ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ

ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ
ಕಂಗನಾ-ಯಾಮಿ

ಕನ್ನಡದಲ್ಲಿ ‘ಉಲ್ಲಾಸ ಉತ್ಸಾಹೌ ಸಿನಿಮಾ ಮಾಡಿದ ಬಳಿಕ ಬೇರೆ ಬೇರೆ ಭಾಷೆಗಳಿಂದ ಯಾಮಿ ಗೌತಮ್​ ಅವರಿಗೆ ಆಫರ್​ಗಳು ಬರಲಾರಂಭಿಸಿದವು. ಸದ್ಯ ಅವರು ಹಿಂದಿಯ ‘ಭೂತ್​ ಪೊಲೀಸ್’ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Rajesh Duggumane

|

Jun 06, 2021 | 9:57 PM

‘ಉಲ್ಲಾಸ ಉತ್ಸಾಹ’ ಸಿನಿಮಾದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಯಾಮಿ ಗೌತಮ್​ ಅವರು ಸದ್ದಿಲ್ಲದೇ ಹಸೆಮಣೆ ಏರಿದ್ದರು. ಬಾಲಿವುಡ್​ನ ‘ಉರಿ’ ಚಿತ್ರದ ನಿರ್ದೇಶಕ ಆದಿತ್ಯ ಧಾರ್​ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಯಾಮಿ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಮಾಡಿದ್ದಾರೆ. ಅವರು ಹಂಚಿಕೊಂಡ ಫೋಟೋದ ಕಮೆಂಟ್​ ಬಾಕ್ಸ್​ನಲ್ಲಿ ಸಣ್ಣ ಕಿತ್ತಾಟವೊಂದು ನಡೆದಿದೆ. ಇದಕ್ಕೆ ಕಾರಣ ನಟಿ ಕಂಗನಾ ರಣಾವತ್​.  

ಮದುವೆ ಫೋಟೋಗಳನ್ನು ಹಂಚಿಕೊಂಡಿರುವ ಯಾಮಿ ಗೌತಮ್​ ಅವರು ಎಲ್ಲರ ಆಶೀರ್ವಾದ ಕೋರಿದ್ದರು. ‘ಕುಟುಂಬದವರ ಆಶೀರ್ವಾದದೊಂದಿಗೆ ನಾವು ಇಂದು ಮದುವೆ ಆದೆವು. ಕೇವಲ ನಮ್ಮ ಆಪ್ತರ ಸಮ್ಮುಖದಲ್ಲಿ ಖಾಸಗಿಯಾಗಿ ಈ ವಿವಾಹ ಸಮಾರಂಭ ನೆರವೇರಿತು. ಪ್ರೀತಿ-ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂದು ಕೋರಿದ್ದರು. ಅಲ್ಲದೆ, ಭಾನುವಾರ ಸಾಲು ಸಾಲು ಫೋಟೋಗಳನ್ನು ಯಾಮಿ ಹಂಚಿಕೊಂಡಿದ್ದರು.

ಈ ಫೋಟೋಗೆ ಸಾಕಷ್ಟು ಸೆಲೆಬ್ರಿಟಿಗಳು ಕಮೆಂಟ್​ ಮಾಡಿ ಶುಭಾಶಯ ತಿಳಿಸಿದ್ದಾರೆ. ಬಾಲಿವುಡ್​ ನಟ ವಿಕ್ರಾಂತ್​ ಮಾಸ್ಸಿ ಕೂಡ ಇದಕ್ಕೆ ಕಮೆಂಟ್​ ಮಾಡಿ ನಗೆಚಟಾಕಿ ಹಾರಿಸಿದ್ದಾರೆ. ‘ರಾಧೆ ಮಾ ಅವರಂತೆ ಶುದ್ಧ ಮತ್ತು ಧರ್ಮನಿಷ್ಠರಾಗಿ ಕಾಣುತ್ತಿದ್ದೀರಿ’ ಎಂದು ಯಾಮಿ ಫೋಟೋಗೆ ಅವರು ಕಮೆಂಟ್​ ಮಾಡಿದ್ದಾರೆ. ಈ ಕಮೆಂಟ್​ ಓದಿದ ಕಂಗನಾ ಸಿಟ್ಟಾಗಿದ್ದಾರೆ, ‘ಈ ಜಿರಲೆ ಎಲ್ಲಿಂದ ಬಂತು? ಯಾರಾದರೂ ನನ್ನ ಚಪ್ಪಲಿ  ತನ್ನಿ ಎಂದು ಹೇಳುವ ಮೂಲಕ ವಿವಾದ ಹೊತ್ತಿಸಿದ್ದಾರೆ. ಈ ಸ್ಕ್ರೀನ್​ಶಾಟ್​ಗಳು ಸಾಕಷ್ಟು ವೈರಲ್​ ಆಗಿದೆ.

ಕನ್ನಡದಲ್ಲಿ ‘ಉಲ್ಲಾಸ ಉತ್ಸಾಹ’ ಸಿನಿಮಾ ಮಾಡಿದ ಬಳಿಕ ಬೇರೆ ಬೇರೆ ಭಾಷೆಗಳಿಂದ ಯಾಮಿ ಗೌತಮ್​ ಅವರಿಗೆ ಆಫರ್​ಗಳು ಬರಲಾರಂಭಿಸಿದವು. ಸದ್ಯ ಅವರು ಹಿಂದಿಯ ‘ಭೂತ್​ ಪೊಲೀಸ್’ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಪ್ರಣಿತಾ ಕೂಡ ಇದೇ ರೀತಿ ಗುಟ್ಟಾಗಿ ಮದುವೆ ಆಗಿದ್ದರು.

ಇದನ್ನೂ ಓದಿ: ‘ಉರಿ’ ನಿರ್ದೇಶಕನ ಜೊತೆ ಗುಟ್ಟಾಗಿ ಮದುವೆಯಾದ ‘ಉಲ್ಲಾಸ ಉತ್ಸಾಹ’ ಚಿತ್ರದ ನಟಿ ಯಾಮಿ ಗೌತಮ್​

Follow us on

Related Stories

Most Read Stories

Click on your DTH Provider to Add TV9 Kannada