AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್​​ ಖಾನ್​ ಸಂಬಂಧಿ ಇಮ್ರಾನ್​ ಖಾನ್​ ಮೂರು ಮತ್ತೊಂದು ಸಿನಿಮಾ ಮಾಡಿ ನಟನೆಗೆ ಗುಡ್​ಬೈ ಹೇಳಿದ್ದು ಯಾಕೆ?

ಬ್ಯಾಕ್​ ಟು ಬ್ಯಾಕ್​ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಇಮ್ರಾನ್​ ಖಾನ್​ ನಟನೆಗೆ ಗುಡ್​ಬೈ ಹೇಳುವ ನಿರ್ಧಾರಕ್ಕೆ ಬಂದರು. ಆ ತೀರ್ಮಾನದಿಂದಾಗಿ ‘ಡೆಲ್ಲಿ ಬೆಲ್ಲಿ’ ಚಿತ್ರದ ನಿರ್ದೇಶಕ ಅಭಿನಯ್​ ಡಿಯೋ ಅವರಿಗೆ ಬೇಸರ ಆಗಿತ್ತು.

ಆಮಿರ್​​ ಖಾನ್​ ಸಂಬಂಧಿ ಇಮ್ರಾನ್​ ಖಾನ್​ ಮೂರು ಮತ್ತೊಂದು ಸಿನಿಮಾ ಮಾಡಿ ನಟನೆಗೆ ಗುಡ್​ಬೈ ಹೇಳಿದ್ದು ಯಾಕೆ?
‘ಡೆಲ್ಲಿ ಬೆಲ್ಲಿ’ ಸಿನಿಮಾದಲ್ಲಿ ನಟ ಇಮ್ರಾನ್​ ಖಾನ್​
TV9 Web
| Edited By: |

Updated on: Jul 02, 2021 | 2:03 PM

Share

ಫಿಲ್ಮಿ ಕುಟುಂಬದ ಹಿನ್ನೆಲೆ ಇರುವ ಯುವಕ-ಯುವತಿಯರು ಸುಲಭವಾಗಿ ಚಿತ್ರರಂಗಕ್ಕೆ ಬಂದು ಬಿಡಬಹುದು. ಆದರೆ ಯಶಸ್ಸು ಗಳಿಸುವುದು ಸುಲಭ ಅಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸ. ಬಾಲಿವುಡ್​ ನಟ ಆಮಿರ್​ ಖಾನ್​ ಅವರ ಸಂಬಂಧಿ ಇಮ್ರಾನ್​ ಖಾನ್​ ವಿಚಾರದಲ್ಲಿ ಹಾಗೆಯೇ ಆಯಿತು. ಒಂದೆರಡು ಸಿನಿಮಾಗಳಲ್ಲಿ ಯಶಸ್ಸು ಪಡೆದ ಅವರು ನಂತರ ನಟನೆಗೆ ವಿದಾಯ ಹೇಳಬೇಕಾಯಿತು. ಆ ಬಗ್ಗೆ ‘ಡೆಲ್ಲಿ ಬೆಲ್ಲಿ’ ಚಿತ್ರದ ನಿರ್ದೇಶಕ ಅಭಿನಯ್​ ಡಿಯೋ ಮಾತನಾಡಿದ್ದಾರೆ.

2011ರ ಜು.1ರಂದು ತೆರೆಗೆ ಬಂದ ‘ಡೆಲ್ಲಿ ಬೆಲ್ಲಿ’ ಸಿನಿಮಾ ಸಖತ್​ ಸೌಂಡು ಮಾಡಿತ್ತು. ತುಂಬ ಬೋಲ್ಡ್​ ಆದಂತಹ ಹಾಡುಗಳು, ಡಿಫರೆಂಟ್​ ಆದಂತಹ ಕಥೆ ಮುಂತಾದ ವಿಚಾರಗಳಿಂದ ಆ ಚಿತ್ರ ಜನಮನ ಸೆಳೆದಿತ್ತು. ಆ ಬಳಿಕ ‘ಮೇರೆ ಬ್ರದರ್​ ಕಿ ದುಲ್ಹನ್​’, ‘ಏಕ್​ ಮೇ ಔರ್ ಏಕ್​ ತು’ ಮುಂತಾದ ಚಿತ್ರಗಳಲ್ಲಿ ಇಮ್ರಾನ್​ ಖಾನ್​ ನಟಿಸಿದರು. ಆ ನಂತರದ ಸಿನಿಮಾಗಳಿಂದ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲೇ ಇಲ್ಲ.

ಬ್ಯಾಕ್​ ಟು ಬ್ಯಾಕ್​ ಸಿನಿಮಾದಲ್ಲಿ ಕಾಣಿಸಿಕೊಂಡರೂ ಕೂಡ ಇಮ್ರಾನ್​ ಗೆಲ್ಲಲಿಲ್ಲ. ಕಡೆಗೆ ಅವರು ನಟನೆಗೆ ಗುಡ್​ಬೈ ಹೇಳುವ ನಿರ್ಧಾರಕ್ಕೆ ಬಂದರು. ನಟನೆ ಬಿಟ್ಟು ನಿರ್ದೇಶನದ ಕಡೆಗೆ ಅವರು ಆಸಕ್ತಿ ತೋರಿಸಿದರು. ಅವರು ತೆಗೆದುಕೊಂಡ ಆ ತೀರ್ಮಾನದಿಂದಾಗಿ ‘ಡೆಲ್ಲಿ ಬೆಲ್ಲಿ’ ಚಿತ್ರದ ನಿರ್ದೇಶಕ ಅಭಿನಯ್​ ಡಿಯೋ ಅವರಿಗೆ ಬೇಸರ ಆಗಿತ್ತು. ‘ಡೆಲ್ಲಿ ಬೆಲ್ಲಿ’ ಸಿನಿಮಾ 10 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರು ಇ್ರಮಾನ್​ ಬಗ್ಗೆ ಮಾತನಾಡಿದ್ದಾರೆ.

‘ಇಮ್ರಾನ್​ ಬಗ್ಗೆ ನಾನು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಅವರು ನಟನೆಗೆ ವಿದಾಯ ಹೇಳಿದಾಗ ನನಗೆ ಬೇಸರ ಆಗಿತ್ತು. ಅವರಂಥ ಒಳ್ಳೆಯ ವ್ಯಕ್ತಿ ಇಂಡಸ್ಟ್ರಿಯಲ್ಲಿ ಇರಬೇಕಾಗಿತ್ತು. ಕ್ಯಾಮರಾ ಮುಂದೆ ಇರಲಿ ಅಥವಾ ಕ್ಯಾಮರಾ ಹಿಂದೆ ಇರಲಿ, ಅವರೊಬ್ಬ ಪ್ರತಿಭಾವಂತ. ಫಿಲ್ಮ್​ ಮೇಕಿಂಗ್​ ಬಗ್ಗೆ ತರಬೇತಿ ಪಡೆದುಕೊಂಡವರು. ಅವರಿಗೆ ಸಾಧ್ಯವಾಗುವ ಯಾವುದೇ ಪ್ರಕಾರದಲ್ಲಿ ಅವರು ತಮ್ಮ ಕ್ರಿಯೇಟಿವಿಟಿ ತೋರಿಸಬೇಕು. ಅವರು ಇನ್ಮುಂದೆ ನಟಿಸುವುದಿಲ್ಲ ಎಂದು ಹೇಳಿದಾಗ ನನಗೆ ಬಹಳ ಬೇಸರ ಆಗಿತ್ತು’ ಎಂದು ಅಭಿನಯ್​ ಡಿಯೋ ಹೇಳಿದ್ದಾರೆ.

ಇದನ್ನೂ ಓದಿ:

ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ಎಲ್ಲ ದೋಚಿದ ಖದೀಮರು!
ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ಎಲ್ಲ ದೋಚಿದ ಖದೀಮರು!