ಲಾಕ್​ಡೌನ್​ ಎಫೆಕ್ಟ್: ಬಣ್ಣದ ಲೋಕ ತೊರೆದು ಮೀನು ಮಾರಾಟಕ್ಕೆ ಇಳಿದ ಕಿರುತೆರೆ ನಟ, ಫೋಟೋ ವೈರಲ್​

‘ಸುವರ್ಣಲತಾ’ ಸೇರಿ ಕೆಲ ಧಾರಾವಾಹಿಗಳಲ್ಲಿ ಅರಿಂದಮ್​ ಅಭಿನಯಿಸಿದ್ದಾರೆ. ಆದರೆ, ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಅವರು ಮೀನು ಮಾರಾಟ ಆರಂಭಿಸಿದ್ದಾರೆ. ಅದರಿಂದ ಬಂದ ಹಣದಿಂದ ಬದುಕು ನಡೆಸುತ್ತಿದ್ದಾರೆ.

ಲಾಕ್​ಡೌನ್​ ಎಫೆಕ್ಟ್: ಬಣ್ಣದ ಲೋಕ ತೊರೆದು ಮೀನು ಮಾರಾಟಕ್ಕೆ ಇಳಿದ ಕಿರುತೆರೆ ನಟ, ಫೋಟೋ ವೈರಲ್​
ಲಾಕ್​ಡೌನ್​ ಎಫೆಕ್ಟ್: ಕಿರುತೆರೆ ತೊರೆದು ಮೀನು ಮಾರಾಟಕ್ಕೆ ಇಳಿದ ನಟ, ಫೋಟೋ ವೈರಲ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 06, 2021 | 8:49 PM

ಕೊವಿಡ್​ನಿಂದ ಸಾಕಷ್ಟು ಜನರು ತೊಂದರೆಗೆ ಸಿಲುಕಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಚಿತ್ರರಂಗ ಕೂಡ ಕೊವಿಡ್​ ಎರಡನೇ ಅಲೆಗೆ ತತ್ತರಿಸಿದೆ. ಶೂಟಿಂಗ್​ ನಿಂತಿದ್ದ ಕಾರಣ ಸಾಕಷ್ಟು ಜನರುಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದಿದೆ. ಈಗ ಬೆಂಗಾಲಿ ಕಿರುತೆರೆ ನಟ ಅರಿಂದಮ್​ ಪ್ರಾಮಾಣಿಕ್​ ಮೀನು ಮಾರಾಟಕ್ಕೆ ಇಳಿದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ.

‘ಸುವರ್ಣಲತಾ’ ಸೇರಿ ಕೆಲ ಧಾರಾವಾಹಿಗಳಲ್ಲಿ ಅರಿಂದಮ್​ ಅಭಿನಯಿಸಿದ್ದಾರೆ. ಆದರೆ, ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಅವರು ಮೀನು ಮಾರಾಟ ಆರಂಭಿಸಿದ್ದಾರೆ. ಅದರಿಂದ ಬಂದ ಹಣದಿಂದ ಬದುಕು ನಡೆಸುತ್ತಿದ್ದಾರೆ. ಕೊವಿಡ್​ ಮೊದಲನೇ ಅಲೆ ಕಾಣಿಸಿಕೊಂಡಾಗಲೇ ಅರಿಂದಮ್ ಕೆಲಸ ಕಳೆದುಕೊಂಡಿದ್ದರು. ನಂತರ ಅವರಿಗೆ ಯಾವುದೇ ಧಾರಾವಾಹಿ ಆಫರ್​ ಸಿಕ್ಕಿಲ್ಲ. ಹೀಗಾಗಿ ನಟನೆ ಬಿಟ್ಟು ತಮ್ಮ ಊರಿಗೆ ಹೋಗುವ ನಿರ್ಧಾರಕ್ಕೆ ಬಂದಿದ್ದರು. ನಂತರ ಹಾಗೆಯೇ ಮಾಡಿದ್ದಾರೆ. ಈಗ ಅವರು ನಟನೆಯಿಂದ ಸಂಪೂರ್ಣ ದೂರವಾಗಿದ್ದು, ಮೀನು ಮಾರಾಟ ವೃತ್ತಿ ಆಯ್ದುಕೊಂಡಿದ್ದಾರೆ.

ಬಣ್ಣದ ಲೋಕದಲ್ಲಿ ಮಿಂಚಬೇಕು ಎನ್ನುವ ಕಾರಣಕ್ಕೆ ಅರಿಂದಮ್ ಕೋಲ್ಕತ್ತಾಗೆ ಬಂದಿದ್ದರು. ‘ರಾಶಿ’, ‘ಅಗ್ನಿ ಪರೀಕ್ಷಾ’ ಟಿವಿ ಶೋಗಳಲ್ಲಿ ಅವರು ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಅರಿಂದಮ್​ ‘ಸುವರ್ಣಲತಾ’ ಧಾರಾವಾಹಿಯಲ್ಲಿ ನಟಿಸಿದರು. ಇತ್ತೀಚೆಗೆ ಅವರಿಗೆ ಯಾವುದೇ ಆಫರ್​ ಬಂದಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲೂ ಅವರಿಗೆ ಯಾರೂ ಅವಕಾಶ ನೀಡಿಲ್ಲ. ಈ ಕಾರಣಕ್ಕೆ ಅರಿಂದಮ್​ ಈ ನಿರ್ಧಾರಕ್ಕೆ ಬರೋದು ಅನಿವಾರ್ಯವಾಗಿದೆ.

ಅರಿಂದಮ್​ ಮೀನು ಮಾರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲರೂ ಶಾಕ್​ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಶ್ರೀಕಾಂತ್​ ಮನ್ನಾ ಎಂಬುವವರು ಕೂಡ ಇದೇ ಮಾರ್ಗ ಅನುಸರಿಸಿದ್ದರು. ಚಿತ್ರರಂಗದಲ್ಲಿ ಅವಕಾಶ ಸಿಗದೇ ಮೀನು ಮಾರಾಟಕ್ಕೆ ಮುಂದಾಗಿದ್ದರು.

ಕೊವಿಡ್​ ಎರಡನೇ ಅಲೆಸಾಕಷ್ಟು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅನೇಕ ಹಿರಿಯ ನಟರು, ಅನಾರೋಗ್ಯಕ್ಕೆ ತುತ್ತಾಗಿ, ಚಿಕಿತ್ಸೆಗೂ ಹಣವಿಲ್ಲದೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಅನೇಕರು ಬಣ್ಣದ ಲೋಕ ತೊರೆದು ಬೇರೆ ವೃತ್ತಿ ಆಯ್ದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಚಿತ್ರರಂಗ ತೊರೆಯುತ್ತಾರಾ? ಅವರು ಒಪ್ಪಿಕೊಂಡ ಸಿನಿಮಾ ಬಗ್ಗೆ ಕೇಳಿ ಬರ್ತಿದೆ ಹೊಸ ಅಪ್​ಡೇಟ್​

ಜುಲಾನ್ ಗೋಸ್ವಾಮಿ ಬಯೋಪಿಕ್​ನಲ್ಲಿ ಅನುಷ್ಕಾ ಶರ್ಮಾ; ಸಿನಿಮಾದ ಚಿತ್ರೀಕರಣ ಯಾವಾಗಿನಿಂದ ಆರಂಭ ಗೊತ್ತಾ?

Published On - 8:27 pm, Tue, 6 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ