Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಂಕರ್​ ನಾಗ್​ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ’; ಬಾಲಿವುಡ್​ ನಟಿ ಭಾವುಕ ನುಡಿ

ಶಂಕರ್​ ನಾಗ್​ ಹಿಂದಿಯ ‘ಉತ್ಸವ್’​ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರವನ್ನು ಗಿರೀಶ್​ ಕಾರ್ನಾಡ್​ ನಿರ್ದೇಶನ ಮಾಡಿದ್ದರು. ಶಶಿ ಕಪೂರ್​ ಸಿನಿಮಾ ನಿರ್ಮಾಣ ಮಾಡಿದ್ದರು. ರೇಖಾ ಚಿತ್ರದ ನಾಯಕಿ.

‘ಶಂಕರ್​ ನಾಗ್​ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ’; ಬಾಲಿವುಡ್​ ನಟಿ ಭಾವುಕ ನುಡಿ
ನೀನಾ ಗುಪ್ತಾ, ಶಂಕರ್​ ನಾಗ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Jul 02, 2021 | 4:15 PM

ಸ್ಯಾಂಡಲ್​ವುಡ್​ ಕಂಡ ಓರ್ವ ಅತ್ಯದ್ಭುತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಂದರೆ ಅದು ಶಂಕರ್​ನಾಗ್​. ಕಡಿಮೆ ಅವಧಿಯಲ್ಲಿ ಅವರು ಸಾಕಷ್ಟು ಸಿನಿಮಾಗಳನ್ನು ನೀಡಿದ್ದಾರೆ. ಅವರನ್ನು ಕನ್ನಡ ಫಿಲ್ಮ್​ ಇಂಡಸ್ಟ್ರಿ ಎಂದಿಗೂ ನೆನಪಿಸಿಕೊಳ್ಳುತ್ತದೆ. ಈಗ ಬಾಲಿವುಡ್​ ನಟಿ ನೀನಾ ಗುಪ್ತಾ ಅವರು ಸಾಮಾಜಿಕ ಜಾಲತಾಣದಲ್ಲಿ ಶಂಕರ್​ ನಾಗ್​ ಜತೆ ಇರುವ ಫೋಟೋ ಹಂಚಿಕೊಂಡು ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಶಂಕರ್​ ನಾಗ್​ ಹಿಂದಿಯ ‘ಉತ್ಸವ್’​ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಗಿರೀಶ್​ ಕಾರ್ನಾಡ್​ ನಿರ್ದೇಶನ ಮಾಡಿದ್ದರು. ಶಶಿ ಕಪೂರ್​ ಸಿನಿಮಾ ನಿರ್ಮಾಣ ಮಾಡಿದ್ದರು. ರೇಖಾ ಚಿತ್ರದ ನಾಯಕಿ. ಆ ಸಿನಿಮಾದಲ್ಲಿ ನೀನಾ ಗುಪ್ತಾ ಕೂಡ ನಟಿಸಿದ್ದರು. ಸಿನಿಮಾದಲ್ಲಿ ಬರುವ ದೃಶ್ಯವೊಂದರ ಪೋಸ್ಟ್​ ಹಾಕಿ ಶಂಕರ್​ ನಾಗ್​ ಅವರನ್ನು ನೀನಾ ನೆಪಿಸಿಕೊಂಡಿದ್ದಾರೆ.

‘ಉತ್ಸವ್​ ಸಿನಿಮಾದಲ್ಲಿ ಶಂಕರ್​ ನಾಗ್​ ಜತೆ ನಿಂತಿರುವ ಸ್ಟಿಲ್​ ಇದು. ನಿಮ್ಮನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಶಂಕರ್​ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ’ ಎಂದು ಭಾವುಕರಾಗಿ  ನೀನಾ ಬರೆದುಕೊಂಡಿದ್ದಾರೆ.

View this post on Instagram

A post shared by Neena Gupta (@neena_gupta)

ನೀನಾ ಗುಪ್ತಾ ಅವರ ‘ಸಚ್​ ಕಹೂ ತೋ’ ಆಟೋಬಯೋಗ್ರಫಿ ಇತ್ತೀಚೆಗೆ ಬಿಡುಗಡೆ ಆಗಿತ್ತು. ಈ ಪುಸ್ತಕದಲ್ಲೂ ಶಂಕರ್​ ನಾಗ್​ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘1984ರಲ್ಲಿ ಶಂಕರ್​ ನಾಗ್​ ಅವರನ್ನು ಉತ್ಸವ್​ ಸೆಟ್​ನಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದೆ. ಅವರು ಓರ್ವ ಅತ್ಯುತ್ತಮ ಗೆಳೆಯ. ಒಳ್ಳೆಯ ವ್ಯಕ್ತಿ. ಅವರು ತುಂಬಾನೇ ಜನಪ್ರಿಯತೆ ಹೊಂದಿದ್ದರು. ಆದರೆ, ಅವರು ಎಲ್ಲರ ಜತೆ ಬೆರೆಯುತ್ತಿದ್ದರು. ಇದು ಅವರ ದೊಡ್ಡ ಗುಣ’ ಎಂದು ನೀನಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅತಿ ಕಡಿಮೆ ವಯಸ್ಸಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ ಖ್ಯಾತಿ ಶಂಕರ್ ​ನಾಗ್ ಅವರಿಗಿದೆ. ‘ಜೋಕುಮಾರಸ್ವಾಮಿ’ ಆ ಕಾಲಕ್ಕೆ ಭಾರಿ ಯಶಸ್ಸು ಕಂಡ ನಾಟಕ. ಈ ನಾಟಕವನ್ನು ಸಿನಿಮಾ ಮಾಡಬೇಕು ಎನ್ನುವ ಕನಸು ಶಂಕರ್ ​ನಾಗ್ ಅವರದ್ದಾಗಿತ್ತು. ಆ ಸಲುವಾಗಿ ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರಕ್ಕೆ ಹೋಗಬೇಕಿತ್ತು. 1990ರಂದು ಸೆ.30ರಂದು ಶಂಕರ್​ ನಾಗ್ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಮಗಳು ಕಾವ್ಯಾ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ದಾವಣಗೆರೆಯ ಅನಗೋಡು ಬಳಿ ಲಾರಿಗೆ ಶಂಕರ್ ನಾಗ್‌ ಕಾರು ಡಿಕ್ಕಿಯಾಗಿತ್ತು. ಘಟನೆಯಲ್ಲಿ ಶಂಕರ್ ನಾಗ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಇದನ್ನೂ ಓದಿ: 

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ