ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಲೇಹ್-ಲಡಾಖ್​ಗೆ ತೆರಳಿದ ಆಮೀರ್​ ಖಾನ್​

ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಕೆಲಸಗಳಲ್ಲಿ ಆಮೀರ್​ ಖಾನ್​ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್​ಗೆ ಈಗಾಗಲೇ ಸಾಕಷ್ಟು ವಿಘ್ನಗಳು ಎದುರಾಗಿವೆ.

ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಲೇಹ್-ಲಡಾಖ್​ಗೆ ತೆರಳಿದ ಆಮೀರ್​ ಖಾನ್​
ಲಡಾಖ್​ನಲ್ಲಿ ಆಮೀರ್​ ಖಾನ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on:May 02, 2021 | 5:36 PM

ಕೊರೊನಾ ವೈರಸ್​ ಎರಡನೇ ಅಲೆ ಭಾರತವನ್ನು ಬಿಟ್ಟು-ಬಿಡದೆ ಕಾಡುತ್ತಿದೆ. ಇದರಿಂದಾಗಿ ಮನೆಯಿಂದ ಹೊರಗೆ ಹೋಗುವುದಕ್ಕೂ ಭಯ ಬೀಳುವಂತಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬಾಲಿವುಡ್​ ನಟ ಆಮೀರ್​ ಖಾನ್​ ಲೇಹ್-ಲಡಾಖ್​ಗೆ ತೆರಳಿದ್ದಾರೆ. ಅಷ್ಟೇ ಅಲ್ಲ ಸುಮಾರು 50 ದಿನಗಳ ಕಾಲ ಅವರು ಅಲ್ಲಿಯೇ ಇರಲಿದ್ದಾರಂತೆ.

‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಕೆಲಸಗಳಲ್ಲಿ ಆಮೀರ್​ ಖಾನ್​ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್​ಗೆ ಈಗಾಗಲೇ ಸಾಕಷ್ಟು ವಿಘ್ನಗಳು ಎದುರಾಗಿವೆ. ಇದನ್ನೆಲ್ಲವೂ ಮೆಟ್ಟಿ ನಿಂತಿರುವ ಆಮೀರ್​ ಖಾನ್ ಈಗ ಮತ್ತೆ ಸಿನಿಮಾದ ಶೂಟಿಂಗ್​ ಆರಂಭಿಸಿದ್ದಾರೆ. ಇದಕ್ಕಾಗಿಯೇ ಅವರು ಲೇಹ್​-ಲಡಾಖ್​ಗೆ ತೆರಳಿದ್ದಾರೆ. ಸದ್ಯ, ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಅವರು, ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರಂತೆ.

ಆಮೀರ್ ಖಾನ್​ ಲಡಾಖ್​ನಲ್ಲಿರುವ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಇದರ ಜತೆಗೆ ಲಾಲ್​ ಸಿಂಗ್​ ಚಡ್ಡಾ ಸಿನಿಮಾದ ಕೆಲ ಶೂಟಿಂಗ್​ ದೃಶ್ಯಗಳು ಲೀಕ್​ ಆಗಿತ್ತು. ಇದು ಆಮೀರ್​ ಖಾನ್​ಗೆ ಬೇಸರ ತರಿಸಿದೆ. ಹೀಗಾಗಿ, ಈ ಬಗ್ಗೆಯೂ ಆಮೀರ್​ ಖಾನ್​ ಹೆಚ್ಚು ಗಮನಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರ್ಗಿಲ್​ ಭಾಗದಲ್ಲಿ ಪ್ರಮುಖ ದೃಶ್ಯಗಳ ಶೂಟಿಂಗ್​ ನಡೆಯಲಿದೆಯಂತೆ. ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಬೇಕಿತ್ತು. ಅವರ ಬದಲಿಗೆ ನಾಗ ಚೈತನ್ಯ ಅವರು ಈಗ ಚಿತ್ರತಂಡ ಸೇರಿಕೊಂಡಿದ್ದಾರೆ. ನಾಗ ಚೈತನ್ಯ ಕೂಡ ಶೀಘ್ರವೇ ಸಿನಿಮಾ ಸೆಟ್​ ಸೇರಿಕೊಳ್ಳಲಿದ್ದಾರಂತೆ. 45 ದಿನಗಳ ಕಾಲ ಶೂಟಿಂಗ್​ ನಡೆಯಲಿದೆ. ಎಲ್ಲವನ್ನೂ ತುಂಬಾನೇ ಪರ್ಫೆಕ್ಟ್​ ಆಗಿ ಶೂಟ್​ ಮಾಡುವ ಆಲೋಚನೆ ಆಮೀರ್​ ಖಾನ್​ ಅವರದ್ದು.

ಹಾಲಿವುಡ್​ನ ‘ಫಾರೆಸ್ಟ್​ ಗಂಪ್​​’ ಸಿನಿಮಾದ ಹಿಂದಿ ರಿಮೇಕ್​ ಲಾಲ್​ ಸಿಂಗ್​ ಚಡ್ಡಾ. ಆಮೀರ್​ ಖಾನ್​ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರೀನಾ ಕಪೂರ್​ ಚಿತ್ರದ ನಾಯಕಿ. 2021ರ ಡಿಸೆಂಬರ್ ಅಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಆದರೆ, ಶೂಟಿಂಗ್​ ವಿಳಂಬವಾಗುತ್ತಿರುವುದರಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗುತ್ತಿದೆ.

ಇದನ್ನೂ ಓದಿ: ಕಾನ್​​ ಚಿತ್ರೋತ್ಸವಕ್ಕೆ ಆಯ್ಕೆಯಾದ ಕನ್ನಡದ ‘ದೇವರ ಕನಸು’ ಸಿನಿಮಾ

Published On - 5:29 pm, Sun, 2 May 21

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ