ಅನುಷ್ಕಾ ಶರ್ಮಾ ಚಿತ್ರರಂಗ ತೊರೆಯುತ್ತಾರಾ? ಅವರು ಒಪ್ಪಿಕೊಂಡ ಸಿನಿಮಾ ಬಗ್ಗೆ ಕೇಳಿ ಬರ್ತಿದೆ ಹೊಸ ಅಪ್​ಡೇಟ್​

ಒಂದೂವರೆ ವರ್ಷ ಕಳೆದರೂ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್​ ಸಿಕ್ಕಿಲ್ಲ. ಈಇನ್ನು, ಅನುಷ್ಕಾ, ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ ಎಂದು ಕೂಡ ಹೇಳಲಾಗಿತ್ತು.

ಅನುಷ್ಕಾ ಶರ್ಮಾ ಚಿತ್ರರಂಗ ತೊರೆಯುತ್ತಾರಾ? ಅವರು ಒಪ್ಪಿಕೊಂಡ ಸಿನಿಮಾ ಬಗ್ಗೆ ಕೇಳಿ ಬರ್ತಿದೆ ಹೊಸ ಅಪ್​ಡೇಟ್​
ಅನುಷ್ಕಾ ಶರ್ಮಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 03, 2021 | 5:47 PM

2018ರಲ್ಲಿ ತೆರೆಗೆ ಬಂದ ‘ಜೀರೋ’ ಸಿನಿಮಾವೇ ಕೊನೆ. ಅದಾದ ನಂತರದಲ್ಲಿ ಅನುಷ್ಕಾ ಶರ್ಮಾ ಯಾವುದೇ ಚಿತ್ರಗಳಲ್ಲೂ ನಟಿಸಿಲ್ಲ. ಕೊವಿಡ್​ ಕಾರಣದಿಂದ ಸಿನಿಮಾ ಶೂಟಿಂಗ್​ ನಿಂತಿದ್ದು ಒಂದು ಕಾರಣವಾದರೆ, ಅನುಷ್ಕಾ ಗರ್ಭ ಧರಿಸಿ, ಮಗುವಿಗೆ ಜನ್ಮ ನೀಡಿದ್ದು ಮತ್ತೊಂದು ಕಾರಣ. ಹೀಗಿರುವಾಗಲೇ ಅನುಷ್ಕಾ ಚಿತ್ರರಂಗ ತೊರೆಯಲಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ.

ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಜೂಲನ್​ ಗೋಸ್ವಾಮಿ ಬಗ್ಗೆ ಬಯೋಪಿಕ್​ ಸಿದ್ಧಗೊಳ್ಳುತ್ತಿದ್ದು, ಇದರಲ್ಲಿ ಅನುಷ್ಕಾ ನಟಿಸಲಿದ್ದಾರೆ ಎಂದು 2020ರಲ್ಲಿ ಸೋನಿ ಪಿಕ್ಚರ್ಸ್​ ಘೋಷಣೆ ಮಾಡಿತ್ತು. ಇದಾದ ಕೆಲವೇ ತಿಂಗಳಲ್ಲಿ ಕೊವಿಡ್​ ಕಾಣಿಸಿಕೊಂಡಿತ್ತು. ಹೀಗಿರುವಾಗಲೇ ಅನುಷ್ಕಾ ಗರ್ಭ ಧರಿಸಿದ್ದರು. ಸದ್ಯ ಅವರು ಸಂಪೂರ್ಣವಾಗಿ ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ.

ಒಂದೂವರೆ ವರ್ಷ ಕಳೆದರೂ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್​ ಸಿಕ್ಕಿಲ್ಲ. ಈ ಕಾರಣಕ್ಕೆ ಸಿನಿಮಾ ಸೆಟ್ಟೇರುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿತ್ತು. ಇನ್ನು, ಅನುಷ್ಕಾ, ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ, ಮೂಲಗಳ ಪ್ರಕಾರ, ಅನುಷ್ಕಾ ಚಿತ್ರರಂಗ ತೊರೆಯುತ್ತಿಲ್ಲ. ಶೀಘ್ರವೇ ಅವರು ಈ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬಯೋಪಿಕ್​ ಎಂದಾಗ ಪಾತ್ರಕ್ಕೆ ಒಂದಷ್ಟು ಸಿದ್ಧತೆಗಳು ಅತ್ಯವಶ್ಯಕ. ಶೀಘ್ರವೇ ಈ ಎಲ್ಲಾ ಕಾರ್ಯಗಳಿಗೆ ಅನುಷ್ಕಾ ಚಾಲನೆ ನೀಡಲಿದ್ದಾರಂತೆ. ವರ್ಷಾಂತ್ಯಕ್ಕೆ ಈ ಬಯೋಪಿಕ್ ಸೆಟ್ಟೇರಲಿದೆ. ಒಟ್ಟಿನಲ್ಲಿ ಅನುಷ್ಕಾ ಚಿತ್ರರಂಗ ತೊರೆಯುವುದಿಲ್ಲ ಎನ್ನುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ದಂಪತಿ ಈ ವರ್ಷದ ಆರಂಭದಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಈ ಮಗುವಿಗೆ ವಮಿಕಾ ಎಂದು ಹೆಸರಿಡಲಾಗಿದೆ. ಸದ್ಯ, ವಿರಾಟ್​ ಇಂಗ್ಲೆಂಡ್ ಟೂರ್​ಗಾಗಿ ಆಂಗ್ಲರ ನಾಡಿನಲ್ಲಿದ್ದಾರೆ. ಅನುಷ್ಕಾ ಕೂಡ ವಿರಾಟ್​ಗೆ ಜತೆಯಾಗಿದ್ದಾರೆ.

ಜೂಲನ್​ ಗೋಸ್ವಾಮಿ ಟೀಂ ಇಂಡಿಯಾ ಮಹಿಳಾ ತಂಡದ ಆಲ್​ರೌಂಡರ್​ ಆಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್​ ಪಡೆದ ಮಹಿಳಾ ಕ್ರಿಕೆಟ್​ ಇವರಾಗಿದ್ದಾರೆ.

ಇದನ್ನೂ ಓದಿ: ‘ಆ ಮಗುವಿಗೆ ಉಸಿರು ಕಟ್ಟುತ್ತಿದೆ’; ಅನುಷ್ಕಾ-ವಿರಾಟ್​ ಪುತ್ರಿ ವಮಿಕಾ ವಿಚಾರದಲ್ಲಿ ನೆಟ್ಟಿಗರ ಆಕ್ರೋಶ

ವಿರಾಟ್​ ಕೊಹ್ಲಿ ಹಾಡು ಕೇಳಿ ಅನುಷ್ಕಾ ಶರ್ಮಾ ಆನಂದಭಾಷ್ಪ; ವಿಡಿಯೋ ವೈರಲ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ