ಬೀದಿಯಲ್ಲಿ ಪೋಸ್ಟರ್ ಹಚ್ಚುತ್ತಿದ್ದ ಆಮೀರ್ ಖಾನ್ ವಿಡಿಯೋ ವೈರಲ್; ಅಂದು ಸಿಗುತ್ತಿದ್ದ ಸಂಬಳ ಎಷ್ಟು?
Aamir Khan: ಇಂದು ನೂರಾರು ಕೋಟಿ ಸಂಭಾವನೆ ಪಡೆಯುವ ಆಮೀರ್ ಖಾನ್ ಅವರು ಅಂದು ಕೆಲವೇ ಸಾವಿರ ರೂ.ಗಳನ್ನು ಪಡೆದು ಮನೆಗೆ ಹೋಗಿದ್ದರು. ಆಗ ಅವರ ಬಳಿ ಸ್ವಂತ ಕಾರು ಕೂಡ ಇರಲಿಲ್ಲ.
ಬಾಲಿವುಡ್ ನಟ ಆಮೀರ್ ಖಾನ್ಗೆ ಇಂದು ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ ರಿಲೀಸ್ ಆದರೆ ಮೊದಲ ದಿನವೇ ಮುಗಿಬಿದ್ದು ನೋಡಲು ಕೋಟ್ಯಂತರ ಫ್ಯಾನ್ಸ್ ಸಿದ್ಧವಾಗಿರುತ್ತಾರೆ. ಅವರ ಅನೇಕ ಚಿತ್ರಗಳು 100 ಕೋಟಿಗಿಂತಲೂ ಹೆಚ್ಚು ಕಮಾಯಿ ಮಾಡಿವೆ. ಆದರೆ ಪ್ರಾರಂಭದಲ್ಲಿ ಯಾವುದೂ ಹೀಗೆ ಇರಲಿಲ್ಲ. ಆಮೀರ್ ಖಾನ್ ಯಾರು ಎಂಬುದೇ ಜನರಿಗೆ ಗೊತ್ತಿರಲಿಲ್ಲ! ಮುಂಬೈನ ಬೀದಿಗಳಲ್ಲಿ ಅವರು ನಡೆದುಕೊಂಡು ಬಂದರೂ ಕೂಡ ಜನರು ಗುರುತಿಸುತ್ತಿರಲಿಲ್ಲ. ಆ ಸಂದರ್ಭದ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ.
1988ರಲ್ಲಿ ಆಮೀರ್ ಖಾನ್ ನಟನೆಯ ‘ಖಯಾಮತ್ ಸೇ ಖಯಾಮತ್ ತಕ್’ ಸಿನಿಮಾ ತೆರೆಕಂಡಿತು. ಆ ಚಿತ್ರದ ಪ್ರಚಾರಕ್ಕಾಗಿ ಅವರು ಬೀದಿ ಬೀದಿಗಳಲ್ಲಿ ಸುತ್ತಾಡಿ ಪೋಸ್ಟರ್ ಅಂಟಿಸಿದ್ದರು. ಮುಂಬೈನಲ್ಲಿ ಓಡಾಡುತ್ತಿದ್ದ ಆಟೋ ಮತ್ತು ಟ್ಯಾಕ್ಸಿಗಳ ಹಿಂದೆ ಹೋಗಿ ಪೋಸ್ಟರ್ ಹಚ್ಚುತ್ತಿದ್ದರು. ಅವರಿಗೆ ಸಹ ಕಲಾವಿದರು ಸಾಥ್ ನೀಡಿದ್ದರು. ಆ ಸಮಯದಲ್ಲಿ ಇದು ಯಾವ ಸಿನಿಮಾ? ಹೀರೋ ಯಾರು? ಆಮೀರ್ ಖಾನ್ ಅಂದರೆ ಯಾರು ಎಂದು ಸ್ವತಃ ಆಮೀರ್ ಖಾನ್ಗೆ ಜನರು ಪ್ರಶ್ನೆ ಮಾಡುತ್ತಿದ್ದರಂತೆ. ಅಂದರೆ, ಆಮೀರ್ ಆಗ ಸ್ವಲ್ಪವೂ ಜನಪ್ರಿಯರಾಗಿರಲಿಲ್ಲ.
ಖಯಾಮತ್ ಸೇ ಖಯಾಮತ್ ತಕ್ ಚಿತ್ರದಲ್ಲಿ ಆಮೀರ್ ಖಾನ್ಗೆ ಜೋಡಿಯಾಗಿ ಜೂಹೀ ಚಾವ್ಲಾ ನಟಿಸಿದ್ದರು. ಸಿನಿಮಾ ಹಿಟ್ ಆಯಿತು. ಆ ಚಿತ್ರದಲ್ಲಿ ಆಮೀರ್ ಖಾನ್ಗೆ ಸಿಕ್ಕ ಸಂಭಾವನೆ ಕೇವಲ 11 ಸಾವಿರ ರೂಪಾಯಿ. ಇಂದು ನೂರಾರು ಕೋಟಿ ಸಂಭಾವನೆ ಪಡೆಯುವ ಅವರು ಅಂದು ಕೆಲವೇ ಸಾವಿರ ರೂ.ಗಳನ್ನು ಪಡೆದು ಮನೆಗೆ ಹೋಗಿದ್ದರು. ಆಗ ಅವರ ಬಳಿ ಸ್ವಂತ ಕಾರು ಕೂಡ ಇರಲಿಲ್ಲ.
View this post on Instagram
‘ಖಯಾಮತ್ ಸೇ ಖಯಾಮತ್ ತಕ್’ ಸಿನಿಮಾ ಹಿಟ್ ಆದರೂ ಕೂಡ ಒಂದು ಕಾರು ಖರೀದಿಸಲು ನನ್ನ ಬಳಿ ಹಣ ಇರಲಿಲ್ಲ. ನಂತರ ನನ್ನ ಖ್ಯಾತಿ ಹೆಚ್ಚಾಗಿ ಜನರು ನನ್ನನ್ನು ಮುತ್ತಿಗೆ ಹಾಕುವುದಕ್ಕೆ ಆರಂಭಿಸುವವರೆಗೂ ನಾನು ಸಾರ್ವಜನಿಕ ಸಾರಿಗೆಯಲ್ಲೇ ಓಡಾಡುತ್ತಿದ್ದೆ’ ಎಂದು ಆಮೀರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸದ್ಯ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದು ಹಾಲಿವುಡ್ನ ಫಾರೆಸ್ಟ್ ಗಂಪ್ ಸಿನಿಮಾದ ಹಿಂದಿ ರಿಮೇಕ್. ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ. ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ ಕೂಡ ಒಂದು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:
ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಲೇಹ್-ಲಡಾಖ್ಗೆ ತೆರಳಿದ ಆಮೀರ್ ಖಾನ್