AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್​ ಹಾಕದ ಆಮೀರ್​ ಖಾನ್​ಗೆ ಕ್ಲಾಸ್​ ತೆಗೆದುಕೊಂಡ ಅಭಿಮಾನಿಗಳು!

ಆಮೀರ್​ ಮಕ್ಕಳೊಡನೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ. ಗಲ್ಲಿ ಕ್ರಿಕೆಟ್​​ನ ವೀಡಿಯೋ ಹಾಗೂ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರೆ ಕೆಲವರು ಟೀಕೆ ಕೂಡಾ ಮಾಡುತ್ತಿದ್ದಾರೆ. 

ಮಾಸ್ಕ್​ ಹಾಕದ ಆಮೀರ್​ ಖಾನ್​ಗೆ ಕ್ಲಾಸ್​ ತೆಗೆದುಕೊಂಡ ಅಭಿಮಾನಿಗಳು!
ಕ್ರಿಕೆಟ್​ ಆಡಿದ ಆಮೀರ್ ಖಾನ್​
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 11, 2021 | 8:32 PM

Share

ಈಗಿನ ಕಾಲದಲ್ಲಿ ಸಿನಿಮಾ ಸೆಲೆಬ್ರಿಟಿಗಳು ಪ್ರತಿಯೊಂದು ವಿಷಯಗಳಲ್ಲೂ ಸಾಕಷ್ಟು ಎಚ್ಚರ ವಹಿಸಬೇಕಾಗುವುದು ಅನಿವಾರ್ಯವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿ ಅವರು ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಕೂಡಾ ಆಗಾಗ ಅವರು ಟ್ರೋಲ್​ಗಳಿಗೆ ತುತ್ತಾಗುತ್ತಾರೆ. ಸೆಲೆಬ್ರಿಟಿಗಳು ಆಡುವ ಮಾತು, ನೀಡುವ ಹೇಳಿಕೆಗಳು, ಅವರ ವರ್ತನೆ, ಅವರ ಕೆಲಸಗಳು, ಊಟ ತಿಂಡಿ ಇಂದ ಹಿಡಿದು ಅವರು ತೊಡುವ ಬಟ್ಟೆಗಳವರೆಗೆ ಪ್ರತಿಯೊಂದರ ವಿಷಯದಲ್ಲಿ ಅವರು ಸಾಕಷ್ಟು ಎಚ್ಚರವಾಗಿರಬೇಕು. ಇಲ್ಲವಾದರಲ್ಲಿ ಜನ ಮತ್ತು ಮಾಧ್ಯಮಗಳಿಂದ ನಿಂದನೆಗೊಳಗಾಗಬೇಕಾಗುತ್ತದೆ. ಈಗಅಂತಹುದೇ ಒಂದು ಟ್ರೋಲ್ ಹಾಗೂ ಟೀಕೆ ಗಳಿಗೆ ಗುರಿಯಾಗಿದ್ದಾರೆ ಬಾಲಿವುಡ್​​ ನಟ ಆಮೀರ್ ಖಾನ್.

ಹಾಗಾದರೆ ಈ ಬಾರಿ ಆಮೀರ್ ಖಾನ್ ಟ್ರೋಲ್ ಆಗಲು ಕಾರಣವಾದರೂ ಏನು? ಅದಕ್ಕೂ ಉತ್ತರವಿದೆ. ಆಮೀರ್​ ಮಕ್ಕಳೊಡನೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ. ಗಲ್ಲಿ ಕ್ರಿಕೆಟ್​​ನ ವೀಡಿಯೋ ಹಾಗೂ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರೆ ಕೆಲವರು ಟೀಕೆ ಕೂಡಾ ಮಾಡುತ್ತಿದ್ದಾರೆ.

ಆಮೀರ್ ಖಾನ್ ಅವರಿಗೆ ಈಗ ಮಾಸ್ಕ್​ನ ಅಗತ್ಯ ಇಲ್ಲವೇ? ಎಂದು ಕೆಲವರು ಟೀಕೆ ಮಾಡಿದರೆ, ಮತ್ತೆ ಕೆಲವರು ಬಹಶಃ ಅಣ್ಣಾವ್ರು ಲಸಿಕೆ ಹಾಕಿಸಿಕೊಂಡಿರಬಹುದು ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನು ಆಮೀರ್ ಖಾನ್ ಅವರ ಅಭಿಮಾನಿಗಳು ಕ್ರಿಕೆಟ್ ಆಡುವಾಗ ಮಾಸ್ಕ್ ಹಾಕಿ ಆಡುವುದು ಸಾಧ್ಯವಿಲ್ಲ. ಅವರೇನು ಉಸಿರಾಡುವುದು ಬೇಡವೇ? ಎಂದಿದ್ದಾರೆ. ಒಟ್ಟಾರೆ ನಟನಿಗೆ ಪರ ಹಾಗೂ ವಿರೋಧದ ಮಾತುಗಳೆರಡು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಆಮೀರ್​ ಖಾನ್​ ವಿಡಿಯೋ ಡಿಲೀಟ್​ ಮಾಡಿದ್ದಾರೆ.

ಕಳೆದ ಬಾರಿ ಟರ್ಕಿಗೆ ಸಿನಿಮಾ ಶೂಟಿಂಗ್ ಗೆಂದು ಹೋಗಿದ್ದ ಅವರು ಅಲ್ಲಿನ ದೇಶಾಧ್ಯಕ್ಷರ ಪತ್ನಿಯನ್ನು ಭೇಟಿ ಮಾಡಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ ಜನರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

RRR ಸಿನಿಮಾದ ಶೂಟಿಂಗ್‌ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾ.. ತೆರೆಮೇಲೆ ಹುಟ್ಟಲಿದೆ ಅದ್ಭುತ ದೃಶ್ಯ ವೈಭವ

Published On - 5:44 pm, Mon, 11 January 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ