಣವೇನು ಗೊತ್ತಾ?

ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಖಿ ಸಾವಂತ್​ಗೆ ಮಂಗಳಾರತಿ; ಅವರು ಮಾಡಿದ ತಪ್ಪೇನು?

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!