ದಿಲಿಪ್ ಕುಮಾರ್ ಸಾಹಬ್ ಆರೋಗ್ಯ ಸ್ಥಿರವಾಗಿದೆಯಾದರೂ, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ: ಸಾಯಿರಾ ಬಾನು

ಜೂನ್ 6ರಂದು ಸಹ ದಿಲಿಪ್ ಕುಮಾರ್ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ‘ಬಾಲಿವುಡ್ ಥೆಸ್ಪಿಯನ್ ಬೈಲ್ಯಾಟರಲ್ ಪ್ಲ್ಯೂರಲ್ ಎಫುಶನ್​ನಿಂದ-ಅಂದರೆ ಶ್ವಾಸಕೋಶದ ಹೊರಭಾಗದಲ್ಲಿರುವ ಪ್ಲ್ಯೂರ ಪದರುಗಳ ನಡುವೆ ಅಧಿಕ ಪ್ರಮಾಣದಲ್ಲಿ ದ್ರಾವಣ ಶೇಖರಣೆಯಾಗುವ ಸಮಸ್ಯೆಯಿಂದ ಬಳಲುತ್ತಿರುವರೆಂದು ವೈದ್ಯರು ಹೇಳಿದ್ದರು

ದಿಲಿಪ್ ಕುಮಾರ್ ಸಾಹಬ್ ಆರೋಗ್ಯ ಸ್ಥಿರವಾಗಿದೆಯಾದರೂ, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ: ಸಾಯಿರಾ ಬಾನು
ದಿಲಿಪ್ ಕುಮಾರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2021 | 4:41 PM

ನವದೆಹಲಿ: 1998 ರಲ್ಲಿ ಕೊನೆಯ ಬಾರಿಗೆ ಹಿಂದಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್​ನ ಮೊದಲ ಸೂಪರ್ ಸ್ಟಾರ್ ದಿಲಿಪ್ ಕುಮಾರ್ ಅವರ ಅರೋಗ್ಯ ಸ್ಥಿರವಾಗಿದೆಯಾದರೂ ಇನ್ನೂ ತುರ್ತು ಚಿಕಿತ್ಸಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಮುಂದುವರೆದಿದೆಯೆಂದು ಅವರ ಪತ್ನಿ ಸಾಯಿರಾಬಾನು ಹೇಳಿರುವುದನ್ನು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. 98 ವರ್ಷ ವಯಸ್ಸಿನ ದಿಲಿಪ್ ಕುಮಾರ್ ಅವರು ಈ ವಾರದ ಅರಂಭದಲ್ಲಿ ಉಸಿರಾಟದ ತೊಂದರೆ ಬಗ್ಗೆ ದೂರಿದ ನಂತರ ಮುಂಬಯಿ ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ‘ದಿಲಿಪ್ ಕುಮಾರ ಸಾಹಬ್ ಅವರ ಅರೋಗ್ಯ ಸ್ಥಿರವಾಗಿದೆ. ಅವರಿನ್ನೂ ಐಸಿಯುನಲ್ಲಿದ್ದಾರೆ. ಅವರನ್ನು ಮನೆಗೆ ಕರೆದೊಯ್ಯುವ ಇಚ್ಛೆ ನಮಗಿದೆ, ಆದರೆ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ಅನುಮತಿಗಾಗಿ ಕಾಯುತ್ತಿದ್ದೇವೆ. ಅವರು ಒಪ್ಪಿಗೆ ನೀಡಿದ ಕೂಡಲೇ ನಾವು ದಿಲಿಪ್ ಸಾಹಬ್​ರನ್ನು ಮನೆಗ ಕರೆದುಕೊಂಡು ಹೋಗುತ್ತೇವೆ. ಶನಿವಾರದಂದು ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಅಂತೂ ಇಲ್ಲ. ಅವರ ಆಬಿಮಾನಿಗಳ ಪ್ರಾರ್ಥನೆ ಮತ್ತು ಶುಭಹಾರೈಕೆಗಳು ನಮಗೆ ಬೇಕು,’ ಎಂದು ಸಾಯಿರಾ ಬಾನು ಅವರು ಎಎನ್​ಐ ಗೆ ತಿಳಿಸಿದ್ದಾರೆ. ಇಲ್ಲಿ ಜ್ಞಾಪಿಸಿಕೊಳ್ಳಬೇಕಿರುವ ವಿಷಯವೆಂದರೆ ಜೂನ್​ನಲ್ಲಿ ಅನಾರೋಗ್ಯದ ನಿಮಿತ್ತ ದಿಲಿಪ್ ಅವರನ್ನು ಹಿಂದೂಜಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಕೇವಲ ಎರಡು ವಾರಗಳ ನಂತರ ಅವರ ಅವರ ಅರೋಗ್ಯದಲ್ಲಿ ಏರುಪೇರಾಗಿದ್ದರಿಂದ ಪುನಃ ದಾಖಲಿಸಲಾಗಿತ್ತು.

ಜೂನ್ 6ರಂದು ಸಹ ದಿಲಿಪ್ ಕುಮಾರ್ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ‘ಬಾಲಿವುಡ್ ಥೆಸ್ಪಿಯನ್ ಬೈಲ್ಯಾಟರಲ್ ಪ್ಲ್ಯೂರಲ್ ಎಫುಶನ್​ನಿಂದ-ಅಂದರೆ ಶ್ವಾಸಕೋಶದ ಹೊರಭಾಗದಲ್ಲಿರುವ ಪ್ಲ್ಯೂರ ಪದರುಗಳ ನಡುವೆ ಅಧಿಕ ಪ್ರಮಾಣದಲ್ಲಿ ದ್ರಾವಣ ಶೇಖರಣೆಯಾಗುವ ಸಮಸ್ಯೆಯಿಂದ ಬಳಲುತ್ತಿರುವರೆಂದು ವೈದ್ಯರು ಹೇಳಿದ್ದರು. ನಂತರ ದಿಲಿಪ್ ಅವರು ಯಶಸ್ವೀ ಪ್ಲ್ಯೂರಲ್ ಆಸ್ಪರೇಶನ್ ಪ್ರೋಸಿಜರ್​ಗೆ ಒಳಗಾಗಿದ್ದರು,’ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು. ಜೂನ್ 11 ರಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿದ್ದ ಸಾಯಿರಾ ಬಾನು ಅವರು, ‘ ಆವರ ಶ್ವಾಸಕೋಶಗಳಿಂದ ದ್ರವವನ್ನು ತೆಗೆಯಲಾಗಿದೆ,’ ಎಂದು ಹೇಳಿದ್ದರು.

ಹಲವಾರು ಮಾಜಿ ಮತ್ತು ಹಾಲಿ ನಟರಿಂದ ನಟನೆಯ ಒಂದು ಇನ್​ಸ್ಟಿಟ್ಯೂಷನ್ ಎಂದು ಕರೆಸಿಕೊಳ್ಳುವ ದಿಲಿಪ್ ಅವರ ಅಧಿಕೃತ ಟ್ವಿಟ್ಟರ್​ ಹ್ಯಾಂಡಲ್​ನಿಂದ ಜೂನ್ 11 ರಂದು ನಟನ ಫ್ಯಾಮಿಲ್ ಮಿತ್ರರಾಗಿರುವ ಫೈಸಲ್ ಫರೂಕಿ ಅವರು, ‘ನಿಮ್ಮೆಲ್ಲರ ಪ್ರೀತಿ, ಆದರಣೆ ಮತ್ತು ಪ್ರಾರ್ಥನೆಗಳಿಂದ ದಿಲಿಪ್ ಸಾಹಬ್​ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಹೋಗುತ್ತಿದ್ದಾರೆ. ದೇವರ ಅಪರಿಮಿತವಾದ ಕರುಣೆ ಮತ್ತು ಡಾ ಗೋಖಲೆ, ಡಾ ಪಾರ್ಕರ್, ಡಾ ಅರುಣ್ ಶಾ ಮತ್ತು ಹಿಂದೂಜಾ ಖಾರ್ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದ ಪ್ರೀತಿಭರಿತ ಕಾಳಜಿಯಿಂದ ಅವರು ಗುಣಮುಖರಾಗಿದ್ದಾರೆ,’ ಎಂದು ಟ್ವೀಟ್​ ಮಾಡಿದ್ದರು.

ದಿಲಿಪ್ ಕುಮಾರ ಅವರು ಅನೇಕ ಯಶಸ್ವೀ ಚಿತ್ರಗಳಲ್ಲಿ ನಟಿಸಿದ್ದಾರೆ. ಮೊಘಲ್ ಅರಸ ಅಕ್ಬರ್​ನ ಮಗ ಸಲೀಂ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದ ‘ಮೊಘಲ್-ಎ-ಆಜಾಮ್’ ಭಾರತೀಯ ಸಿನಿಮಾ ರಂಗದ ಮಾಸ್ಟರ್​ ಪೀಸ್​ಗಳಲ್ಲೊಂದು ಅಂತ ಬಣ್ಣಿಸಲಾಗುತ್ತದೆ. ಎಪ್ಪತ್ತು ಮತ್ತು ಎಂಭತ್ತರದ ದಶಕದಲ್ಲಿ ಹಿಂದಿ ಚಿತ್ರರಂಗವನ್ನಾಳಿದ ಮತ್ತೊಬ್ಬ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್​ ಅವರೊಂದಿಗೆ ನಟಿಸಿದ ‘ಶಕ್ತಿ’ ಸಿನಿಮಾ ಸಹ ಬಾಕ್ಸಾಫೀಸನ್ನು ಕೊಳ್ಳೆ ಹೊಡೆದಿತ್ತು. ಹಾಗೆ ನೋಡಿದರೆ ದಿಲಿಪ್ ಕುಮಾರ ನಟನೆಯ ಚಿತ್ರಗಳು ಆಪರೂಪಕ್ಕೆ ಫೇಲಾಗುತ್ತಿದ್ದವು. ‘ನಯಾ ದೌರ್’, ‘ರಾಮ್ ಔರ್ ಶ್ಯಾಮ್’, ‘ಕೊಹಿನೂರ್’, ‘ಕರ್ಮ’, ‘ಮಶಾಲ್’, ‘ವಿಧಾತಾ’, ಮೊದಲಾದ ಸೂಪರ್ ಹಿಟ್​ ಚಿತ್ರಗಳಲ್ಲಿ ಅವರು ನಟಿಸಿದ್ದರು. ಅವರ ನಟನೆಯ ಕೊನೆ ಚಿತ್ರ ಕಿಲಾ 1998ರಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ: Dilip Kumar: ಬಾಲಿವುಡ್​ ಖ್ಯಾತ ನಟ ದಿಲೀಪ್​ ಕುಮಾರ್​ ಮತ್ತೆ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ