Kanupriya Passed Away: ಟಿವಿ ಆ್ಯಂಕರ್, ಕಿರುತೆರೆ ನಟಿ ಕನುಪ್ರಿಯಾ ಕೊರೊನಾಗೆ ಬಲಿ
Kanupriya Passed Away: ಕೊರೊನಾ ವೈರಸ್ ಭಾರತದಲ್ಲಿ ಮಿತಿ ಮೀರಿ ಹರಡುತ್ತಿದೆ. ಇದರಿಂದ ಚಿತ್ರರಂಗದ ಸಾಕಷ್ಟು ನಿರ್ದೇಶಕರು ಹಾಗೂ ನಟರು ಕೊರೊನಾಗೆ ಬಲಿಯಾಗುತ್ತಿದ್ದಾರೆ.
ಚಿತ್ರರಂಗದ ಸಾಕಷ್ಟು ಜನರನ್ನು ಕೊರೊನಾ ವೈರಸ್ ಬಲಿ ತೆಗೆದುಕೊಳ್ಳುತ್ತಿದೆ. ಈಗ ಕಿರುತೆರೆ ನಟಿ ಹಾಗೂ ದೂರದರ್ಶನ ಆ್ಯಂಕರ್ ಕನುಪ್ರಿಯಾ ಕೊವಿಡ್ಗೆ ಬಲಿಯಾಗಿದ್ದಾರೆ. ಅವರು ಮೇರಿ ಕಹಾನಿ, ತೆಸು ಕೆ ಫೂಲ್ ಸೇರಿ ಸಾಕಷ್ಟು ಶೋಗಳನ್ನು ನಡೆಸಿಕೊಟ್ಟಿದ್ದರು. ಬ್ರಹ್ಮ ಕುಮಾರೀಸ್ ಶೋಗಳನ್ನು ನಡೆಸಿಕೊಡುವ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದರು.
ಬ್ರಹ್ಮ ಕುಮಾರಿಯ ಸಿಸ್ಟರ್ ಬಿಕೆ ಶಿವಾನಿ ಅವರು ಟ್ವಿಟರ್ ಮೂಲಕ ಈ ವಿಚಾರ ಬಹಿರಂಗ ಮಾಡಿದ್ದಾರೆ. ಕನುಪ್ರಿಯಾ ಅವರು ಕೊವಿಡ್ಗೆ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಕನುಪ್ರಿಯಾ ಅವರ ಸಾವಿಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಇತ್ತಿಚೆಗೆ ಕನುಪ್ರಿಯಾ ಅವರಿಗೆ ಕೊವಿಡ್ ಸೋಂಕು ಅಂಟಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗಿಲ್ಲ. ಪರಿಣಾಮ ಶನಿವಾರ (ಮೇ 2) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Om Shanti Angels. Last night a very beautiful angel, a chosen instrument of God, Sis. Kanupriya left her mortal coil and moved forward to another magical destiny of radiating happiness and health to millions of souls. Let us meditate and radiate gratitude and blessings to her. pic.twitter.com/LAWTjPTsSb
— BK Shivani (@bkshivani) May 1, 2021
ಕನುಪ್ರಿಯಾ ಕಲಾವಿದೆಯಾಗಿ ಬಣ್ಣದ ಬದುಕು ಆರಂಭಿಸಿದವರು. ಸುಮಾರು 80ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. 50 ಟೆಲಿಫಿಲ್ಮ್ಗಳಲ್ಲಿ ಬಣ್ಣ ಹಚ್ಚಿದ್ದಾರೆ. ನಂತರ ಅವರು ಆ್ಯಂಕರಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಹೀಗಾಗಿ ಅವರಿಗೆ ನಟಿಸಲು ಸಾಕಷ್ಟು ಆಫರ್ಗಳು ಬಂದವು.
ಕೊರೊನಾ ವೈರಸ್ ಭಾರತದಲ್ಲಿ ಮಿತಿ ಮೀರಿ ಹರಡುತ್ತಿದೆ. ಇದರಿಂದ ಚಿತ್ರರಂಗದ ಸಾಕಷ್ಟು ನಿರ್ದೇಶಕರು ಹಾಗೂ ನಟರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಇದು ಚಿತ್ರರಂಗದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ಇದನ್ನೂ ಓದಿ: ಖ್ಯಾತ ನಿರ್ದೇಶಕ-ಸಿನಿಮಾಟೋಗ್ರಫರ್ ಕೆ.ವಿ.ಆನಂದ್ ಅವರು ಕೊರೊನಾ ದಿಂದ ನಿಧನರಾಗಿದ್ದಾರೆ