‘ಸ್ಕ್ಯಾಮ್ 1992’ ಬಳಿಕ ಮತ್ತೊಂದು ಮಹತ್ವದ ಪ್ರಾಜೆಕ್ಟ್ಗೆ ಕೈ ಹಾಕಿದ ಪ್ರತೀಕ್ ಗಾಂಧಿ
ರಾಜಶೇಖರ್ ರೆಡ್ಡಿ ಮಗ, ಆಂಧ್ರದ ಮುಖ್ಯಮಂತ್ರಿ ವೈ.ಎಸ್. ಜಗನ್ ಅವರ ಜೀವನ ಆಧರಿಸಿ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ. ಈ ಬಯೋಪಿಕ್ನಲ್ಲಿ ಪ್ರತೀಕ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
‘ಸ್ಕ್ಯಾಮ್ 1992’ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದರಲ್ಲಿ ನಟ ಪ್ರತೀಕ್ ಗಾಂಧಿ ಅವರು ಹರ್ಷದ್ ಮೆಹ್ತಾ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಭಾರತೀಯ ಸ್ಟಾಕ್ ಮಾರ್ಕೆಟ್ನಲ್ಲಿ ನಡೆದ ಸ್ಕ್ಯಾಮ್ ಆಧರಿಸಿ ಈ ವೆಬ್ ಸೀರಿಸ್ ಸಿದ್ಧಗೊಂಡಿದೆ. ಈ ವೆಬ್ ಸೀರಿಸ್ ಹಿಟ್ ಆದ ನಂತರದಲ್ಲಿ ಪ್ರತೀಕ್ ಗಾಂಧಿಗೆ ಆಫರ್ಗಳು ಹೆಚ್ಚಿವೆ. ಈಗ ಅವರು ಮಹತ್ವದ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.
ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಜೀವನ ಆಧರಿಸಿ ಮಾಹಿ ವಿ. ರಾಘವ ಅವರು ಬಯೋಪಿಕ್ ಸಿದ್ಧಪಡಿಸಿದ್ದರು. ‘ಯಾತ್ರಾ’ ಹೆಸರಿನಲ್ಲಿ ತೆರೆಗೆ ಬಂದ ಈ ಸಿನಿಮಾ ಯಶಸ್ಸು ಗಳಿಸಿತ್ತು. ಈಗ ಅವರು ರಾಜಶೇಖರ್ ರೆಡ್ಡಿ ಮಗ, ಆಂಧ್ರದ ಮುಖ್ಯಮಂತ್ರಿ ವೈ.ಎಸ್. ಜಗನ್ ಅವರ ಜೀವನ ಆಧರಿಸಿ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ.
ಜಗನ್ ಪಾತ್ರಕ್ಕೆ ಯಾರು ಸೂಕ್ತ ಎನ್ನುವ ಹುಡುಕಾಟದಲ್ಲಿದ್ದಾಗ ಮಾಹಿ ಅವರಿಗೆ ಸಿಕ್ಕಿದ್ದು ಪ್ರತೀಕ್ ಗಾಂಧಿ. ‘ನಿರ್ದೇಶಕರು ಪ್ರತೀಕ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಬಯೋಪಿಕ್ ನೆರೇಷನ್ ಪ್ರತೀಕ್ಗೆ ಇಷ್ಟವಾಗಿದೆ. ಅವರು ಜಗನ್ ಪಾತ್ರ ಮಾಡೋಕೆ ಒಪ್ಪಿಗೆ ನೀಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್ ನಟನ ಆಯ್ಕೆ ನಡೆದಿದೆ’ ಎಂದು ಮೂಲಗಳು ಹೇಳಿವೆ.
ಜಗನ್ ಅವರು ತಮ್ಮ ಜನಪರ ಕೆಲಸದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಅವರ ಬಯೋಪಿಕ್ ಸಿದ್ಧಗೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇನ್ನು, ಪ್ರತೀಕ್ ಈ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲಿದ್ದಾರೆ ಎನ್ನುವ ಭರವಸೆಯೂ ಅಭಿಮಾನಿಗಳಲ್ಲಿದೆ. ‘ರಾವಣ್ ಲೀಲಾ’ ಸಿನಿಮಾದಲ್ಲಿ ಪ್ರತೀಕ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಗಜ್ಜರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಅಭಿಮಾನಿಗಳಿಗೆ ಕಾಣಿಸಿಕೊಂಡ ರಣವೀರ್ ಸಿಂಗ್; ಇಲ್ಲೊಂದು ಅಚ್ಚರಿಯ ವಿಚಾರ ಗಮನಿಸಿದ್ರಾ?
ತೆರೆಯ ಮೇಲೆ ಬರಲಿದೆ ಅಬ್ದುಲ್ ಕರೀಂ ತೆಲಗಿ ಹಗರಣ; ಸ್ಕ್ಯಾಮ್ 1992 ನಿರ್ದೇಶಕರಿಂದಲೇ ಸ್ಕ್ಯಾಮ್ 2003
Published On - 6:28 pm, Fri, 2 July 21