AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Suresh: ‘ನನ್ನನ್ನು ಮದುವೆಗೆ ಆಮಂತ್ರಿಸು’ ಎನ್ನುವ ಮೂಲಕ ಮಂಜುಗೆ ಎಲ್ಲವನ್ನೂ ಸ್ಪಷ್ಟಪಡಿಸಿದ ದಿವ್ಯಾ ಸುರೇಶ್​

Bigg Boss Kannada: ಬಿಗ್ ಬಾಸ್ ಮನೆ ಪ್ರವೇಶಿಸಿದ ದಿನದಿಂದಲೇ ಮಂಜು ಹಾಗೂ ದಿವ್ಯಾ ಆಪ್ತರಾಗಿ ನಡೆದುಕೊಂಡಿದ್ದರು. ಬರುಬರುತ್ತಾ ಇವರ ಬಂಧ ಗಟ್ಟಿಯಾಗಿತ್ತು.

Divya Suresh: ‘ನನ್ನನ್ನು ಮದುವೆಗೆ ಆಮಂತ್ರಿಸು’ ಎನ್ನುವ ಮೂಲಕ ಮಂಜುಗೆ ಎಲ್ಲವನ್ನೂ ಸ್ಪಷ್ಟಪಡಿಸಿದ ದಿವ್ಯಾ ಸುರೇಶ್​
ಮಂಜು ಪಾವಗಡ - ದಿವ್ಯಾ ಸುರೇಶ್​
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:May 13, 2021 | 4:10 PM

Share

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಆಪ್ತರಾಗಿದ್ದರು. ಇವರಿಬ್ಬರ ಮಧ್ಯೆ ಇರುವುದು ಪ್ರೀತಿಯೋ ಅಥವಾ ಗೆಳೆತನವೋ ಎನ್ನುವ ವಿಚಾರ ವೀಕ್ಷಕರಿಗೆ ಸ್ಪಷ್ಟವಾಗಿರಲಿಲ್ಲ. ಆದರೆ, ಕೊನೆಯ ದಿನ ಮಂಜುಗೆ ದಿವ್ಯಾ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ವೀಕ್ಷಕರಲ್ಲಿದ್ದ ಡೌಟ್ ಅನ್ನು ಅವರು ಕ್ಲಿಯರ್ ಮಾಡಿದ್ದಾರೆ.

ಬಿಗ್ ಬಾಸ್ ಮನೆ ಪ್ರವೇಶಿಸಿದ ದಿನದಿಂದಲೇ ಮಂಜು ಹಾಗೂ ದಿವ್ಯಾ ಆಪ್ತರಾಗಿ ನಡೆದುಕೊಂಡಿದ್ದರು. ಬರುಬರುತ್ತಾ ಇವರ ಬಂಧ ಗಟ್ಟಿಯಾಗಿತ್ತು. ಈ ಕಾರಣಕ್ಕೆ ಮಂಜು ಬಾಲ ದಿವ್ಯಾ ಎನ್ನುವ ಆರೋಪ ಬಂತು. ಈ ಆರೋಪಗಳು ಹೆಚ್ಚಾದಂತೆ ದಿವ್ಯಾ ಅವರಲ್ಲಿ ಆತಂಕ ಶುರುವಾಗಿತ್ತು. ಹೀಗಾಗಿ, ಮಂಜು ನನ್ನ ಫ್ರೆಂಡ್ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಕೆಲವೊಮ್ಮೆ ಮಂಜು ನನ್ನ ಬಾಯ್​ಫ್ರೆಂಡ್​ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದರು.

ಕೊನೆಯ ದಿನ ಮಂಜು ಹಾಗೂ ದಿವ್ಯಾ ಒಟ್ಟಾಗಿ ಕುಳಿತು ಮಾತನಾಡಿದ್ದಾರೆ. ಈ ವೇಳೆ ಮಂಜುಗೆ ನಮ್ಮಿಬ್ಬರ ನಡುವೆ ಇರುವ ಸಂಬಂಧ ಏನು ಎಂಬುದನ್ನು ದಿವ್ಯಾ ಸ್ಪಷ್ಟಪಡಿಸಿದ್ದಾರೆ. ‘ಲಾಕ್ಡೌನ್ ಆದಮೇಲೆ ಸಿಗೋಣ. ಮನೆಗೆ ಬಾ. ನನ್ನ ಅಮ್ಮನನ್ನು ಪರಿಚಯ ಮಾಡಿಸುತ್ತೇನೆ. ನನ್ನನ್ನು ಮದುವೆಗೆ ಆಮಂತ್ರಿಸು’ ಎಂದು ಹೇಳಿದರು. ಮದುವೆಗೆ ಕರಿ ಎಂದಾಗ ಮಂಜು ಒಂದೇ ಒಂದು ಮಾತನ್ನೂ ಆಡಿಲ್ಲ.

ಮಂಜ ನನ್ನನ್ನು ನೀನು ಸಹಿಸೊಂಡಿದ್ದಕ್ಕೆ ಥ್ಯಾಂಕ್ಸ್. ಬೇರೆಯವರ ಸಿಟ್ಟನ್ನು ಕೆಲವೊಮ್ಮೆ ನಿನ್ನ ಮೇಲೆ ತೋರಿಸಿದ್ದೇನೆ. ಆದರೆ, ಎಲ್ಲಾ ಟೈಮ್​ನಲ್ಲೂ ಅಲ್ಲ. ನೀನು ನನಗೆ ಯಾವಾಗಲೂ ಸ್ಪೆಷಲ್. ನಿನ್ನನ್ನು ನಾನು ಬೇರೆಯದೇ ಸ್ಥಾನದಲ್ಲಿ ಇಟ್ಟಿದ್ದೇನೆ’ ಎಂದರು.

ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದೆ. ಈ ಕಾರಣಕ್ಕೆ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿದೆ. ಅಂತಿಮ ದಿನದ ಎಪಿಸೋಡ್​ಗಳನ್ನು ಮೇ 11 ಹಾಗೂ 12ರಂದು ಪ್ರಸಾರ ಮಾಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಅಂತಿಮ ವಿದಾಯ ಹೇಳುವ ಮೂಲಕ ಎಲ್ಲರನ್ನೂ ಕಳಿಸಿಕೊಡಲಾಯಿತು.

ಇದನ್ನೂ ಓದಿ: Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ

Published On - 3:59 pm, Thu, 13 May 21