AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aamir Khan: ಆಮಿರ್​​ ಖಾನ್​-ಕಿರಣ್​ ರಾವ್​ ವಿಚ್ಛೇದನ; 15 ವರ್ಷದ ದಾಂಪತ್ಯ ಜೀವನ ಅಂತ್ಯ

Aamir Khan Kiran Rao Divorce: ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ವಿಚ್ಛೇದನ ಪಡೆದುಕೊಂಡಿದ್ದು, ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪುತ್ರ ಆಜಾದ್​ ರಾವ್​ ಖಾನ್​ನ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಂಡಿದ್ದಾರೆ.

Aamir Khan: ಆಮಿರ್​​ ಖಾನ್​-ಕಿರಣ್​ ರಾವ್​ ವಿಚ್ಛೇದನ; 15 ವರ್ಷದ ದಾಂಪತ್ಯ ಜೀವನ ಅಂತ್ಯ
ಆಮೀರ್​ ಖಾನ್​ - ಕಿರಣ್​ ರಾವ್​
Follow us
ಮದನ್​ ಕುಮಾರ್​
|

Updated on:Jul 03, 2021 | 1:06 PM

ಬಾಲಿವುಡ್​ ನಟ ಆಮಿರ್​ ಖಾನ್​ ಹಾಗೂ ಕಿರಣ್​ ರಾವ್​ ವಿಚ್ಛೇದನ ಪಡೆದುಕೊಂಡಿದ್ದಾರೆ. 15 ವರ್ಷಗಳ ಅವರ ದಾಂಪತ್ಯ ಜೀವನ ಅಂತ್ಯವಾಗಿದೆ. ಈ ಕುರಿತು ಅವರಿಬ್ಬರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. 10 ವರ್ಷದ ಪುತ್ರ ಆಜಾದ್​ ರಾವ್​ ಖಾನ್​ನ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಬಹಳ ದಿನಗಳಿಂದಲೇ ವಿಚ್ಛೇದನ ಪಡೆಯುವ ಬಗ್ಗೆ ಈ ಜೋಡಿ ಆಲೋಚಿಸಿತ್ತ ಎಂಬ ವಿಚಾರ ಕೂಡ ಈಗ ಬಯಲಾಗಿದೆ.

2005ರಲ್ಲಿ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಮದುವೆ ಆಗಿದ್ದರು. 2011ರಲ್ಲಿ ಅವರಿಗೆ ಗಂಡು ಮಗು (ಆಜಾದ್​) ಜನಿಸಿತ್ತು. ಇಷ್ಟು ವರ್ಷಗಳ ಅವರ ದಾಂಪತ್ಯ ಜೀವನ ಈಗ ಅಂತ್ಯವಾಗಿದೆ. ಡಿವೋರ್ಸ್​ ಆಗಿದ್ದರೂ ಕೂಡ ಸಿನಿಮಾ ಮತ್ತು ಇನ್ನಿತರ ಪ್ರಾಜೆಕ್ಟ್​ಗಳಲ್ಲಿ ಜೊತೆಯಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ‘ಪಾನಿ ಪೌಂಡೇಶನ್​’ ಕೆಲಸಗಳನ್ನು ಇಬ್ಬರೂ ಜೊತೆಯಾಗಿ ನೋಡಿಕೊಳ್ಳಲಿದ್ದಾರೆ.

‘ಈ 15 ವರ್ಷಗಳ ಜೀವನವನ್ನು ನಾವು ಖುಷಿ ಮತ್ತು ಸಂತೋಷದಿಂದ ಕಳೆದಿದ್ದೇವೆ. ನಂಬಿಕೆ, ಪ್ರೀತಿ ಮತ್ತು ಗೌರವದಿಂದ ನಮ್ಮ ಸಂಬಂಧ ಬೆಳೆದಿತ್ತು. ಈಗ ನಾವು ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. ಇನ್ಮುಂದೆ ನಾವು ಪತಿ-ಪತ್ನಿ ಅಲ್ಲ. ಆದರೆ ಅಜಾದ್​ನ ಪಾಲಕರಾಗಿ, ಆ ಮೂಲಕ ಕುಟುಂಬದವರಾಗಿ ಇರುತ್ತೇವೆ. ಬೇರೆಯಾಗುವ ಬಗ್ಗೆ ಕೆಲವು ಸಮಯದ ಹಿಂದೆಯೇ ಯೋಚಿಸಿದ್ದೆವು. ಮಗನನ್ನು ಜೊತೆಯಾಗಿ ಬೆಳೆಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ನಮಗೆ ಬೆಂಬಲವಾಗಿ ನಿಂತಿರುವ ಕುಟುಂಬದವರು ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನಮಗೆ ಶುಭ ಹಾರೈಸಬೇಕು ಎಂದು ಎಲ್ಲ ಹಿತೈಷಿಗಳಲ್ಲಿ ಕೇಳಿಕೊಳ್ಳುತ್ತೇವೆ. ಈ ವಿಚ್ಛೇದನವನ್ನು ಅಂತ್ಯವೆಂದು ನೋಡದೇ ಒಂದು ಹೊಸ ಆರಂಭದ ರೀತಿ ನೋಡಿ ಎಂದು ವಿನಂತಿಸಿಕೊಳ್ಳುತ್ತೇವೆ. ಪ್ರೀತಿಯಿಂದ- ಆಮಿರ್​ ಖಾನ್​ ಮತ್ತು ಕಿರಣ್​ ರಾವ್​’ ಎಂದು ಹೇಳಿಕೆಯಲ್ಲಿ ಬರೆಯಲಾಗಿದೆ.

1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್​ ಖಾನ್​ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು (ಪುತ್ರ ಜುನೈದ್​, ಪುತ್ರಿ ಇರಾ) ಜನಿಸಿದರು. 2002ರಲ್ಲಿ ಆಮಿರ್​ ಮತ್ತು ರೀನಾ ಡಿವೋರ್ಸ್​ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು. ಮೊದಲ ಪತ್ನಿಯ ಮಕ್ಕಳ ಜೊತೆ ಆಮಿರ್​ ಖಾನ್​ ಇಂದಿಗೂ ಚೆನ್ನಾಗಿಯೇ ಇದ್ದಾರೆ.

ಇದನ್ನೂ ಓದಿ:

ಬೀದಿಯಲ್ಲಿ ಪೋಸ್ಟರ್​ ಹಚ್ಚುತ್ತಿದ್ದ ಆಮೀರ್​ ಖಾನ್​ ವಿಡಿಯೋ ವೈರಲ್​; ಅಂದು ಸಿಗುತ್ತಿದ್ದ ಸಂಬಳ ಎಷ್ಟು?

ಆಮಿರ್​​ ಖಾನ್​ ಸಂಬಂಧಿ ಇಮ್ರಾನ್​ ಖಾನ್​ ಮೂರು ಮತ್ತೊಂದು ಸಿನಿಮಾ ಮಾಡಿ ನಟನೆಗೆ ಗುಡ್​ಬೈ ಹೇಳಿದ್ದು ಯಾಕೆ?

Published On - 12:26 pm, Sat, 3 July 21

ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ
ನೆಲಮಂಗಲ: ಹೆದ್ದಾರಿ ಜಲಾವೃತ, ನೀರಿನಲ್ಲಿ ಬಂದ ಬೈಕ್ ಸವಾರನ ಸ್ಥಿತಿ ನೋಡಿ!
ನೆಲಮಂಗಲ: ಹೆದ್ದಾರಿ ಜಲಾವೃತ, ನೀರಿನಲ್ಲಿ ಬಂದ ಬೈಕ್ ಸವಾರನ ಸ್ಥಿತಿ ನೋಡಿ!
Daily Horoscope: ಸೋಮವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily Horoscope: ಸೋಮವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಬೆಂಗಳೂರು ಮಳೆ: ಸಿಸಿಬಿ ಕಚೇರಿಯೊಳಗೆ ನುಗ್ಗಿದ ನೀರು, ಅವಾಂತರ
ಬೆಂಗಳೂರು ಮಳೆ: ಸಿಸಿಬಿ ಕಚೇರಿಯೊಳಗೆ ನುಗ್ಗಿದ ನೀರು, ಅವಾಂತರ
ಮಳೆ ಅಬ್ಬರಕ್ಕೆ ಶಾಂತಿನಗರದಲ್ಲಿ ಭಾಗಶಃ ಮುಳುಗಿದ ಬಸ್​ಗಳು
ಮಳೆ ಅಬ್ಬರಕ್ಕೆ ಶಾಂತಿನಗರದಲ್ಲಿ ಭಾಗಶಃ ಮುಳುಗಿದ ಬಸ್​ಗಳು