‘ಕನ್ನಡದ ಶಾಲೆಯಲ್ಲಿ ಓದಿದರೆ ಸಾಕಾಗಲ್ಲ; ಅ ಕಾರಕ್ಕೂ, ಹ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ’: ಅನಿತಾ ಭಟ್​ ಕ್ಲಾಸ್​

‘ಹೆದೆಗಾರಿಕೆ ಅಲ್ಲ, ‘ಎದೆಗಾರಿಕೆ’. ಕನ್ನಡ ಶಾಲೆಯಲ್ಲಿ ಓದಿದರೆ ಸಾಕಾಗೋದಿಲ್ಲ, ಅ ಕಾರಕ್ಕೂ, ಹ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ. ಆಮೇಲೆ ಬೇರೆಯವರನ್ನ ಆಡಿಕೊಳ್ಳಬಹುದಂತೆ’ ಎಂದು ಅನಿತಾ ಭಟ್​ ಖಡಕ್​ ಆಗಿ ಟ್ವೀಟ್​ ಮಾಡಿದ್ದಾರೆ.

‘ಕನ್ನಡದ ಶಾಲೆಯಲ್ಲಿ ಓದಿದರೆ ಸಾಕಾಗಲ್ಲ; ಅ ಕಾರಕ್ಕೂ, ಹ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ’: ಅನಿತಾ ಭಟ್​ ಕ್ಲಾಸ್​
ಅನಿತಾ ಭಟ್​
TV9kannada Web Team

| Edited By: Madan Kumar

Jul 03, 2021 | 9:48 AM

ಸ್ಯಾಂಡಲ್​ವುಡ್​ ನಟಿ ಅನಿತಾ ಭಟ್​ ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಅವರು ಸೋಶಿಯಲ್​ ಮೀಡಿಯಾದಲ್ಲೂ ಹೆಚ್ಚು ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಮಾಡಿರುವ ಒಂದು ಟ್ವೀಟ್​ ಹೆಚ್ಚು ಚರ್ಚೆ ಆಗುತ್ತಿದೆ. ನೆಟ್ಟಿಗರೊಬ್ಬರು ಕನ್ನಡವನ್ನು ತಪ್ಪಾಗಿ ಬರೆದಿರುವ ಬಗ್ಗೆ ಅನಿತಾ ಭಟ್​ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇದಕ್ಕೆ ಹಲವು ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಷ್ಟಕ್ಕೂ ಅನಿತಾ ಮಾಡಿದ ಟ್ವೀಟ್​ ಏನು? ಅದಕ್ಕೆ ಬಂದ ತಕರಾರುಗಳೇನು? ಇಲ್ಲಿದೆ ವಿವರ…

ಕೊರೊನಾ ಕಾಟ ಶುರುವಾದ ಬಳಿಕ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂಬ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದ ಅನಿತಾ ಭಟ್​ ಅವರು, ತಾವು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದು ಎಂದು ಹೇಳಿದ್ದರು. ಅದಕ್ಕೆ ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ನೀವು ಓದಿದ್ದು ಸರ್ಕಾರಿ ಶಾಲೆಯಲ್ಲಿ ಸಂತೋಷ… ಆದರೆ ನಿಮ್ಮ ಮಕ್ಕಳು? ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ. ನನ್ನ ಮಕ್ಕಳನ್ನು ಸಹ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿದ್ದೇನೆ. ಈ ಮಾತನ್ನು ಹೇಳುವ ಹೆದೆಗಾರಿಕೆ ಇರಬೇಕಲ್ಲವೆ’ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇದರಲ್ಲಿ ‘ಹೆದೆಗಾರಿಕೆ’ ಎಂದು ಬರೆದಿರುವುದಕ್ಕೆ ಅನಿತಾ ತಿರುಗೇಟು ನೀಡಿದ್ದಾರೆ.

‘ಹೆದೆಗಾರಿಕೆ ಅಲ್ಲ, ‘ಎದೆಗಾರಿಕೆ’. ಕನ್ನಡ ಶಾಲೆಯಲ್ಲಿ ಓದಿದರೆ ಸಾಕಾಗೋದಿಲ್ಲ, ಅ ಕಾರಕ್ಕೂ, ಹ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ. ಆಮೇಲೆ ಬೇರೆಯವರನ್ನ ಆಡಿಕೊಳ್ಳಬಹುದಂತೆ. ನಮಸ್ಕಾರ’ ಎಂದು ಅನಿತಾ ಟ್ವೀಟ್​ ಮಾಡಿದ್ದಾರೆ. ಈ ಕುರಿತಂತೆ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಮ್ಮ ಕೊಳ್ಳೇಗಾಲ, ಮಳವಳ್ಳಿ ಕಡೆ ಹ ಹಾಗೂ ಅ ನಡುವೆ ವ್ಯತ್ಯಾಸವಿಲ್ಲ. It is interchangeable. ಕನ್ನಡವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತೆ. ಗ್ರಾಂಥಿಕ ಕನ್ನಡವೊಂದೇ ಕನ್ನಡ ಅಲ್ಲ’ ಎಂಬ ಕಮೆಂಟ್​ ಕೂಡ ಬಂದಿದೆ.

‘ಅ ಕಾರಕ್ಕೆ ಅ ಕಾರವನ್ನೇ ಉಪಯೋಗಿಸೋದು ಗ್ರಾಂಥಿಕ ಕನ್ನಡ ಅಲ್ಲ. ಯಾವುದೇ ಪ್ರದೇಶಕ್ಕೆ ಹೋದರು slang ಹಾಗೂ accent ಬದಲಾಗತ್ತೆಯೇ ಹೊರತು ವ್ಯಾಕರಣವಾಗಲಿ, ಲಿಪಿಯಾಗಲಿ, ಅಕ್ಷರಗಳಾಗಲಿ ಬದಲಾಗುವುದಿಲ್ಲ’ ಎಂದು ಅನಿತಾ ಭಟ್​ ಉತ್ತರ ನೀಡಿದ್ದಾರೆ. ಈ ಬಗ್ಗೆ ಚರ್ಚೆ ಮುಂದುವರಿದಿದೆ.

ಇದನ್ನೂ ಓದಿ:

Kannada Language: ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada