ಗೂಗಲ್​ನಲ್ಲಿ ಟ್ರೆಂಡ್ ಆಯ್ತು ಬ್ರೀಚ್ ಕ್ಯಾಂಡಿ ಹಾಸ್ಪಿಟಲ್, ವಿರಾಟ್ ಕೊಹ್ಲಿ

ಅನುಷ್ಕಾ ಶರ್ಮಾ ಹೆಸರಿಗಿಂತ ಹೆಚ್ಚು ಬಾರಿ ಜನರು ವಿರಾಟ್ ಕೊಹ್ಲಿ ಹೆಸರು ಹುಡುಕಿದ್ದು ಇನ್ನು ಕೆಲವರು ವಿರಾಟ್ ಕೊಹ್ಲಿ ಮಗಳ ಫೋಟೊ ಹುಡುಕಿದ್ದಾರೆ.

ಗೂಗಲ್​ನಲ್ಲಿ ಟ್ರೆಂಡ್ ಆಯ್ತು ಬ್ರೀಚ್ ಕ್ಯಾಂಡಿ ಹಾಸ್ಪಿಟಲ್, ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 11, 2021 | 5:42 PM

ಬೆಂಗಳೂರು:  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿಗೆ ಸೋಮವಾರ ಹೆಣ್ಣು ಮಗು ಜನಿಸಿದೆ. ಅನುಷ್ಕಾ ಅಮ್ಮನಾಗಿದ್ದಾಳೆ ಎಂಬುದು ಸುದ್ದಿ ಬ್ರೇಕ್ ಆದ ಬೆನ್ನಲ್ಲೇ ಟ್ವಿಟರ್​ನಲ್ಲಿ ವಿರಾಟ್ ಕೊಹ್ಲಿ ಟ್ರೆಂಡ್ ಆಗಿದ್ದಾರೆ. ಇತ್ತ ಗೂಗಲ್​​ನಲ್ಲಿ ವಿರಾಟ್ ಕೊಹ್ಲಿ, ಬ್ರೀಚ್ ಕ್ಯಾಂಡಿ ಹಾಸ್ಪಿಟಲ್ ಅತೀ ಹೆಚ್ಚು ಬಾರಿ ಹುಡುಕಿದ ಪದವಾಗಿದೆ.

ಅನುಷ್ಕಾ ಶರ್ಮಾಗೆ ಮುಂಬೈಯ ಬ್ರೀಚ್ ಕ್ಯಾಂಡಿ ಹಾಸ್ಪಿಟಲ್ ನಲ್ಲಿ ಹೆರಿಗೆಯಾಗಿರುವ ಕಾರಣ ಈ ಆಸ್ಪತ್ರೆ ಹೆಸರು ಟ್ರೆಂಡ್ ಆಗಿದೆ.

ಮಧಾಹ್ನ 1.30 ರಿಂದ 4.30ರ ಅವಧಿಯಲ್ಲಿನ ಗೂಗಲ್ ಟ್ರೆಂಡ್ ಗಮನಿಸಿದರೆ ಬ್ರೀಚ್ ಕ್ಯಾಂಡಿ ಹಾಸ್ಪಿಟಲ್, ವಿರಾಟ್ ಕೊಹ್ಲಿ ಮಗು, ವಿರಾಟ್ ಕೊಹ್ಲಿ ಟ್ವೀಟ್ ಮೊದಲಾದ ಪದಗಳು ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟಿವೆ. ಭಾರತದಲ್ಲಿನ ಗೂಗಲ್ ಟ್ರೆಂಡ್ ನೋಡಿದರೆ ಬ್ರೀಚ್ ಕ್ಯಾಂಡಿ ಹಾಸ್ಪಿಟಲ್, ವಿರುಷ್ಕಾ ಬೇಬಿ ಮೊದಲಾದ ಪದಗಳನ್ನು ಜನರು ಹೆಚ್ಚು ಬಾರಿ ಹುಡುಕಿದ್ದಾರೆ.

ಅನುಷ್ಕಾ ಶರ್ಮಾ ಹೆಸರಿಗಿಂತ ಹೆಚ್ಚು ಬಾರಿ ಜನರು ವಿರಾಟ್ ಕೊಹ್ಲಿ ಹೆಸರು ಹುಡುಕಿದ್ದು ಇನ್ನು ಕೆಲವರು ವಿರಾಟ್ ಕೊಹ್ಲಿ ಮಗಳ ಫೋಟೊ ಹುಡುಕಿದ್ದಾರೆ.

ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು