ಮದುವೆ ಆದ ಕೆಲವೇ ದಿನಗಳಲ್ಲಿ ನಟಿ ಯಾಮಿ ಗೌತಮ್​ಗೆ ಶಾಕ್​; ಸಮನ್ಸ್​ ನೀಡಿದ ಇಡಿ

ಮದುವೆ ಆದ ಕೆಲವೇ ದಿನಗಳಲ್ಲಿ ನಟಿ ಯಾಮಿ ಗೌತಮ್​ಗೆ ಶಾಕ್​; ಸಮನ್ಸ್​ ನೀಡಿದ ಇಡಿ
ಮದುವೆ ಆದ ಕೆಲವೇ ದಿನಗಳಲ್ಲಿ ನಟಿ ಯಾಮಿ ಗೌತಮ್​ಗೆ ಶಾಕ್

ಜೂ.4ರಂದು ಬಾಲಿವುಡ್​ ನಿರ್ದೇಶಕ ಆದಿತ್ಯ ಧಾರ್​ ಜೊತೆ ಯಾಮಿ ಗೌತಮ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಆಗಿ ಒಂದು ತಿಂಗಳು ಕಳೆಯುವುದರೊಳಗೆ ಅವರ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ.

TV9kannada Web Team

| Edited By: Madan Kumar

Jul 02, 2021 | 7:28 PM

ಕೆಲವೇ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ಯಾಮಿ ಗೌತಮ್​ ಅವರಿಗೆ ಈಗ ಸಂಕಷ್ಟ ಶುರುವಾಗಿದೆ. ಲಾಕ್​ಡೌನ್​ ಕಾರಣದಿಂದ ತುಂಬ ಸರಳವಾಗಿ ಯಾಮಿ ಮದುವೆ ಆಗಿದ್ದರು. ಅದರ ಬೆನ್ನಲ್ಲೇ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಅವರ ಮೇಲೆ ಕೇಳಿಬಂದಿದೆ. ಈ ಸಂಬಂಧ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್​ ನೀಡಿದೆ. ಕೋಟ್ಯಂತರ ರೂ. ಹಣವನ್ನು ಅಕ್ರಮವಾಗಿ ಯಾಮಿ ಗೌತಮ್​ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಯಮ ಉಲ್ಲಂಘಿಸಿ ಯಾಮಿ ಗೌತಮ್​ ಬ್ಯಾಂಕ್​ ಖಾತೆಯಿಂದ 1.5 ಕೋಟಿ ರೂ. ಹಣ ಅಕ್ರಮ ವರ್ಗಾವಣೆ ಆಗಿರುವುದು ತಿಳಿದುಬಂದಿದೆ. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ. ಈ ಹಿಂದೆ ಕೂಡ ಅವರಿಗೆ ಸಮನ್ಸ್​ ನೀಡಲಾಗಿದ್ದರೂ ಅವರು ವಿಚಾರಣೆಗೆ ಬಂದಿರಲಿಲ್ಲ ಎನ್ನಲಾಗಿದೆ. ಆದ್ದರಿಂದ ಎರಡನೇ ಬಾರಿಗೆ ನೋಟಿಸ್​ ನೀಡಲಾಗಿದ್ದು, ಜು.7ರಂದು ಅವರು ಅಧಿಕಾರಿಗಳ ಎದುರು ಹಾಜರಾಗಬೇಕಿದೆ.

ಜೂ.4ರಂದು ಬಾಲಿವುಡ್​ ನಿರ್ದೇಶಕ ಆದಿತ್ಯ ಧಾರ್​ ಜೊತೆ ಯಾಮಿ ಗೌತಮ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ‘ಕುಟುಂಬದವರ ಆಶೀರ್ವಾದದೊಂದಿಗೆ ನಾವು ಇಂದು ಮದುವೆ ಆದೆವು. ಕೇವಲ ನಮ್ಮ ಆಪ್ತರ ಸಮ್ಮುಖದಲ್ಲಿ ಖಾಸಗಿಯಾಗಿ ಈ ವಿವಾಹ ಸಮಾರಂಭ ನೆರವೇರಿತು. ಪ್ರೀತಿ-ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂದು ಅವರು ತಿಳಿಸಿದ್ದರು. ಮದುವೆ ಆಗಿ ಒಂದು ತಿಂಗಳು ಕಳೆಯುವುದರೊಳಗೆ ಅವರ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ.

ಕನ್ನಡದ ‘ಉಲ್ಲಾಸ ಉತ್ಸಾಹ’ ಚಿತ್ರವು ಯಾಮಿ ಗೌತಮ್​ ನಟಿಸಿದ ಮೊದಲ ಸಿನಿಮಾ. ಆ ಬಳಿಕ ಅವರು ಪರಭಾಷೆಯಲ್ಲಿ ಫೇಮಸ್​ ಆದರು. 2019ರಲ್ಲಿ ತೆರೆಕಂಡ ಬಾಲಿವುಡ್​ನ ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಸಿನಿಮಾ ದೊಡ್ಡ ಹಿಟ್ ಆಯಿತು. ಆ ಚಿತ್ರದಿಂದ ಆದಿತ್ಯ ಧಾರ್​ ಅವರ ಜನಪ್ರಿಯತೆ ಹೆಚ್ಚಿತು. ವಿಕ್ಕಿ ಕೌಶಾಲ್​ ನಾಯಕನಾಗಿದ್ದ ಆ ಚಿತ್ರದಲ್ಲಿ ಯಾಮಿ ಗೌತಮ್​ ಅವರು ರಾ ಏಜೆಂಟ್​ ಪಾತ್ರ ಮಾಡಿದ್ದರು. ಆಗಲೇ ಆದಿತ್ಯ ಮತ್ತು ಯಾಮಿ ನಡುವೆ ಗೆಳೆತನ ಬೆಳೆದಿತ್ತು.

ಇದನ್ನೂ ಓದಿ:

ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ

ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?

Follow us on

Related Stories

Most Read Stories

Click on your DTH Provider to Add TV9 Kannada